ನಟನೆಯಿಂದ ದೂರ ಉಳಿದಿದ್ದೇಕೆ ಲಾರಾ ದತ್ತ? 30ನೇ ವಯಸ್ಸಿಗೆ ಬಂತು ಬೇಸರ
ಲಾರಾ ದತ್ತ ಹಲವು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು ಇತ್ತೀಚೆಗೆ ನಾಯಕಿ ಆಗಿ ಮಿಂಚಿದ್ದು ಕಡಿಮೆ. ಇದಕ್ಕೆ ಅವರಿಗೆ ಯಾವುದೇ ಬೇಸರ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದರು.

ನಟಿ ಲಾರಾ ದತ್ತ (Lara Dutta) ಅವರಿಗೆ ಇಂದು (ಏಪ್ರಿಲ್ 16) ಜನ್ಮದಿನ. ಅವರು ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರಿಗೆ ಈಗ 46 ವರ್ಷ ವಯಸ್ಸು. ಮೊದಲಿನಷ್ಟು ಗ್ಲಾಮರ್ ಇಲ್ಲದೆ ಹೋದರು ಫಿಟ್ ಆಗಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಮೂಲಕ ಅವರು ಕಂಬ್ಯಾಕ್ ಮಾಡಿದ್ದರು. ಅವರು ಚಿತ್ರರಂಗದಿಂದ ದೂರ ಉಳಿದಿದ್ದು ಏಕೆ ಎಂದು ಹೇಳಿಕೊಂಡಿದ್ದರು. 30ನೇ ವಯಸ್ಸಿಗೆ ಅವರು ಸುಸ್ತಾಗಿದ್ದರು.
2003ರಲ್ಲಿ ರಿಲೀಸ್ ಆದ ‘ಅಂದಾಜ್’ ಸಿನಿಮಾ ಮೂಲಕ ಲಾರಾ ದತ್ತ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ಫೆಮಿನಾ ಮಿಸ್ ಇಂಡಿಯಾ ಹಾಗೂ ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮದಿದ್ದರು. ಆ ಬಳಿಕ ಸಿನಿಮಾ ರಂಗದಲ್ಲಿ ಅವರಿಗೆ ಆಫರ್ ಬಂತು. ಹಲವು ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರು ಇತ್ತೀಚೆಗೆ ನಾಯಕಿ ಆಗಿ ಮಿಂಚಿದ್ದು ಕಡಿಮೆ. ಇದಕ್ಕೆ ಅವರಿಗೆ ಯಾವುದೇ ಬೇಸರ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದರು.
‘ನಾನು ಓರ್ವ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ನಾನು ನಟಿ ಆಗಬೇಕು ಎಂದು ಎಂದಿಗೂ ಕನಸು ಕಂಡವನಲ್ಲ’ ಎಂದಿದ್ದರು ಅವರು. ಸಿನಿಮಾ ರಂಗದಿಂದ ದೂರ ಇರುವುದಕ್ಕೂ ಅವರು ಕಾರಣ ನೀಡಿದ್ದರು. ‘30 ವರ್ಷ ತಲುಪುವ ವೇಳೆಗೆ ನಾನು ಕೆಲಸ ಮಾಡಿ ದಣಿದಿದ್ದೆ. ಆಗ ನಮ್ಮ ಇಂಡಸ್ಟ್ರಿ ಬೇರೆ ರೀತಿ ಇತ್ತು. ಗ್ಲಾಮರಸ್ ನಟಿ ಒಬ್ಬರು ಸಿನಿಮಾದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ನಮ್ಮನ್ನು ಆಯ್ಕೆ ಮಾಡುತ್ತಿದ್ದರು. ನಾವು ಹೀರೋನ ಗರ್ಲ್ಫ್ರೆಂಡ್ ಆಗಿ ಅಥವಾ ಪತ್ನಿ ಪಾತ್ರ ಮಾಡಬೇಕಿತ್ತು’ ಎಂದಿದ್ದರು ಲಾರಾ ದತ್.
ಆ ಬಳಿಕ ಲಾರಾ ದತ್ ಅವರು ಕಾಮಿಡಿ ಸಿನಿಮಾ ಮಾಡಲು ನಿರ್ಧರಿಸಿದರು. ಇದರಿಂದ ಹೆಚ್ಚು ಸ್ಕೋಪ್ ಇರುವ ಪಾತ್ರ ಸಿಗುತ್ತದೆ ಅನ್ನೋದು ಅವರ ನಂಬಿಕೆ ಆಗಿತ್ತು. ಹೀಗಾಗಿ, ‘ನೋ ಎಂಟ್ರಿ’, ‘ಪಾರ್ಟ್ನರ್’, ‘ಹೌಸ್ಫುಲ್’ ಅಂಥ ಸಿನಿಮಾ ಮಾಡಿದರು.
‘ನನಗೆ ಗರ್ಲ್ಫ್ರೆಂಡ್, ಹೆಂಡತಿ ಪಾತ್ರ ಮಾಡೋಕೆ ಇಷ್ಟ ಇರಲಿಲ್ಲ. ಹೀಗಾಗಿ, ನಾನು ಕಾಮಿಡಿ ಸಿನಿಮಾ ಮಾಡಿದೆ. ಗ್ಲಾಮರಸ್ ಹೀರೋಯಿನ್ ಪಾತ್ರಕ್ಕೆ ಮಾತ್ರ ನಾನು ಸೀಮಿತ ಆಗಿಲ್ಲ’ ಎಂದಿದ್ದರು ಅವರು. ಲಾರಾ ದತ್ ಅವರಿಗೆ ಮಗು ಜನಿಸಿದ ಬಳಿಕ ಅವರು ಇಂಡಸ್ಟ್ರಿಯಿಂದ ಕೊಂಚ ದೂರ ಉಳಿದರು.
ಇದನ್ನೂ ಓದಿ: 2ನೇ ಮಗು ಪಡೆಯಲು ಕಳೆದ 7 ವರ್ಷದಿಂದ ಪ್ರಯತ್ನಿಸುತ್ತಿರುವ ರಾಣಿ ಮುಖರ್ಜಿ
ವಯಸ್ಸನ್ನು ಆಧರಿಸಿ ಸಿನಿಮಾದಲ್ಲಿ ಚಾನ್ಸ್ ನೀಡಲಾಗುತ್ತದೆ ಅನ್ನೋದು ಲಾರಾ ಆರೋಪ. ಆದಾಗ್ಯೂ, ಕಾಜೋಲ್, ರಾಣಿ ಮುಖರ್ಜಿ, ಮಾಧುರಿ ದೀಕ್ಷಿತ್ ಅವರು ಚಿತ್ರರಂಗದಲ್ಲಿ ಇದ್ದಾರೆ. ದಪ್ಪ ಆಗಿದ್ದಾರೆ, ಸಣ್ಣ ಆಗಿದ್ದೀಯಾ ಎನ್ನುವ ಕಮೆಂಟ್ಗಳು ಬರುತ್ತಿರುತ್ತವಂತೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ