ಕೃಷ್ಣಮೃಗ ಬೇಟೆ ಪ್ರಕರಣದ ನಂತರ ಆಗಿದ್ದೇನು? ವಿವರಿಸಿದ ನಟ
‘ಶೂಟಿಂಗ್ ವೇಳೆ ಪೊಲೀಸರು ಸೆಟ್‌ಗೆ ಬಂದು ಸೆಟ್ನಲ್ಲಿದ್ದವರನ್ನೆಲ್ಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ ಸೆಟ್‌ನಲ್ಲಿ ವಾತಾವರಣ ತುಂಬಾ ಕೆಟ್ಟದಾಗಿತ್ತು. ಹಾಡಿನ ಶೂಟಿಂಗ್ ಆರಂಭ ಆಗಿತ್ತು. ಆಗಲೇ ಪೊಲೀಸರು ಸೆಟ್‌ಗೆ ಬಂದು ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು’ ಮಹೇಶ್ ಠಾಕೂರ್.
ಸೂರಜ್ ಬರ್ಜತ್ಯ ನಿರ್ದೇಶನದ ‘ಹಮ್ ಸಾಥ್ ಸಾಥ್ ಹೈ’ ಬಾಲಿವುಡ್‌ನ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಒಂದಾಗಿದೆ. 1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ಮೊಹ್ನಿಶ್ ಬಹ್ಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆ ನೀಲಂ ಕೊಠಾರಿ, ಮಹೇಶ್ ಠಾಕೂರ್, ರಿಮಾ ಲಾಗೂ ಮತ್ತು ಅಲೋಕ್ ನಾಥ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರದಲ್ಲಿ ಆನಂದ್ ಬಾಬು ಪಾತ್ರವನ್ನು ನಿರ್ವಹಿಸಿದ ನಟ ಮಹೇಶ್ ಠಾಕೂರ್ ಅವರು ಶೂಟಿಂಗ್ ಸಮಯದಲ್ಲಿ ನಡೆದ ಘಟನೆಯನ್ನು ವಿವರಿಸಿದರು. ಈ ಘಟನೆಯು ಸಲ್ಮಾನ್ (Salman Khan) ಅವರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದೆ.
ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಸಲ್ಮಾನ್ ಖಾನ್
ಆರ್ಜೆ ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿರುವ ಈ ಸಂದರ್ಶನದಲ್ಲಿ ಮಹೇಶ್ ಠಾಕೂರ್ ಮಾತನಾಡಿದ್ದಾರೆ. ‘ಶೂಟಿಂಗ್ ವೇಳೆ ಪೊಲೀಸರು ಸೆಟ್‌ಗೆ ಬಂದು ಸೆಟ್ನಲ್ಲಿದ್ದವರನ್ನೆಲ್ಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ ಸೆಟ್‌ನಲ್ಲಿ ವಾತಾವರಣ ತುಂಬಾ ಕೆಟ್ಟದಾಗಿತ್ತು. ಹಾಡಿನ ಶೂಟಿಂಗ್ ಆರಂಭ ಆಗಿತ್ತು. ಆಗಲೇ ಪೊಲೀಸರು ಸೆಟ್‌ಗೆ ಬಂದು ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು’ ಎಂದಿದ್ದಾರೆ ಅವರು.
‘ನಾನು, ಮೊಹ್ನಿಶ್ ಬಹ್ಲ್ ಮತ್ತು ಕರಿಷ್ಮಾ ಕಪೂರ್ ಆ ಚರ್ಚೆಯಲ್ಲಿ ಭಾಗಿಯಾಗಿರಲಿಲ್ಲ. ಅದರಲ್ಲಿ ಐದು ಜನ ಮಾತ್ರ ಇದ್ದರು. ಬಳಿಕ ಮಹಿಳೆಯರನ್ನು ಪೊಲೀಸರು ಬಿಡುಗಡೆ ಮಾಡಿದರು. ಆದರೆ ನನ್ನ ಪ್ರಕಾರ ಸಲ್ಮಾನ್ ಭಾಯ್ ರಾತ್ರಿಯಿಡೀ ಪೊಲೀಸರ ಜೊತೆಗಿದ್ದರು. ಆಗ ಆತನ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಅಲ್ಲಿಗೆ ಬಂದರು. ಮರುದಿನ ಚಿತ್ರೀಕರಣದಲ್ಲಿ ಸಲ್ಮಾನ್ ಚೆನ್ನಾಗಿಯೇ ಇದ್ದರು’ ಎಂದು ಮಹೇಶ್ ಠಾಕೂರ್ ಹೇಳಿದ್ದಾರೆ.
ಸೆಟ್‌ನಲ್ಲಿ ವಾತಾವರಣ
‘ಮರುದಿನ ಶೂಟಿಂಗ್ ಪ್ರಾರಂಭವಾದಾಗ ಸಲ್ಮಾನ್ ಸೆಟ್‌ನಲ್ಲಿ ಸಂಪೂರ್ಣವಾಗಿ ಚೆನ್ನಾಗಿದ್ದರು. ಕೂಲ್ ಡ್ಯೂಡ್ ಅಂತೆ ಇದ್ದರು. ಸೈಫ್ ಕೂಡ ಸಾಮಾನ್ಯವಾಗಿದ್ದರು. ಈ ಘಟನೆಯ ನಂತರ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಅದರಲ್ಲಿ ಸಲ್ಮಾನ್ ಖಾನ್ ಮತ್ತು ಸೈಫ್ ಅಲಿ ಖಾನ್ ಎಂಬ ಎರಡು ಹೆಸರುಗಳು ಸೇರಿಕೊಂಡಿದ್ದರಿಂದ ಜನರು ಅದನ್ನು ದೊಡ್ಡ ವಿವಾದ ಮಾಡಿದರು. ಆದರೆ ಅಂತಿಮವಾಗಿ ಏನೂ ಆಗಲಿಲ್ಲ. ಆದರೆ ಆ ಸಮಯದಲ್ಲಿ ಜೋಧ್‌ಪುರದಲ್ಲಿ ಶೂಟಿಂಗ್ ರದ್ದುಗೊಳಿಸಲಾಯಿತು ಮತ್ತು ಇಡೀ ಚಿತ್ರತಂಡವನ್ನು ವಾಪಸ್ ಕಳುಹಿಸಲಾಯಿತು’ ಎಂದು ಅವರು ಹೇಳಿದರು.
ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಇರೋ ಈ ಹುಡುಗ ಈಗ ನಟ; ಸೋನಾಕ್ಷಿ ಜೊತೆ ನಡೀತಿದೆ ಡೇಟಿಂಗ್
‘ಎಲ್ಲವೂ ಚೆನ್ನಾಗಿತ್ತು. ಎಲ್ಲರಿಗೂ ಎಲ್ಲವೂ ಗೊತ್ತಿತ್ತು. ನೀವು ಹೀಗೆ ಮಾಡಿದ್ದೀರಾ ಎಂದು ಯಾರೂ ಕೇಳಲಿಲ್ಲ. ಕೆಲಸದಲ್ಲಿನ ಪ್ರಾಮಾಣಿಕತೆ ಸೆಟ್‌ಗಳಲ್ಲಿ ಗೋಚರಿಸಿತು. ಆದರೆ ಶೂಟಿಂಗ್‌ಗೆ ಇನ್ನೂ ಎಂಟು ದಿನಗಳ ಕಾಲಾವಕಾಶ ನೀಡಬೇಕಿತ್ತು. ಆದರೆ, ಅಲ್ಲಿಂದ ಹೊರಡಲೇಬೇಕಾದ ಅನಿವಾರ್ಯತೆ ಬಂದೊದಗಿತ್ತು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ