ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ರುತ್​ ಪ್ರಭು ನಾಯಕಿ?

ಖ್ಯಾತ ನಟಿ ಸಮಂತಾ ರುತ್​ ಪ್ರಭು ಅವರಿಗೆ ಹತ್ತು ಹಲವು ಆಫರ್​ಗಳು ಬರುತ್ತಿವೆ. ಪ್ಯಾನ್​ ಇಂಡಿಯಾ ಡೈರೆಕ್ಟರ್​ ಅಟ್ಲಿ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ಸಮಂತಾ ರುತ್​ ಪ್ರಭು ಅವರು ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಬಗ್ಗೆ ಈ ರೀತಿ ಅಂತೆ-ಕಂತೆಗಳು ಹಬ್ಬಲು ಒಂದಷ್ಟು ಕಾರಣಗಳಿವೆ.

ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ರುತ್​ ಪ್ರಭು ನಾಯಕಿ?
ಅಟ್ಲಿ, ಸಮಂತಾ ರುತ್​ ಪ್ರಭು, ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: Apr 01, 2024 | 9:02 PM

ನಟ ಅಲ್ಲು ಅರ್ಜುನ್ (Allu Arjun) ಅವರ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಹತ್ತಾರು ಗಾಸಿಪ್​ಗಳು ಕೇಳಿಬರುತ್ತಿವೆ. ಈಗ ಅವರು ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ವಿಶೇಷ ಹಾಡಿನಲ್ಲಿ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಕುಣಿಯುವ ಸಾಧ್ಯತೆ ಇದೆ ಎಂದು ಕೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ವದಂತಿಗಳು ಹಬ್ಬಿವೆ. ಅದರ ಜೊತೆಗೆ, ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ (Atlee) ಅವರ ಕಾಂಬಿನೇಷನ್​ನಲ್ಲಿ ಬರಲಿರುವ ಹೊಸ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡಲು ಸಮಂತಾ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂದು ಗಾಸಿಪ್​ ಹಬ್ಬಿದೆ. ಅದಕ್ಕೆ ಕಾರಣ ಕೂಡ ಇದೆ.

ಅಟ್ಲಿ ಮತ್ತು ಅಲ್ಲು ಅರ್ಜುನ್​ ಅವರ ಸಿನಿಮಾವನ್ನು ‘AAA’ ಎಂದು ಕರೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲು ಅರ್ಜುನ್​ ಅವರ ಎಲ್ಲ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿದಂತೆ ಸಮಂತಾ ರುತ್​ ಪ್ರಭು ಅವರ ಹೆಸರು ಯಾಕೆ ತಳುಕು ಹಾಕಿಕೊಳ್ಳುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರ ಸಿಂಪಲ್​. ಇತ್ತೀಚೆಗೆ ಅಲ್ಲು ಅರ್ಜುನ್​ ಏನೇ ಮಾಡಿದರೂ ಅವರಿಗೆ ಸಮಂತಾ ವಿಶ್​ ಮಾಡುತ್ತಿದ್ದಾರೆ. ಗಾಸಿಪ್​ ಹಬ್ಬಲು ಇದು ಮೊದಲ ಕಾರಣ.

ಚಿತ್ರರಂಗದಲ್ಲಿ ಈ ರೀತಿ ಪರಸ್ಪರ ವಿಶ್​ ಮಾಡಿಕೊಂಡರೆ ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎಂಬ ಗುಮಾನಿ ಮೂಡುತ್ತದೆ. ಕೆಲವೇ ದಿನಗಳ ಹಿಂದೆ ದುಬೈನಲ್ಲಿ ಅಲ್ಲು ಅರ್ಜುನ್​ ಅವರ ಮೇಣದ ಪ್ರತಿಮೆ ಅನಾವರಣ ಆಯಿತು. ಆಗ ಅಲ್ಲು ಅರ್ಜುನ್‌ಗೆ ಸಮಂತಾ ಶುಭ ಹಾರೈಸಿದರು. ಹಾಗಾಗಿ ಅವರಿಬ್ಬರು ಮತ್ತೆ ಜೊತೆಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ನೆಟ್ಟಿಗರು ಊಹಿಸಲು ಆರಂಭಿಸಿದರು.

ಇದನ್ನೂ ಓದಿ: ‘ಆ ಡ್ಯಾನ್ಸ್​ ಮಾಡುವಾಗ ಕಂಫರ್ಟ್​ ಇರಲಿಲ್ಲ’: ಈಗ ಬಾಯ್ಬಿಟ್ಟ ಸಮಂತಾ

ಇಲ್ಲಿ, ಇನ್ನೊಂದು ಇಂಟರೆಸ್ಟಿಂಗ್​ ಸಂಗತಿ ಇದೆ. ನಿರ್ದೇಶಕ ಅಟ್ಲಿ ಅವರು ಯಾವಾಗ ಹೊಸ ಸಿನಿಮಾ ಅನೌನ್ಸ್​ ಮಾಡಿದರೂ ಅದಕ್ಕೆ ಸಮಂತಾ ನಾಯಕಿ ಎಂಬ ಗಾಸಿಪ್​ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ, ಅಟ್ಲಿ ಮತ್ತು ಸಮಂತಾ ಅವರು ‘ಥೇರಿ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಬಾಲಿವುಡ್​​ನಲ್ಲಿ ಅಟ್ಲಿ ಮೊದಲ ಬಾರಿ ಆ್ಯಕ್ಷನ್​-ಕಟ್​ ಹೇಳಿದ ‘ಜವಾನ್​’ ಸಿನಿಮಾಗೂ ಸಮಂತಾ ನಾಯಕಿ ಆಗುತ್ತಾರೆ ಎಂಬ ಗಾಸಿಪ್​ ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಈಗ ಅಲ್ಲು ಅರ್ಜುನ್​ ಮತ್ತು ಅಟ್ಲಿ ಕಾಂಬಿನೇಷನ್​ನ ಸಿನಿಮಾ ವಿಚಾರದಲ್ಲಿ ಸಮಂತಾ ಹೆಸರು ಕೇಳಿಬರುತ್ತಿದೆ. ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬೀಳುವ ತನಕ ಯಾವುದೂ ಖಚಿತವಲ್ಲ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಮಾಜಿ ದಂಪತಿ ಸಮಂತಾ-ನಾಗ ಚೈತನ್ಯ? ಆದರೆ ಒಂದು ಟ್ವಿಸ್ಟ್​

ಇನ್ನೊಂದು ವಿಚಾರ ಏನೆಂದರೆ, ‘ಪುಷ್ಪ’ ಸಿನಿಮಾದಲ್ಲಿ ‘ಉ ಅಂಟಾವ ಮಾವ..’ ಹಾಡು ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಸಮಂತಾ-ಅಲ್ಲು ಅರ್ಜುನ್​ ಅವರು ಬಿಂದಾಸ್​ ಆಗಿ ಹೆಜ್ಜೆ ಹಾಕಿ ಯಶಸ್ಸು ಕಂಡಿದ್ದರು. ಆ ಖ್ಯಾತಿಯನ್ನು ಮತ್ತೆ ಎನ್​ಕ್ಯಾಶ್​ ಮಾಡಿಕೊಳ್ಳಲು ‘ಪುಷ್ಪ 2’ ಸಿನಿಮಾದಲ್ಲೂ ಸಮಂತಾ ಅವರ ಐಟಂ ಡ್ಯಾನ್ಸ್​ ಇಡಲು ನಿರ್ದೇಶಕ ಸುಕುಮಾರ್ ಆಲೋಚಿಸಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು