ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ‘ಪುಷ್ಪ 2’; ಸಾಧ್ಯವಾಗಿದ್ದು ಹೇಗೆ?

ಎಲ್ಲಾ ಸಿನಿಮಾದ ಗೆಲುವನ್ನು ಈಗ 500 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಬೆಂಚ್​ ಮಾರ್ಕ್​ಮೂಲಕ ಅಳೆಯಲಾಗುತ್ತಿದೆ. ಶಾರುಖ್ ಖಾನ್ ನಟನೆಯ 2 ಸಿನಿಮಾಗಳು 2023ರಲ್ಲಿ ರಿಲೀಸ್ ಆಗಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈಗ ‘ಪುಷ್ಪ 2’ ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ‘ಪುಷ್ಪ 2’; ಸಾಧ್ಯವಾಗಿದ್ದು ಹೇಗೆ?
ಅಲ್ಲು ಅರ್ಜುನ್
Edited By:

Updated on: Apr 17, 2024 | 10:52 AM

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಸೂಚನೆ ಸಿಕ್ಕಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡುತ್ತಿದೆ. ಸಿನಿಮಾ ರಿಲೀಸ್​ಗೂ ಮೊದಲೇ ಸಾಕಷ್ಟು ಹಕ್ಕುಗಳು ಮಾರಾಟ ಆಗಿದೆ ಎಂದು ವರದಿ ಆಗಿದೆ. ಹೀಗಾಗಿ ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇದರಿಂದ ನಿರ್ಮಾಪಕರು ಭರ್ಜರಿ ಲಾಭ ಕಂಡಿದ್ದಾರೆ. ಈ ಚಿತ್ರಕ್ಕೆ ಮೂರನೇ ಪಾರ್ಟ್ ಕೂಡ ಬರಲಿದೆ.

ಮೊದಲು ಸಿನಿಮಾ 100 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು ಎಂದರೆ ಅದನ್ನು ದೊಡ್ಡ ಗೆಲುವು ಎಂದು ಕರೆಯಲಾಗುತ್ತಿತ್ತು. ಆದರೆ, ವರ್ಷಗಳು ಕಳೆದಂತೆ ಸಿನಿಮಾ ನಿರ್ಮಾಣದ ವೆಚ್ಛ ಹೆಚ್ಚಿತು. ಟಿಕೆಟ್ ಬೆಲೆ ಕೂಡ ಏರಿಕೆ ಆಗಿದೆ. ಹೀಗಾಗಿ, ಸಿನಿಮಾದ ಗೆಲುವನ್ನು ಈಗ 500 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಬೆಂಚ್​ ಮಾರ್ಕ್​ನಲ್ಲಿ ಅಳೆಯಲಾಗುತ್ತಿದೆ. ಶಾರುಖ್ ಖಾನ್ ನಟನೆಯ ಎರಡು ಸಿನಿಮಾಗಳು 2023ರಲ್ಲಿ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈಗ ‘ಪುಷ್ಪ 2’ ಸಿನಿಮಾ ರಿಲೀಸ್​ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ಮೂಲಗಳ ಪ್ರಕಾರ ‘ಪುಷ್ಪ 2’ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದ ಆಂಧ್ರ ಹಾಗೂ ತೆಲಂಗಾಣ ಭಾಗದ ಹಂಚಿಕೆ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಹಿಂದಿಯಲ್ಲಿ ಈ ಸಿನಿಮಾ ದೊಡ್ಡ ಗೆಲುವು ಕಂಡಿದೆ. ಹೀಗಾಗಿ, ಆ ಭಾಗದಲ್ಲೂ ಸಿನಿಮಾದ ಹಂಚಿಕೆ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಟಿವಿ ಹಕ್ಕು, ಒಟಿಟಿ ಹಕ್ಕು, ಸಾಂಗ್ ರೈಟ್ಸ್ ಕೂಡ ದೊಡ್ಡ ಮಟ್ಟಕ್ಕೆ ಮಾರಾಟ ಆಗಿದ್ದು, ಸಿನಿಮಾದ ಬಿಸ್ನೆಸ್ 1000 ಕೋಟಿ ರೂಪಾಯಿ ದಾಟಿದೆ.

‘ಪುಷ್ಪ’ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ಆಗಿತ್ತು. ‘ಪುಷ್ಪ 2’ ಚಿತ್ರ ಉತ್ತಮವಾಗಿದ್ದರೆ ಇದರ ಮೂರು ಪಟ್ಟು ಗಳಿಕೆಯನ್ನು ಸಿನಿಮಾ ಮಾಡಲಿದೆ. ಅನೇಕ ದಾಖಲೆಗಳನ್ನು ಸಿನಿಮಾ ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದಲ್ಲಿ ಪ್ರೇಕ್ಷಕರು ಊಹಿಸಿದಂತೆ ಇರಲ್ಲ ರಶ್ಮಿಕಾ ಮಂದಣ್ಣ ಪಾತ್ರ

‘ಕಲ್ಕಿ 2898 ಎಡಿ’, ‘ಕಂಗುವ’, ‘ಸಿಂಗಂ 3’ ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಇವುಗಳಿಗಿಂತ ಹೆಚ್ಚಿನ ನಿರೀಕ್ಷೆ ‘ಪುಷ್ಪ 2’ ಚಿತ್ರದ ಮೇಲೆ ಇದೆ. ಸುಕುಮಾರ್ ಅವರು ‘ಪುಷ್ಪ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಚಿತ್ರದ ನಾಯಕಿ. ಅಲ್ಲು ಅರ್ಜುನ್ ಜನ್ಮದಿನದ ಪ್ರಯುಕ್ತ ಈ ಚಿತ್ರದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಆಗಸ್ಟ್ 15ರಂದು ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 10:52 am, Wed, 17 April 24