AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಕೂಡ ತರಬೇತಿ ಪಡೆದ ನರ್ತಕ, ಪೊಲೀಸರು ಅತಿಯಾಗಿ ವರ್ತಿಸಿದ್ದಾರೆ: ಕೇರಳದ ನ್ಯಾಯಾಧೀಶ ಕಲಾಂ ಪಾಷಾ

ತಾನು ಕಲೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿ ಎಂದು ಹೇಳಿರುವ ನ್ಯಾಯಮೂರ್ತಿ ಪಾಷಾ ಅವರು ಭರತನಾಟ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿದರು. "ನನಗೆ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ತುಂಬಾ ಇಷ್ಟ ಮತ್ತು ನಾನು 6 ವರ್ಷಗಳ ಕಾಲ ಕರ್ನಾಟಕ ಸಂಗೀತವನ್ನು ಕಲಿತಿದ್ದೇನೆ

ನಾನು ಕೂಡ ತರಬೇತಿ ಪಡೆದ ನರ್ತಕ, ಪೊಲೀಸರು ಅತಿಯಾಗಿ ವರ್ತಿಸಿದ್ದಾರೆ: ಕೇರಳದ ನ್ಯಾಯಾಧೀಶ ಕಲಾಂ ಪಾಷಾ
ಕಲಾಂ ಪಾಷಾ- ಡಾ. ನೀನಾ ಪ್ರಸಾದ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Mar 25, 2022 | 7:07 PM

Share

ಕೊಚ್ಚಿ: ಮೋಹಿನಿಯಾಟ್ಟಂ (Mohinyiattam )ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ ಆರೋಪದ ಮೇಲೆ ಸುದ್ದಿಯಾಗಿರುವ ಕೇರಳ ಜಿಲ್ಲಾ ನ್ಯಾಯಾಧೀಶರಾದ ಕಲಾಂ ಪಾಷಾ (Kalam Pasha) ಅವರು ವಕೀಲರ ಪ್ರತಿಭಟನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಕೀಲರ ಸಂಘಕ್ಕೆ ನೀಡಿದ ಸ್ಪಷ್ಟನೆಯಲ್ಲಿ ಪಾಲಕ್ಕಾಡ್ (Palakkad )ಉಪ ಪೊಲೀಸ್ ವರಿಷ್ಠಾಧಿಕಾರಿ ಪಿಸಿ ಹರಿದಾಸ್ ಅವರನ್ನು ಪಾಷಾ ದೂಷಿಸಿದ್ದಾರೆ. ನಾನು ತರಬೇತಿ ಪಡೆದ ನರ್ತಕನಾಗಿದ್ದು ಕಲೆಯ ಬಗ್ಗೆ ಒಲವುಳ್ಳವನು ಎಂದು ಅವರು ಹೇಳಿದ್ದಾರೆ.  ಪಾಲಕ್ಕಾಡ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಕೀಲ ಕೆ ಕೆ ಸುಧೀರ್ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ನ್ಯಾಯಾಧೀಶರು “ಧಾರ್ಮಿಕ ಕಾರಣದಿಂದ ಪೊಲೀಸರನ್ನು ಬಳಸಿಕೊಂಡು ನೃತ್ಯ ಕಾರ್ಯಕ್ರಮವನ್ನು ನಿಲ್ಲಿಸಿದ ಆರೋಪದಿಂದ ನನಗೆ ನೋವಾಗಿದೆ” ಎಂದು ಹೇಳಿದ್ದಾರೆ.  “ವಾಲ್ಯೂಮ್ ಕಡಿಮೆ ಮಾಡಲು ನನ್ನ ಪಿಎಸ್‌ಒ ಸಂದೇಶವನ್ನು ಪಡೆದ ಡಿವೈಎಸ್‌ಪಿ ನಾನು ಹೇಳಿದ್ದನ್ನು ಮೀರಿ ವರ್ತಿಸಿ ಎಲ್ಲಾ ಸಮಸ್ಯೆಗೆ ಕಾರಣರಾದರು. ಇದು ಪ್ರತಿಭಟನಾಕಾರರಿಗೆ ತಿಳಿದಿದ್ದರೆ, ಅಂತಹ ಸಮಸ್ಯೆ ಎಂದಿಗೂ ಸಂಭವಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ, ”ಎಂದು ಪತ್ರದಲ್ಲಿ ತಿಳಿಸಲಾಗಿದೆ. ನ್ಯೂಸ್ 18 ಹರಿದಾಸ್ ಅವರನ್ನು ಸಂಪರ್ಕಿಸಿದಾಗ, ಅವರು”ಇದು ನಿಜವಲ್ಲ.”ಎಂಬ ಸಂದೇಶದೊಂದಿದೆ ಪ್ರತಿಕ್ರಿಯಿಸಿದರು.

ಮಾರ್ಚ್ 19 ರಂದು ಖ್ಯಾತ ನೃತ್ಯಗಾರ್ತಿ ಡಾ.ನೀನಾ ಪ್ರಸಾದ್ ಅವರ ಪ್ರದರ್ಶನವನ್ನು ಪಾಷಾ ಅವರು ಅರ್ಧಕ್ಕೆ ನಿಲ್ಲಿಸಿದರು ಎಂಬ ಆರೋಪವಿದೆ. ನೀನಾ ಇವರು ವೈಯಕ್ತಿಕವಾಗಿ “ಅಗೌರವ” ಮತ್ತು “ಕೇರಳದ ಕಲಾ ಪ್ರಕಾರ ಮತ್ತು ಸಂಸ್ಕೃತಿಗೆ ಅವಮಾನ” ಎಂದು ಕರೆದಿದ್ದರು.

ತಾನು ಕಲೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿ ಎಂದು ಹೇಳಿರುವ ನ್ಯಾಯಮೂರ್ತಿ ಪಾಷಾ ಅವರು ಭರತನಾಟ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿದರು. “ನನಗೆ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ತುಂಬಾ ಇಷ್ಟ ಮತ್ತು ನಾನು 6 ವರ್ಷಗಳ ಕಾಲ ಕರ್ನಾಟಕ ಸಂಗೀತವನ್ನು ಕಲಿತಿದ್ದೇನೆ, ನಾನು ಅರಂಗೇಟಂ (ವೇದಿಕೆಯಲ್ಲಿ ಶಾಸ್ತ್ರೀಯ ನೃತ್ಯಗಾರ್ತಿ/ ನರ್ತಕರ ಚೊಚ್ಚಲ ಪ್ರವೇಶ) ವರೆಗೆ ಭರತನಾಟ್ಯವನ್ನು ಕಲಿತಿದ್ದೇನೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಪತ್ರ ಬಂದಿರುವುದನ್ನು ದೃಢಪಡಿಸಿದ ಸುಧೀರ್, ವಕೀಲರ ಸಂಘದಿಂದ ಯಾವುದೇ ಪ್ರತಿಭಟನೆ ನಡೆದಿಲ್ಲ. ಪತ್ರದಲ್ಲಿ ಕ್ರಮ ಕೈಗೊಳ್ಳುವಂತದ್ದೇನೂ ಇಲ್ಲ. ಅಗತ್ಯವಿದ್ದಲ್ಲಿ, ನಾವು ವ್ಯವಸ್ಥಾಪಕ ಸಮಿತಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೆಲವು ವಕೀಲರು ವೈಯಕ್ತಿಕ ವಿಚಾರದಲ್ಲಿ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ ನಡೆಸಿದರು ಎಂದಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಆಸುಪಾಸಿನಲ್ಲಿ ಘೋಷಣೆಗಳನ್ನು ಕೂಗುವ ಮತ್ತು ನ್ಯಾಯಾಲಯದ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುವ ವಕೀಲರನ್ನು ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಒಳಪಡಿಸಬಹುದು ಎಂದು ನ್ಯಾಯಾಧೀಶರ ಪತ್ರದಲ್ಲಿ ತಿಳಿಸಲಾಗಿದೆ. ಪ್ರತಿಭಟನಾಕಾರರಲ್ಲಿ ಸರ್ಕಾರಿ ವಕೀಲರೂ ಇದ್ದರು.

2002ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆಯೋಜಿಸಿದ ಪ್ರತಿಭಟನೆಗಳು ಕೆಲವು ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಿದಾಗ, 2002ರಲ್ಲಿ ಜಾರ್ಜ್ ಕೋಶಿvs ಕೇರಳ ರಾಜ್ಯದ ಹೈಕೋರ್ಟ್ ತೀರ್ಪಿನ ಕುರಿತು ನ್ಯಾಯಮೂರ್ತಿ ಪಾಷಾ ಅವರು ವಕೀಲರ ಸಂಘದ ಅಧ್ಯಕ್ಷರನ್ನು ಎಚ್ಚರಿಸಿದರು. ಆ ತೀರ್ಪಿನಲ್ಲಿ, ” ನ್ಯಾಯಾಲಯದ ಪ್ರತಿಯೊಬ್ಬ ನ್ಯಾಯಾಧೀಶರು ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸಾರ್ವಜನಿಕ ಸೇವಕರು ಮತ್ತು ಪ್ರತಿಯೊಬ್ಬ ವಕೀಲರು ನ್ಯಾಯಾಲಯದ ಅಧಿಕಾರಿ ” ಮತ್ತು ಅವರ ಕಾರ್ಯಚಟುವಟಿಕೆಗೆ ಮತ್ತು ಸಾರ್ವಜನಿಕ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿಯಾಗಬಾರದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರತಿಕ್ರಿಯೆಯನ್ನು ಕೇಳಲು ಡಾ ಪ್ರಸಾದ್‌ಗೆ ಹಲವಾರು ಕರೆಗಳು ಮತ್ತು ಸಂದೇಶಗಳು ಉತ್ತರಿಸಲಿಲ್ಲ ಎಂದ ನ್ಯೂಸ್ 18 ವರದಿ ಮಾಡಿದೆ.

ಇದನ್ನೂ ಓದಿ: 

ಕಿರಿಕಿರಿ ಆಗುತ್ತಿದೆ ಎಂದು ಮೋಹಿನಿಯಾಟ್ಟಂ ನೃತ್ಯ ಅರ್ಧಕ್ಕೆ ನಿಲ್ಲಿಸಿದ ನ್ಯಾಯಾಧೀಶ ಕಲಂ ಪಾಷಾ; ಅವಮಾನದಿಂದ ಕಣ್ಣೀರು ಹಾಕಿದ ಕಲಾವಿದೆ

Published On - 6:28 pm, Fri, 25 March 22

ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್