AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ‘ರಾಕಾ’ ಲುಕ್ ಸಿದ್ಧಪಡಿಸಲು ಪ್ರತಿ ದಿನ 4 ಗಂಟೆ ಮೇಕಪ್

ಅಲ್ಲು ಅರ್ಜುನ್ ನಟನೆಯ ‘ರಾಕಾ’ ಚಿತ್ರವು ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರ ಗೆಟಪ್ ಭಿನ್ನವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಗಿದೆ. ಡಿಫರೆಂಟ್ ಆಗಿರುವ ಈ ಗೆಟಪ್ ಸಲುವಾಗಿ ಅಲ್ಲು ಅರ್ಜುನ್ ಅವರಿಗೆ ಪ್ರತಿದಿನ ಗಂಟೆಗಟ್ಟಲೆ ಮೇಕಪ್ ಮಾಡಲಾಗಿದೆ.

ಅಲ್ಲು ಅರ್ಜುನ್ ‘ರಾಕಾ’ ಲುಕ್ ಸಿದ್ಧಪಡಿಸಲು ಪ್ರತಿ ದಿನ 4 ಗಂಟೆ ಮೇಕಪ್
Raaka Movie First Look
ಮದನ್​ ಕುಮಾರ್​
|

Updated on: Apr 15, 2026 | 5:07 PM

Share

‘ಪುಷ್ಪ 2’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ (Allu Arjun) ಅವರ ಮುಂದಿನ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಈಗ ಅವರು ‘ರಾಕಾ’ (Raaka) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅದರಲ್ಲಿ ಅಲ್ಲು ಅರ್ಜುನ್ ಅವರ ಗೆಟಪ್ ಗಮನ ಸೆಳೆದಿದೆ. ಆ ಗೆಟಪ್ ಸಲುವಾಗಿ ಅವರು ಎಷ್ಟು ಶ್ರಮ ಹಾಕಿದ್ದಾರೆ ಎಂಬ ವಿಷಯ ಈಗ ಗೊತ್ತಾಗಿದೆ. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಜೊತೆಯಾಗಿ ಸಿನಿಮಾ ಮಾಡುತ್ತಿರುವುದರಿಂದ ಸಹಜವಾಗಿಯೇ ‘ರಾಕಾ’ ಚಿತ್ರದ ಬಗ್ಗೆ ಹೈಪ್ ಹೆಚ್ಚಾಗಿದೆ. ಈ ಸಿನಿಮಾದ ಕಥೆ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸಲು ಆರಂಭಿಸಿದ್ದಾರೆ. ಅರ್ಧ ಮೃಗ, ಅರ್ಧ ಮನುಷ್ಯನ ರೀತಿ ಕಾಣುವ ಗೆಟಪ್ ಧರಿಸಿ ಅಲ್ಲು ಅರ್ಜುನ್ ಅವರು ಫ್ಯಾನ್ಸ್ ಎದುರು ಝಲಕ್ ನೀಡಿದ್ದಾರೆ.

ಈ ಗೆಟಪ್ ಹಾಕುವುದು ಅಷ್ಟು ಸುಲಭವಲ್ಲ. ಈ ಲುಕ್​ಗಾಗಿ ಅಲ್ಲಿ ಅರ್ಜುನ್ ಅವರು ಪ್ರತಿ ದಿನ 3ರಿಂದ 4 ಗಂಟೆಗಳ ಕಾಲ ಶ್ರಮ ಹಾಕಿದ್ದಾರೆ. ಸಿನಿಮಾ ಮೇಲೆ ಅಲ್ಲು ಅರ್ಜುನ್ ಅವರಿಗೆ ಇರುವ ಪ್ರೀತಿ ಎಷ್ಟು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರತಿ ಪಾತ್ರಕ್ಕೂ ಅಲ್ಲು ಅರ್ಜುನ್ ಅವರು ಇದೇ ರೀತಿ ಶ್ರಮ ಹಾಕುತ್ತಾರೆ. ಸ್ಟಾರ್ ನಟನಾದ ಮೇಲೂ ಅವರು ಈ ರೀತಿ ಬದ್ಧತೆ ತೋರಿಸುತ್ತಿರುವುದು ಅವರ ಯಶಸ್ಸಿಗೆ ಕಾರಣ ಆಗಿದೆ.

ಫಸ್ಟ್ ಲುಕ್ ಬಿಡುಗಡೆ ಆದ ಬಳಿಕ ‘ರಾಕಾ’ ಕ್ರೇಜ್ ಜೋರಾಗಿದೆ. ಈ ಮೊದಲು ‘ಪುಷ್ಪ’ ಸಿನಿಮಾದ ‘ತಗ್ಗೆದಲೇ’ ಸ್ಟೈಲ್ ವೈರಲ್ ಆಗಿತ್ತು. ಈಗ ‘ರಾಕಾ’ ಕೂಡ ಅದೇ ರೀತಿ ಟ್ರೆಂಡ್ ಆಗುವ ಲಕ್ಷಣ ಕಾಣಿಸಿದೆ. ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗೆ ನಡೆದ ಟಿ20 ಪಂದ್ಯದಲ್ಲಿ ‘ರಾಕಾ’ ರೀತಿ ಪೋಸ್ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?

ಇಂತಹ ಹಲವು ಕಾರಣಗಳಿಂದಾಗಿ ‘ರಾಕಾ’ ಸಿನಿಮಾ ಸದ್ದು ಮಾಡುತ್ತಿದೆ. ‘ಸನ್ ಪಿಕ್ಚರ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬೃಹತ್ ಬಜೆಟ್​ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ದೀಪಿಕಾ ಪಡುಕೋಣೆ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us