AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಾಯಣ ಸಿನಿಮಾದ ಶೂಟಿಂಗ್​ ಶುರು: ಮೊದಲು ಚಿತ್ರೀಕರಣಕ್ಕೆ ಬರೋದು ಯಾರು?

ವರದಿಗಳ ಪ್ರಕಾರ, ಮುಂಬೈನ ಫಿಲ್ಮ್​ ಸಿಟಿಯಲ್ಲಿ ಸೆಟ್​ ನಿರ್ಮಾಣ ಮಾಡಲಾಗಿದೆ. ಗುರುಕುಲದ ಸೆಟ್​ ಹಾಕಲಾಗಿದ್ದು, ಗ್ರೀನ್​ ಸ್ಕ್ರೀನ್ ಸಹ ಬಳಸಿಕೊಳ್ಳಲಾಗುತ್ತಿದೆ. ಗುರುಕುಲದ ದೃಶ್ಯಗಳಿಂದಲೇ ‘ರಾಮಾಯಣ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಲಿದ್ದು, ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ.

ರಾಮಾಯಣ ಸಿನಿಮಾದ ಶೂಟಿಂಗ್​ ಶುರು: ಮೊದಲು ಚಿತ್ರೀಕರಣಕ್ಕೆ ಬರೋದು ಯಾರು?
ರಣಬೀರ್​ ಕಪೂರ್​, ಸಾಯಿ ಪಲ್ಲವಿ, ಯಶ್​, ನಿತೇಶ್​ ತಿವಾರಿ, ಸನ್ನಿ ಡಿಯೋಲ್​
ಮದನ್​ ಕುಮಾರ್​
|

Updated on: Apr 01, 2024 | 10:42 PM

Share

‘ದಂಗಲ್​’ ಖ್ಯಾತಿಯ ನಿರ್ದೇಶಕ ನಿತೇಶ್​ ತಿವಾರಿ (Nitesh Tiwari) ಅವರು ರಾಮಾಯಣ ಕಥೆಯಾಧಾರಿತ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲು ಸಿದ್ಧರಾಗಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ (Ramayana Movie) ಬಗ್ಗೆ ಸಿಕ್ಕಾಪಟ್ಟೆ ಗಾಳಿಸುದ್ದಿ ಹರಿದಾಡಿವೆ. ಅವುಗಳ ನಡುವೆಯೇ ಸದ್ದಿಲ್ಲದೇ ಶೂಟಿಂಗ್​ ಆರಂಭ ಆಗುತ್ತಿದೆ ಎಂದು ವರದಿ ಆಗಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರು ರಾಮನಾಗಿ ನಟಿಸಲಿದ್ದಾರೆ. ಹಾಗಂತ ಅವರು ಮೊದಲು ಶೂಟಿಂಗ್​ನಲ್ಲಿ ಭಾಗಿ ಆಗುವುದಿಲ್ಲ!

ನಿರ್ದೇಶಕ ನಿತೇಶ್​ ತಿವಾರಿ ಅವರು ಗುರುಕುಲದ ದೃಶ್ಯದ ಮೂಲಕ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಆರಂಭಿಸಬೇಕು ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ ಬಾಲ ನಟರು ಮೊದಲು ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ರಾಮ, ಲಕ್ಷ್ಮಣ ಹಾಗೂ ಭರತನ ಪಾತ್ರ ಮಾಡಲಿರುವ ಬಾಲ ಕಲಾವಿದರು ಶೂಟಿಂಗ್​ಗೆ ಹಾಜರಿ ಹಾಕಲಿದ್ದಾರೆ. ಏಪ್ರಿಲ್​ 2ರಿಂದಲೇ ಚಿತ್ರೀಕರಣ ಆರಂಭ ಆಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಮುಂಬೈನ ಫಿಲ್ಮ್​ ಸಿಟಿಯಲ್ಲಿ ಸೆಟ್​ ನಿರ್ಮಾಣ ಆಗಿದೆ. ಗುರುಕುಲದ ಸೆಟ್​ ಹಾಕಲಾಗಿದೆ. ಜೊತೆಗೆ ಗ್ರೀನ್​ ಸ್ಕ್ರೀನ್ ಕೂಡ ಬಳಸಿಕೊಳ್ಳಲಾಗುತ್ತಿದೆ. ಗುರುಕುಲದ ದೃಶ್ಯಗಳಿಂದಲೇ ಮೊದಲ ಹಂತದ ಶೂಟಿಂಗ್​ ನಡೆಯಲಿದೆ. ಗುರು ವಸಿಷ್ಠರ ಪಾತ್ರವನ್ನು ಶಿಶಿರ್​ ಶರ್ಮಾ ನಿಭಾಯಿಸಲಿದ್ದಾರೆ. ಆದರೆ ಬಾಲ ಕಲಾವಿದರ ಹೆಸರನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಪಿಂಕ್​ವಿಲ್ಲಾ’ ಸುದ್ದಿ ಪ್ರಕಟಿಸಿದೆ.

ಇದನ್ನೂ ಓದಿ: ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್​ ಕಪೂರ್​ ಆಗಿದ್ದು ಕೇವಲ ‘ಚಿಂಗಂ’

ರಾಮನ ಪಾತ್ರ ಮಾಡಲಿರುವ ರಣಬೀರ್​ ಕಪೂರ್​ ಅವರು ಈಗಾಗಲೇ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈಗ ಅವರು ಲಾಸ್​ ಏಂಜಲಿಸ್​ಗೆ ತೆರಳಲಿದ್ದಾರೆ. ಅಲ್ಲಿ ಅವರ 3ಡಿ ಸ್ಕ್ಯಾನ್​ ಮಾಡಲಾಗುತ್ತಿದೆ. ಈ ಮೊದಲು ಕೂಡ ಅವರು ಒಂದೆರಡು ಬಾರಿ ಅಲ್ಲಿಗೆ ತೆರಳಿ 3ಡಿ ಸ್ಕ್ಯಾನ್​ಗೆ ಒಳಗಾಗಿದ್ದರು. ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಸಮಯದಲ್ಲಿ ಈ ಸ್ಕ್ಯಾನ್​ ಉಪಯೋಗಕ್ಕೆ ಬರಲಿದೆ. ದೊಡ್ಡ ಬಜೆಟ್​ನಲ್ಲಿ ‘ರಾಮಾಯಣ’ ಸಿನಿಮಾ ನಿರ್ಮಾಣ ಆಗಲಿದೆ.

ಇದನ್ನೂ ಓದಿ: ಮದುವೆ ದಿನವೇ ರಣಬೀರ್​ ಬಳಿ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಹೆಣ್ಣಿನ ಕಡೆಯವರು?

ಪಾತ್ರವರ್ಗದ ಬಗ್ಗೆ ಅನೇಕ ಗಾಸಿಪ್​ ಹಬ್ಬಿದೆ. ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಯಶ್​ ಅವರು ರಾವಣನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆಂಜನೇಯನಾಗಿ ಸನ್ನಿ ಡಿಯೋಲ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಅಧಿಕೃತ ಘೋಷಣೆ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ