‘ಪುಷ್ಪ 2’ ಸಿನಿಮಾದಲ್ಲಿ ಪ್ರೇಕ್ಷಕರು ಊಹಿಸಿದಂತೆ ಇರಲ್ಲ ರಶ್ಮಿಕಾ ಮಂದಣ್ಣ ಪಾತ್ರ

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಚಿತ್ರದಲ್ಲಿ ಬೇರೆಯದೇ ಟ್ವಿಸ್ಟ್​ ಎದುರಾಗಲಿದೆ. ರಶ್ಮಿಕಾ ಮಂದಣ್ಣ ಅವರು ನಿಭಾಯಿಸುತ್ತಿರುವ ಶ್ರೀವಲ್ಲಿ ಪಾತ್ರವು ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಪಾತ್ರಕ್ಕೆ ಗ್ರೇ ಶೇಡ್​ ಇರಲಿದೆ. ಆಗಸ್ಟ್​ 15ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಮೇಲೆ ರಶ್ಮಿಕಾ ಮಂದಣ್ಣ ಫ್ಯಾನ್ಸ್​ ಭಾರಿ ನಿರೀಕ್ಷೆ ಹೊಂದಿದ್ದಾರೆ.

‘ಪುಷ್ಪ 2’ ಸಿನಿಮಾದಲ್ಲಿ ಪ್ರೇಕ್ಷಕರು ಊಹಿಸಿದಂತೆ ಇರಲ್ಲ ರಶ್ಮಿಕಾ ಮಂದಣ್ಣ ಪಾತ್ರ
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: Apr 15, 2024 | 10:47 PM

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಬಂದಿದ್ದು ‘ಪುಷ್ಪ’ ಸಿನಿಮಾದಿಂದ. ಆ ಸಿನಿಮಾದಲ್ಲಿ ಅವರು ಶ್ರೀವಲ್ಲಿ ಎಂಬ ಪಾತ್ರ ಮಾಡಿ ಜನಮನ ಗೆದ್ದರು. ಈಗ ‘ಪುಷ್ಪ 2’ (Pushpa 2) ಸಿನಿಮಾದಲ್ಲೂ ಆ ಪಾತ್ರ ಮುಂದುವರಿಯಲಿದೆ. ವಿಶೇಷ ಏನೆಂದರೆ, ಈ ಬಗೆ ಪ್ರೇಕ್ಷಕರಿಗೆ ಹಲವು ಟ್ವಿಸ್ಟ್​ಗಳು ಕಾದಿರಲಿವೆ. ಪ್ರೇಕ್ಷಕರು ಊಹಿಸಿದ್ದಕ್ಕಿಂತಲೂ ಡಿಫರೆಂಟ್​ ಆಗಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಮೂಡಿಬರಲಿದೆ ಎನ್ನಲಾಗಿದೆ. ಆ ರೀತಿಯಲ್ಲಿ ನಿರ್ದೇಶಕ ಸುಕುಮಾರ್​ ಅವರು ಪ್ಲ್ಯಾನ್​ ಮಾಡಿದ್ದಾರೆ. ಅಲ್ಲು ಅರ್ಜುನ್​ (Allu Arjun) ಅಭಿಮಾನಿಗಳು ‘ಪುಷ್ಪ 2’ ಸಿನಿಮಾ ಮೇಲೆ ಇಟ್ಟಿರುವ ನಿರೀಕ್ಷೆ ಬಹಳ ದೊಡ್ಡದು.

ಮೊದಲ ಪಾರ್ಟ್​ನಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರಕ್ಕೆ ತಕ್ಕಮಟ್ಟಿಗಿನ ಸ್ಕೋಪ್​ ಸಿಕ್ಕಿತ್ತು. ‘ಪುಷ್ಪ 2’ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಗ್ರೇ ಶೇಡ್​ ಇರಲಿದೆ ಎಂದು ಹೇಳಲಾಗುತ್ತಿದೆ. ರಕ್ತ ಚಂದನದ ಕಳ್ಳ ಸಾಗಣೆಯಲ್ಲಿ ಡಾನ್​ ಆಗಿರುವ ಪುಷ್ಪರಾಜ್​ನ ಹೆಂಡತಿಯಾಗಿ ಅಬ್ಬರಿಸಲು ಅವರಿಗೆ ಒಂದಷ್ಟು ಸ್ಕ್ರೀನ್​ ಸ್ಪೇಸ್​ ಸಿಗಲಿದೆ. ಈ ಮೂಲಕ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದಲ್ಲಿ ‘ಪುಷ್ಪ 2’ ಸಿನಿಮಾ ಬಹಳ ಮುಖ್ಯವಾಗಲಿದೆ.

ಸಾಮಾನ್ಯವಾಗಿ ಮಾಮೂಲಿ ಕಮರ್ಷಿಯಲ್​ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಕ್ಕೆ ಹೆಚ್ಚು ಸ್ಕೋಪ್​ ಇರುವುದಿಲ್ಲ. ಆದರೆ ‘ಪುಷ್ಪ 2’ ಸಿನಿಮಾದಲ್ಲಿ ಬೇರೆಯದೇ ಟ್ವಿಸ್ಟ್​ ಇರಲಿದೆಯಂತೆ. ರಶ್ಮಿಕಾ ಮಂದಣ್ಣ ಮಾಡುತ್ತಿರುವ ಶ್ರೀವಲ್ಲಿ ಪಾತ್ರವು ಪ್ರೇಕ್ಷಕರಿಗೆ ಸರ್ಪ್ರೈಸ್​ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ರಶ್ಮಿಕಾ ಮಂದಣ್ಣ ಅವರ ಫ್ಯಾನ್ಸ್​ ತುಂಬ ಎಗ್ಸೈಟ್​ ಆಗಿದ್ದಾರೆ. ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ: 51 ಟೇಕ್​ ತೆಗೆದುಕೊಂಡ ಅಲ್ಲು ಅರ್ಜುನ್​; ‘ಪುಷ್ಪ 2’ ಟೀಸರ್​ ಹಿಂದಿದೆ ಅಚ್ಚರಿ ವಿಷಯ

ಏಪ್ರಿಲ್​ 5ರಂದು ರಶ್ಮಿಕಾ ಮಂದಣ್ಣ ಅವರ ಬರ್ತ್​ಡೇ ಪ್ರಯುಕ್ತ ಶ್ರೀವಲ್ಲಿ ಪಾತ್ರದ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಸೋಶಿಯಲ್​ ಮೀಡಿಯಾದಲ್ಲಿ ಅದು ವೈರಲ್​ ಆಗಿದೆ. ಅದಕ್ಕೂ ಮುನ್ನ ಶೂಟಿಂಗ್​ ಸೆಟ್​ನಲ್ಲಿದ್ದ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಲೀಕ್​ ಆಗಿತ್ತು. ಅದನ್ನು ನೋಡಿ ಅಭಿಮಾನಿಗಳು ವಾವ್​ ಎಂದಿದ್ದರು. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಶ್ರೀವಲ್ಲಿ ಪಾತ್ರದ ಬಗ್ಗೆ ರಶ್ಮಿಕಾ ಅವರ ಅಭಿಮಾನಿಗಳಿಗೆ ಇರುವ ಕ್ರೇಜ್​ ಜಾಸ್ತಿ ಆಗುತ್ತಲೇ ಇದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್​, ಫಹಾದ್ ಫಾಸಿಲ್​ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

ಬಿಗ್​ ಬಜೆಟ್​ನಲ್ಲಿ ‘ಪುಷ್ಪ 2’ ಸಿನಿಮಾ ಮೂಡಿಬರುತ್ತಿವೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ಮ್ಯೂಸಿಕ್​ ರೈಟ್ಸ್​ ದಾಖಲೆ ಮೊತ್ತಕ್ಕೆ ಮಾರಾಟ ಆಗಿರುವ ಬಗ್ಗೆ ಸುದ್ದಿ ಕೇಳಿಬಂದಿದೆ. ದೇವಿ ಶ್ರೀ ಪ್ರಸಾದ್​ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ