ಪಂಜಾಬ್ ಹಾಲಿ ಮತ್ತು ಮಾಜಿ ಶಾಸಕರು ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರು: ಭಗವಂತ್ ಮಾನ್, ಮುಖ್ಯಮಂತ್ರಿ

ಗುರುವಾರದಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಾನ್, ಪಂಜಾಬ್ ನ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸಲು ರೂ. 1 ಲಕ್ಷ ಕೋಟಿಯ ನೆರವು ಕೇಳಿದರು. ಪಂಜಾಬ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮತ್ತು ಜನತೆ ಅಭ್ಯುದಯವನ್ನು ಪ್ರಧಾನಿಗಳು ಖಾತ್ರಿಪಡಿಸಬೇಕೆಂದು ಮಾನ್ ಆಗ್ರಹಿಸಿದರು.

ಪಂಜಾಬ್ ಹಾಲಿ ಮತ್ತು ಮಾಜಿ ಶಾಸಕರು ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರು: ಭಗವಂತ್ ಮಾನ್, ಮುಖ್ಯಮಂತ್ರಿ
ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 25, 2022 | 7:57 PM

ಪಂಜಾಬ್​ ನಲ್ಲಿ ಈಗಷ್ಟೇ ಅಧಿಕಾರಕ್ಕೆ ಬಂದಿರುವ ಭಗವಂತ್​ ಮಾನ್ (Bhagwant Mann) ಅವರ ನೇತೃತ್ವದ ಆಪ್​ ಸರ್ಕಾರ (AAP government) ತಾನು ಬೇರೆ ಸರ್ಕಾರಗಳಿಗಿಂತ ಭಿನ್ನ ಅನ್ನೋದನ್ನು ಮೊದಲ ವಾರವೇ ಸಾಬೀತು ಮಾಡಿದೆ. ಮುಖ್ಯಮಂತ್ರಿ ಮನ್ ಅವರು ಶುಕ್ರವಾರ ಹೇಳಿಕೆಯೊಂದನ್ನು ನೀಡಿ ಪಂಜಾಬ್ ರಾಜ್ಯದ ಹಾಲಿ ಮತ್ತು ಮಾಜಿ ಶಾಸಕರು (MLAs) ಹಿಂದೆ ಎಷ್ಟೇ ಸಲ ವಿಧಾನ ಸಭೆಗೆ ಆಯ್ಕೆಯಾಗಿದ್ದರೂ ಕೇವಲ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆಂದು ಹೇಳಿದ್ದಾರೆ. ಶಾಸಕರ ಕುಟುಂಬಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನೂ ಕಡಿತಗೊಳಿಲಾಗುವುದೆಂದು ಅವರು ಹೇಳಿದರು.

‘ಪಂಜಾಬ್ ಹಾಲಿ ಮತ್ತು ಶಾಸಕರು ಹಿಂದೆ ಅವರಷ್ಟೇ ಬಾರಿ ಆಯ್ಕೆಯಾಗಿದ್ದರೂ ಕೇವಲ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ. ಹಾಗೆಯೇ, ಎಮ್ ಎಲ್ ಎ ಗಳ ಕುಟುಂಬಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸಹ ಕಡಿತಗೊಳಿಲಾಗುವುದು,’ ಎಂದು ಮುಖ್ಯಮಂತ್ರಿಗಳು ವಿಡಿಯೋ ಮೂಲಕ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಪಂಜಾಬ್​ ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾನ್ ಅವರು ಹಲವಾರು ಸುಧಾರಣೆಗಳನ್ನು ಪ್ರಕಟಿಸಿದ್ದಾರೆ. ಬೇರೆ ಬೇರೆ ಇಲಾಖೆಗಳಲ್ಲಿ ಖಾಲಿಯಿರುವ 25,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿರುವ ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 35,000 ಹೆಚ್ಚು ನೌಕರರ ಸೇವೆಯನ್ನು ಖಾಯಂಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ರಾಜ್ಯದ ಪೊಲೀಸ್ ಇಲಾಖೆಯಲ್ಲಿ 10,000 ನೌಕರಿಗಳನ್ನು ಖಚಿತಪಡಿಸಿದ ಮಾನ್ ಉಳಿದ ಯೋಗ್ಯ ಅಭ್ಯರ್ಥಿಗಳಿಗೆ ನಿಗಮ, ಮಂಡಳಿಗಳು ಸೇರಿದಂತೆ ಇತರ ಇಲಾಖೆಗಳಲ್ಲಿ ಉದ್ಯೋಗ ಒದಗಿಸಲಾಗುವುದೆಂದು ಹೇಳಿದ್ದಾರೆ.

ಗುರುವಾರದಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಾನ್, ಪಂಜಾಬ್ ನ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸಲು ರೂ. 1 ಲಕ್ಷ ಕೋಟಿಯ ನೆರವು ಕೇಳಿದರು. ಪಂಜಾಬ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮತ್ತು ಜನತೆ ಅಭ್ಯುದಯವನ್ನು ಪ್ರಧಾನಿಗಳು ಖಾತ್ರಿಪಡಿಸಬೇಕೆಂದು ಮಾನ್ ಆಗ್ರಹಿಸಿದರು.

ಪ್ರಧಾನಿಗಳ ಜೊತೆ ನಡೆಸಿದ ಸಭೆಯ ಕೆಲ ಗಂಟೆಗಳ ಬಳಿಕ ಅಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​ ಅವರು ಪಂಜಾಬ್ ಮುಖ್ಯಮಂತ್ರಿ, ಮತ್ತು ಪಕ್ಷದ ಐವರು ರಾಜ್ಯಸಭಾ ಸದಸ್ಯರಾದ ದೆಹಲಿ ಮಾಜಿ ಶಾಸಕ ರಾಘವ ಚಡ್ಡಾ, ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್, ಐಐಟಿ ದೆಹಲಿಯ ಪ್ರೊಫೆಸರ್ ಸಂದೀಪ್ ಪಾಠಕ್, ಶಿಕ್ಷಣ ತಜ್ಞ ಅಶೋಕ್ ಮಿತ್ತಲ್ ಹಾಗೂ ಉದ್ಯಮಿ ಸಂಜೀವ್ ಅರೋರಾ ಅವರನ್ನು ತಮ್ಮ ನಿವಾಸದಲ್ಲಿ ಭೇಟಿಯಾದರು.

ಗುರುವಾರದಂದು ಆಪ್​ನ  ಎಲ್ಲ ಐವರು ನಾಮಾಂಕಿತರು ಪಂಜಾಬ್ ನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಜಾಬ್​ ವಿಧಾನ ಸಭೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಅಪ್ ಆಡಳಿತರೂಢ ಕಾಂಗ್ರೆಸ್ ನೆಲಕಚ್ಚುವಂತೆ ಮಾಡುವ ಜೊತೆಗೆ 117 ಸ್ಥಾನಗಳ ಪೈಕಿ 92 ಗೆದ್ದು ಭರ್ಜರಿ ಯಶ ಕಂಡಿತು. ಸಂಗ್ರೂರ್ ಜಿಲ್ಲೆ ಧುರಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾನ್ ಅವರು ಕಾಂಗ್ರೆಸ್ ನ ದಲ್ವೀರ್ ಸಿಂಗ್ ಗೋಲ್ಡಿ ಅವರನ್ನು 58,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.

ಇದನ್ನೂ ಓದಿ:    ಪಂಜಾಬ್​ ಸಚಿವರೆಷ್ಟು ಸಾಮಾನ್ಯರು: ಭಗವಂತ್ ಮಾನ್ ಸಂಪುಟ 7 ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ, 9 ಮಂದಿ ಕೋಟ್ಯಧೀಶರು

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ