ಆ ನಿಯಮ ನಮಗಲ್ಲ ಎಂದು ಸುತ್ತಾಡಿದ ಅಲ್ಲು ಅರ್ಜುನ್;​ ಕಾರು ತಡೆದು ದಂಡ ಹಾಕಿದ ಪೊಲೀಸರು

ಶನಿವಾರ (ಮಾರ್ಚ್​ 26) ಹೈದರಾಬಾದ್​ನ ನೀರುಸ್ ಸರ್ಕಲ್​ ಬಳಿ ಅಲ್ಲು ಅರ್ಜುನ್​ ಅವರ ರೇಂಜ್​ ರೋವರ್ ಕಾರನ್ನು ತಡೆಯಲಾಗಿದೆ. ಗ್ಲಾಸ್​ಗೆ ಇದ್ದ ಟಿಂಟ್​ಅನ್ನು ತೆಗೆಯಲಾಗಿದ್ದು, ಜತೆಗೆ 700 ರೂಪಾಯಿ ದಂಡ ವಿಧಿಸಲಾಗಿದೆ.

ಆ ನಿಯಮ ನಮಗಲ್ಲ ಎಂದು ಸುತ್ತಾಡಿದ ಅಲ್ಲು ಅರ್ಜುನ್;​ ಕಾರು ತಡೆದು ದಂಡ ಹಾಕಿದ ಪೊಲೀಸರು
ಅಲ್ಲು ಅರ್ಜುನ್
Edited By:

Updated on: Mar 28, 2022 | 8:44 AM

ಸೆಲೆಬ್ರಿಟಿಗಳಿಗೆ ಒಂದು ನಿಯಮ, ಜನಸಾಮಾನ್ಯರಿಗೆ ಒಂದು ನಿಯಮ ಮಾಡಲಾಗುತ್ತದೆ ಎನ್ನುವ ಆರೋಪ ಸಾಮಾನ್ಯರಿಂದ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆದರೆ, ಎಲ್ಲ ಪೊಲೀಸರು ಒಂದೇರೀತಿ ಇರುವುದಿಲ್ಲ. ಕೆಲವರು ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯ ಆಗುವಂತೆ ನೋಡಿಕೊಳ್ಳುತ್ತಾರೆ. ಈಗ ಇದು ಮತ್ತೊಮ್ಮೆ ಸಾಬೀತಾಗಿದೆ. ಹೈದರಾಬಾದ್ ಟ್ರಾಫಿಕ್​ ಪೊಲೀಸರು (Traffic Police) ಅಲ್ಲು ಅರ್ಜುನ್​ಗೆ (Allu Arjun) ಸೇರಿದ ಕಾರನ್ನು ತಡೆದಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 700 ರೂಪಾಯಿ ದಂಡ ವಿಧಿಸಿದ್ದಾರೆ. ಈ ಕ್ರಮಕ್ಕೆ ಜನಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಿಯಮದ ಪ್ರಕಾರ ಕಾರಿನ ವಿಂಡೋಗೆ ಟಿಂಟೆಡ್ ಗ್ಲಾಸ್ ಹಾಕುವಂತಿಲ್ಲ. ಟಿಂಟೆಡ್​ ಗ್ಲಾಸ್​ಅನ್ನು ಹಾಕಿಕೊಂಡು ತಿರುಗಾಡುವುದು ನಿಯಮಕ್ಕೆ ವಿರುದ್ಧವಾದುದು. ಆದಾಗ್ಯೂ ಕೆಲ ಸೆಲೆಬ್ರಿಟಿ ಕಾರುಗಳಿಗೆ ಈ ರೀತಿಯ ಗ್ಲಾಸ್ ಬಳಕೆ ಆಗುತ್ತಿದೆ. ಹೊರಗಿನವರಿಗೆ ಕಾರಿನಲ್ಲಿ ಯಾರಿದ್ದಾರೆ ಎಂದು ತಿಳಿಯಬಾರದು ಎನ್ನುವ ಕಾರಣಕ್ಕೆ ಕಾರಿನ ಕಿಟಕಿ ಗ್ಲಾಸ್​ಗೆ ಟಿಂಟ್ ಬಳಸಲಾಗುತ್ತದೆ. ಅಲ್ಲು ಅರ್ಜುನ್ ಬಳಕೆ ಮಾಡುವ ರೇಂಜ್ ರೋವರ್ ಕಾರ್​ಗೂ ಟಿಂಟೆಡ್​ ಗ್ಲಾಸ್ ಇತ್ತು. ಇದನ್ನು ಪೊಲೀಸರು ತೆಗೆದುಹಾಕಿದ್ದಾರೆ.

ಶನಿವಾರ (ಮಾರ್ಚ್​ 26) ಹೈದರಾಬಾದ್​ನ ನೀರುಸ್ ಸರ್ಕಲ್​ ಬಳಿ ಅಲ್ಲು ಅರ್ಜುನ್​ ಅವರ ರೇಂಜ್​ ರೋವರ್ ಕಾರನ್ನು ತಡೆಯಲಾಗಿದೆ. ಗ್ಲಾಸ್​ಗೆ ಇದ್ದ ಟಿಂಟ್​ಅನ್ನು ತೆಗೆಯಲಾಗಿದ್ದು, ಜತೆಗೆ 700 ರೂಪಾಯಿ ದಂಡ ವಿಧಿಸಲಾಗಿದೆ. ಇದಲ್ಲದೆ, ನಂದಮುರಿ ಕಲ್ಯಾಣ್​ ರಾಮ್​ ಕಾರನ್ನು ಕೂಡ ತಡೆಯಲಾಗಿದ್ದು, ಅವರು ಕೂಡ ಟಿಂಟೆಡ್​ ಗ್ಲಾಸ್ ಹೊಂದಿದ್ದರು. ಈ ಕಾರಣಕ್ಕೆ ಅವರಿಗೂ ದಂಡ ಹಾಕಲಾಗಿದೆ.

ಟ್ರಾಫಿಕ್ ನಿಯಮ ಮೀರಿದ ಆಂಧ್ರದ ಹಲವು ರಾಜಕಾರಣಿಗಳು ಮತ್ತು ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಸರಿಯಾಗಿ ನಂಬರ್​ ಪ್ಲೇಟ್​ ಇರದೆ ಇರುವ ವಾಹನಗಳಿಗೆ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಸುಮಾರು 80 ಸೆಲೆಬ್ರಿಟಿಗಳ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜ್ಯೂ.ಎನ್​ಟಿಆರ್​ಗೂ ಬಿದ್ದಿತ್ತು ದಂಡ

ಜ್ಯೂ. ಎನ್​ಟಿಆರ್​ ಕಾರನ್ನು ಕಳೆದ ವಾರ ಪೊಲೀಸರು ತಡೆದಿದ್ದರು. ಈ ವೇಳೆ ಅವರು ಕಾರಿಗೂ ಟಿಂಟೆಡ್​ ಗ್ಲಾಸ್​ ಇತ್ತು ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೂ ದಂಡ ವಿಧಿಸಲಾಗಿತ್ತು. ಇದಾದ ಬೆನ್ನಲ್ಲೇ ಅಲ್ಲು ಅರ್ಜುನ್​ ಕಾರನ್ನು ಪೊಲೀಸರು ತಡೆದು ದಂಡ ಹಾಕಿದ್ದಾರೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್ ‘ಪುಷ್ಪ’ಕ್ಕೆ ತಯಾರಾಗಿದ್ದು ಹೇಗೆ? ಇಲ್ಲಿದೆ ತೆರೆಯ ಹಿಂದಿನ ವಿಶೇಷ ವಿಡಿಯೋ

ಅಲ್ಲು ಅರ್ಜುನ್ ಜತೆ ನಟಿಸಲು ತುದಿಗಾಲಲ್ಲಿ ನಿಂತಿರುವ ಬಾಲಿವುಡ್ ತಾರೆಯರು; ಮನದಿಂಗಿತ ಹೇಳಿಕೊಂಡ ಆಲಿಯಾ ಭಟ್

Published On - 6:00 am, Mon, 28 March 22

TV9 Web

TV9 Kannada

Read More
Loading...
Unable to load recommendations.
Follow Us