ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್ಟಿಆರ್-ಹೃತಿಕ್ ರೋಷನ್ ಜುಗಲ್ಬಂಧಿ
war 2 movie review: ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ಅರ್ಲಿ ಮಾರ್ನಿಂಗ್ ಶೋ ನೋಡಿದವರು, ವಿದೇಶದಲ್ಲಿ ಸಿನಿಮಾ ನೋಡಿದವರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ‘ವಾರ್ 2’ ಸಿನಿಮಾದ ಟ್ವಿಟ್ಟರ್ ವಿಮರ್ಶೆ.

ಬಾಲಿವುಡ್ (Bollywood) ಹಾಗೂ ದಕ್ಷಿಣ ಭಾರತದ ಇಬ್ಬರು ಸೂಪರ್ ಸ್ಟಾರ್ ನಟರು ಮೊದಲ ಬಾರಿ ಒಟ್ಟಿಗೆ ತೆರೆ ಹಂಚಿಕೊಂಡಿರುವ ‘ವಾರ್ 2’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾಕ್ಕೆ ‘ವಾರ್ 2’ ಸ್ಪರ್ಧೆ ಒಡ್ಡಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳನ್ನು ಆಯೋಜಿಸಲಾಗಿದ್ದು, ಜನ ಈಗಾಗಲೇ ಸಿನಿಮಾ ನೋಡಿ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಜನರಿಗೆ ಸಿನಿಮಾ ಬಗ್ಗೆ ಅನಿಸಿದ್ದೇನು? ಇಲ್ಲಿದೆ ನೋಡಿ ‘ವಾರ್ 2’ ಟ್ವಿಟ್ಟರ್ ವಿಮರ್ಶೆ…
Tiger Blockbuster kotteysadu🔥🔥 Carrier Best acting and looks🥵 Faceoffff scenes are mad🙇♂️ Bgm aitey peaks🔥🙏 Emotions are very well expressed👌👌 Tiger Rocks once again ❤️🔥🔥🙇♂️#war2 #War2Review #BlockbusterWar2 #JrNTR𓃵 pic.twitter.com/T8TUNhbrlM
— hemanth🦁 (@hemo9644) August 14, 2025
‘ಜೂ ಎನ್ಟಿಆರ್ ಅದ್ಭುತವಾಗಿ ನಟಿಸಿದ್ದಾರೆ. ಜೂ ಎನ್ಟಿಆರ್ ತನ್ನ ವೃತ್ತಿ ಜೀವನದ ಅದ್ಭುತ ನಟನೆಯನ್ನು ಸಿನಿಮಾನಲ್ಲಿ ನೀಡಿದ್ದಾರೆ. ಇಬ್ಬರು ಸ್ಟಾರ್ ನಟರು ಎದುರು-ಬದುರಾಗುವ ದೃಶ್ಯಗಳು ಅದ್ಭುತವಾಗಿವೆ. ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಎಮೋಷನ್ ಸೀನ್ಗಳು ಸಹ ಬಹಳ ಚೆನ್ನಾಗಿ ಮೂಡಿ ಬಂದಿವೆ. ಟೈಗರ್ ಮತ್ತೊಮ್ಮೆ ಗೆದ್ದಿದ್ದಾನೆ’ ಎಂದು ಹೆಮಂತ್ ಟ್ವೀಟ್ ಮಾಡಿದ್ದಾರೆ.
Interval of #War2, watching the first show in the UK and what a film ! Haven’t seen such a scale for any bollywood film yet. The action, the class and the mass packed in the best manner. A whole new chapter for Spy Universe! Breaking conventions with stalwarts 🔥 #War2Review. pic.twitter.com/wXwFdHSJpF
— Neel (@iamn3el) August 13, 2025
ಬ್ರಿಟನ್ನಲ್ಲಿ ‘ವಾರ್ 2’ ಸಿನಿಮಾ ನೋಡಿದ ನೀಲ್ ಎಂಬುವರು ಟ್ವೀಟ್ ಮಾಡಿ, ‘ಇಂಟರ್ವೆಲ್ ವರೆಗೆ ಸಿನಿಮಾ ಮುಗಿದಿದೆ. ಇಷ್ಟು ದೊಡ್ಡ ಸ್ಕೇಲ್ನಲ್ಲಿ ನಿರ್ಮಾಣವಾದ ಯಾವ ಬಾಲಿವುಡ್ ಸಿನಿಮಾ ಅನ್ನೂ ನಾನು ನೋಡಿಲ್ಲ. ಆಕ್ಷನ್ ದೃಶ್ಯಗಳು, ಮಾಸ್ ಸೀಕ್ವೆನ್ಸ್ಗಳು ಅತ್ಯದ್ಭುತವಾಗಿವೆ. ಯಶ್ರಾಜ್ ಫಿಲಮ್ಸ್ನ ಸ್ಪೈ ಸಿನಿಮಾಗಳ ಪಟ್ಟಿಯಲ್ಲಿ ಇದು ಅತ್ಯದ್ಭುತ. ಸಿನಿಮಾದ ಮೊದಲಾರ್ಧದಲ್ಲಿ ಸಾಕಷ್ಟು ಟ್ವಿಸ್ಟ್, ಟರ್ನ್ಗಳು, ಆಕ್ಷನ್ ದೃಶ್ಯಗಳು ಮತ್ತು ಕುಣಿಯುವಂತೆ ಮಾಡುವ ಹಾಡುಗಳು ಇವೆ’ ಎಂದಿದ್ದಾರೆ.
Tiger character peak asala 🥳🥳🤙🤙
Intros, action episodes,few twists and emotions 🥳👌🏾🤙
Climax lo acting aythe thope 🥳🥳🥳
Overal Above average for me!!!
Bollywood movies alane vuntay anukunte hit !!!!#War2
— Avinash Chowdary Tarak “🐉” (@imavitarak) August 14, 2025
ಟೈಗರ್ ಪಾತ್ರ ಅತ್ಯದ್ಭುತವಾಗಿದೆ. ನಟರುಗಳ ಎಂಟ್ರಿ, ಆಕ್ಷನ್ ಎಪಿಸೋಡ್, ಕೆಲವು ಎಮೋಷನ್ಗಳು ಮತ್ತು ಟ್ವಿಸ್ಟ್ಗಳು ಸೂಪರ್ ಆಗಿವೆ. ಕ್ಲೈಮ್ಯಾಕ್ಸ್ ಅತ್ಯದ್ಭುತವಾಗಿದೆ. ಸಾಧಾರಣಕ್ಕಿಂತಲೂ ತುಸು ಚೆನ್ನಾಗಿದೆ. ಬಾಲಿವುಡ್ ಸಿನಿಮಾಗಳು ಹೀಗೆಯೇ ಇರುತ್ತಾವೆ ಬಿಡು ಎಂದುಕೊಂಡರೆ ಸಿನಿಮಾ ಪಕ್ಕಾ ಹಿಟ್ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಿದ್ದಾನೆ ಅವಿನಾಶ್ ಚೌಧರಿ ಹೆಸರಿನ ಜೂ ಎನ್ಟಿಆರ್ ಅಭಿಮಾನಿ.
#War2 An okayish action entertainer. Not great, Not bad either – Strictly MID.
Note : #NTR Fans should keep their expectations in check .there are moments where you whistle, but there are moments that will frustrate you , but the ending sort of pulls it back and you will walk…
— Thyview (@Thyview) August 14, 2025
ದಿ ವೀವ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಮಾಡಲಾಗಿರುವ ಟ್ವೀಟ್ ಹೀಗಿದೆ, ‘ವಾರ್ 2’ ಓಕೆ-ಓಕೆ ಮಾದರಿಯ ಸಿನಿಮಾ. ಅದ್ಭುತ ಅಲ್ಲ, ಹಾಗೆಂದು ಕೆಟ್ಟ ಸಿನಿಮಾ ಅಲ್ಲ. ಮಧ್ಯಮವಾದ ಸಿನಿಮಾ. ಜೂ ಎನ್ಟಿಆರ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡು ಸಿನಿಮಾಕ್ಕೆ ಬರುವುದು ಒಳ್ಳೆಯದಲ್ಲ. ಜೂ ಎನ್ಟಿಆರ್ ಅವರಿಗೆ ಕೆಲವು ಅದ್ಭುತವಾದ ಸೀನ್ಗಳಿವೆ. ಆದರೆ ಕೆಲವು ಬೇಸರ ತರಿಸುವ ಸೀನ್ಗಳು ಸಹ ಇವೆ. ಆದರೆ ಒಳ್ಳೆಯ ಕ್ಲೈಮ್ಯಾಕ್ಸ್ ಇರುವ ಕಾರಣಕ್ಕೆ ಎಲ್ಲವೂ ಸರಿತೂಗಿಸಿಕೊಂಡುಬಿಡುತ್ತದೆ’ ಎಂದಿದೆ.
War2 review
War 2 picks up after Tiger 3, pitting Hrithik Roshan’s magnetic rogue RAW agent Kabir against Jr NTR’s Special Units Officer Vikram in a stylish, globe-trotting action spectacle. Jr NTR makes a commanding Bollywood debut, bringing raw power, screen dominance, and an… pic.twitter.com/K5QqIiLZ1N
— Sri Harshath (@sri_sone) August 14, 2025
ಶ್ರೀಹರ್ಷತ್ ಎಂಬುವರು ಟ್ವೀಟ್ ಮಾಡಿ, ‘ಆಕ್ಷನ್, ಡ್ಯಾನ್ಸ್ ಎಲ್ಲ ವಿಷಯಗಳಲ್ಲಿಯೂ ಜೂ ಎನ್ಟಿಆರ್ ಬಾಡಿ ಲಾಂಗ್ವೇಜ್ ಅದ್ಭುತವಾಗಿದೆ. ಬಹಳ ಕಾನ್ಫಿಡೆಂಟ್ ಆಗಿ ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಹೃತಿಕ್ ಮತ್ತು ಜೂ ಎನ್ಟಿಆರ್ ಎದುರಾಗುವ ಸೀನ್ಗಳು ಅದ್ಭುತವಾಗಿವೆ. ಸಿನಿಮಾದ ಮೊದಲಾರ್ಧ ಆಕ್ಷನ್, ಟ್ವಿಸ್ಟ್, ಒಳ್ಳೆಯ ಲೋಕೇಶನ್, ಹಾಡುಗಳಿಂದ ತುಂಬಿದೆ. ಆದರೆ ದ್ವಿತೀಯಾರ್ಧ ತುಸು ಸ್ಲೋ ಇದೆ. ಆದರೆ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಕಿಯಾರಾ ಸ್ಟೈಲ್ ಮತ್ತು ಗ್ಲಾಮರ್ ಅನ್ನು ಚಿತ್ರಕ್ಕೆ ಸೇರಿಸಿದ್ದಾರೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




