‘ಪುಷ್ಪ 2’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಜಾತ್ರೆಗೆ ಸಜ್ಜಾದ ಅಲ್ಲು ಅರ್ಜುನ್​ ಫ್ಯಾನ್ಸ್​

ಏ.8ರಂದು ನಟ ಅಲ್ಲು ಅರ್ಜುನ್​ ಜನ್ಮದಿನ. ಆ ವಿಶೇಷ ದಿನವೇ ಅಭಿಮಾನಿಗಳಿಗೆ ಟ್ರೀಟ್​ ನೀಡಲು ‘ಪುಷ್ಪ 2’ ಸಿನಿಮಾ ತಂಡದವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ದಿನ ಟೀಸರ್​ ರಿಲೀಸ್​ ಆಗಲಿದೆ. ಈ ಸುದ್ದಿ ತಿಳಿಸಲು ನೂತನ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಈ ಪೋಸ್ಟರ್​ನಲ್ಲಿ ಗೆಜ್ಜೆ ಕಟ್ಟಿಕೊಂಡಿರುವ ಕಾಲಿನ ಚಿತ್ರ ಇದೆ. ಅದನ್ನು ಕಂಡು ಸಿನಿಪ್ರಿಯರ ಕೌತುಕ ಡಬಲ್​ ಆಗಿದೆ.

‘ಪುಷ್ಪ 2’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಜಾತ್ರೆಗೆ ಸಜ್ಜಾದ ಅಲ್ಲು ಅರ್ಜುನ್​ ಫ್ಯಾನ್ಸ್​
ಪುಷ್ಪ 2 ಪೋಸ್ಟರ್​

Updated on: Apr 02, 2024 | 8:12 PM

ಇನ್ಮುಂದೆ ‘ಪುಷ್ಪ 2’ ಸಿನಿಮಾ (Pushpa 2 Movie) ತಂಡದಿಂದ ಒಂದರ ಹಿಂದೊಂದು ಅಪ್​ಡೇಟ್​ ಸಿಗಲಿದೆ. ಯಾಕೆಂದರೆ, ಈ ಸಿನಿಮಾದ ಬಿಡುಗಡೆಗೆ ಉಳಿದಿರುವುದು ಕೆಲವೇ ತಿಂಗಳು ಮಾತ್ರ. ಅಲ್ಲು ಅರ್ಜುನ್​ (Allu Arjun) ಅವರು ಈ ಚಿತ್ರದಲ್ಲಿ ಪುಷ್ಪರಾಜ್​ ಎಂಬ ಪಾತ್ರ ಮಾಡುತ್ತಿದ್ದು, ಆ ಪಾತ್ರದ ಗೆಟಪ್​ ತುಂಬ ಖಡಕ್​ ಆಗಿರಲಿದೆ. ಅಲ್ಲದೇ ಅವರು ಸ್ತ್ರೀ ವೇಷದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅದರ ಪೋಸ್ಟರ್​ ಅನಾವರಣ ಆಗಿದೆ. ಈಗ ಟೀಸರ್​ ಬಿಡುಗಡೆ ಬಗ್ಗೆ ಚಿತ್ರತಂಡದಿಂದ ಅಪ್​ಡೇಟ್​ ಸಿಕ್ಕಿದೆ. ಏಪ್ರಿಲ್​ 8ರಂದು ‘ಪುಷ್ಪ 2’ ಸಿನಿಮಾದ ಟೀಸರ್​ (Pushpa 2 Teaser) ರಿಲೀಸ್​ ಆಗಲಿದೆ.

ಏಪ್ರಿಲ್​ 8ರಂದು ಅಲ್ಲು ಅರ್ಜುನ್​ ಅವರ ಜನ್ಮದಿನ. ಹಾಗಾಗಿ ಆ ವಿಶೇಷ ದಿನದಂದು ಅಭಿಮಾನಿಗಳಿಗೆ ಟ್ರೀಟ್​ ನೀಡಲು ‘ಪುಷ್ಪ 2’ ಚಿತ್ರತಂಡದವರು ಸಜ್ಜಾಗಿದ್ದಾರೆ. ಅಂದು ಟೀಸರ್​ ಬಿಡುಗಡೆ ಆಗಲಿದೆ. ಈ ವಿಚಾರವನ್ನು ತಿಳಿಸಲು ಹೊಸ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಅದರಲ್ಲಿ ಗೆಜ್ಜೆ ಕಟ್ಟಿಕೊಂಡಿರುವ ಕಾಲಿನ ಚಿತ್ರ ಇದೆ. ಇದನ್ನು ನೋಡಿ ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ರುತ್​ ಪ್ರಭು ನಾಯಕಿ?

‘ಪುಷ್ಪ ಮಾಸ್​ ಜಾತ್ರೆ ಶುರುವಾಗಲಿ. ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಟೀಸರ್​ ಏಪ್ರಿಲ್​ 8ಕ್ಕೆ ಬಿಡುಗಡೆ ಆಗಲಿದೆ. ಡಬಲ್​ ಫೈರ್​ ಜೊತೆ ಪುಷ್ಪ ಬರುತ್ತಿದ್ದಾನೆ’ ಎಂಬ ಕ್ಯಾಪ್ಷನ್​ನೊಂದಿಗೆ ‘ಪುಷ್ಪ 2’ ಸಿನಿಮಾದ ಹೊಸ ಪೋಸ್ಟರ್​ ಅನಾವರಣ ಮಾಡಲಾಗಿದೆ. ಅಲ್ಲು ಅರ್ಜುನ್​ ಅವರ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್ ಸಖತ್​ ವೈರಲ್​ ಆಗಿದೆ. ಈಗ ಎಲ್ಲರ ಗಮನ ಏಪ್ರಿಲ್​ 8ರ ಮೇಲೆ ನೆಟ್ಟಿದೆ.

ಸುಕುಮಾರ್​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಶೂಟಿಂಗ್ ಸೆಟ್​ನಿಂದ ಅವರ ವಿಡಿಯೋ ಲೀಕ್ ಆಗಿತ್ತು. ಟೀಸರ್​ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಾರಾ ಎಂಬ ಕೌತುಕ ಕೂಡ ಇದೆ. ‘ಮೈತ್ರಿ ಮೂವೀ ಮೇಕರ್ಸ್​’ ನಿರ್ಮಾಣ ಸಂಸ್ಥೆಯ ಮೂಲಕ ‘ಪುಷ್ಪ 2’ ಸಿನಿಮಾ ತಯಾರಾಗುತ್ತಿದೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us