ಜೀರೋ ಸೈಜ್ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ಪ್ರಿಯಾಮಣಿ
ಬಾಲಿವುಡ್ನಲ್ಲಿ ಗ್ಲಾಮರ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ, ಮಲಯಾಳಂ ಸೇರಿ ದಕ್ಷಿಣದ ಕೆಲವು ಭಾಷೆಗಳ ಸಿನಿಮಾಗಳಲ್ಲಿ ಗ್ಲಾಮರ್ಗಿಂತ ನಟನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದನ್ನು ಪ್ರಿಯಾಮಣಿ ಒಪ್ಪಿಕೊಂಡಿದ್ದಾರೆ.

ಬಾಡಿ ಶೇಮಿಂಗ್ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಚರ್ಮದ ಬಣ್ಣ, ದೇಹದ ವಿಚಾರ ಇಟ್ಟುಕೊಂಡು ನಟಿಯರನ್ನು ಟೀಕೆ ಮಾಡಿದ ಅನೇಕ ಉದಾಹರಣೆ ಇದೆ. ಅಂತರ್ಜಾಲ ಬಳಕೆ ಕೂಡ ಹೆಚ್ಚಿದ್ದು, ನಟಿಯರ ಬಗ್ಗೆ ಸುಲಭದಲ್ಲಿ ಕಮೆಂಟ್ ಮಾಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಅವರ ಪ್ರಾಫೈಲ್ಗೆ ಹೋಗಿ ಪೋಸ್ಟ್ಗಳಿಗೆ ಕಮೆಂಟ್ ಮಾಡೋ ಅವಕಾಶ ಇದೆ. ಅನೇಕ ಸೆಲೆಬ್ರಿಟಿಗಳು ಇದರಿಂದ ತೊಂದರೆ ಅನುಭವಿಸಿದ್ದಾರೆ. ನಟಿ ಪ್ರಿಯಾಮಣಿ (Priyamani) ಅವರು ಈ ಬಗ್ಗೆ ಮಾತನಾಡಿದ್ದಾರೆ. ಜೀರೋ ಸೈಜ್ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.
ಬಾಲಿವುಡ್ನಲ್ಲಿ ಗ್ಲಾಮರ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ, ಮಲಯಾಳಂ ಸೇರಿ ದಕ್ಷಿಣದ ಕೆಲವು ಭಾಷೆಗಳ ಸಿನಿಮಾಗಳಲ್ಲಿ ಗ್ಲಾಮರ್ಗಿಂತ ನಟನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದನ್ನು ಪ್ರಿಯಾಮಣಿ ಒಪ್ಪಿಕೊಂಡಿದ್ದಾರೆ. ‘ನೀವು ಉತ್ತಮವಾಗಿ ಕಾಣಬೇಕು ಎಂದಿದ್ದರೆ ಅದಕ್ಕೆ ಬೇಕಾದದ್ದನ್ನು ನೀವೇ ಮಾಡಬೇಕು. ಅದು ನಿಮ್ಮ ವೈಯಕ್ತಿಕ ಆಯ್ಕೆ. ನಾನು ಇರುವ ಇಂಡಸ್ಟ್ರಿ ಹೇಗಿದೆ ಎಂದರೆ ಇಲ್ಲಿ ಹೋಲಿಕೆಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣದಲ್ಲಿ ನನಗೆ ಯಾರೂ ಜೀರೋ ಸೈಜ್ ಮಾಡಿಕೊಳ್ಳಿ ಎಂದು ಹೇಳಿಲ್ಲ’ ಎಂದಿದ್ದಾರೆ ಅವರು.
‘ನನ್ನ ಸಮಕಾಲೀನರಂತೆ ನಾನು ಏಕೆ ಕಾಣುವುದಿಲ್ಲ ಎಂದು ಜನರು ನನ್ನನ್ನು ಕೇಳುತ್ತಾರೆ. ಈ ರೀತಿಯ ಮಾತು ಕುಟುಂಬದಿಂದಲೂ ಬರಬಹುದು. ಅವರು ನಿಮ್ಮ ಮೇಲೆ ನೆಗಟಿವ್ ಕಮೆಂಟ್ ಮಾಡುವ ಉದ್ದೇಶ ಹೊಂದಿರುವುದಿಲ್ಲ. ಅವರು ನಿಮ್ಮನ್ನು ಡುಮ್ಮಿ ಎಂದು ಕರೆಯುವುದಿಲ್ಲ’ ಎಂದಿದ್ದಾರೆ ಪ್ರಿಯಾಮಣಿ.
‘ಇಂದು ನಮ್ಮ ನಟಿಯರು ತುಂಬಾ ಫಿಟ್ ಆಗಿದ್ದಾರೆ. ತಿನ್ನುವ ಆಹಾರದ ಬಗ್ಗೆ ಮತ್ತು ಹೇಗೆ ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ಆದರೆ ಒಂದು ಕಾಲದಲ್ಲಿ ಅಷ್ಟೊಂದು ಜಾಗೃತರಾಗಿದ್ದ ನಟಿಯರು ಕಡಿಮೆ. ಅವರು ಏನು ಬೇಕೋ ಅದನ್ನು ತಿಂದರು. ಪ್ರೇಕ್ಷಕರು ಕಲಾವಿದರಾಗಿ ನಮ್ಮನ್ನು ಇಷ್ಟಪಟ್ಟರು. ಇತ್ತೀಚೆಗೆ ಸೈಜ್ ಜೀರೋ ವಿಚಾರ ಹೆಚ್ಚು ಚರ್ಚೆಯಲ್ಲಿದೆ’ ಎಂದಿದ್ದಾರೆ ಅವರು.
ಪ್ರಿಯಾಮಣಿ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆ ಆದ ಕಾರಣಕ್ಕೂ ಅವರನ್ನು ಅನೇಕರು ಟೀಕೆ ಮಾಡಿದ್ದಿದೆ. ಆದರೆ, ಈ ಟೀಕೆಗಳನ್ನು ಅವರು ಮೆಟ್ಟಿ ನಿಂತಿದ್ದಾರೆ. ಪತಿಯನ್ನು ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಜೊತೆಗೆ ಸಿನಿಮಾಗಳನ್ನು ಮಾಡಲು ಪತಿಯಿಂದ ಬೆಂಬಲ ಸಿಗುತ್ತಿರುವುದಕ್ಕೆ ಅವರು ಖುಷಿಪಟ್ಟಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಹೆಮ್ಮೆ ಇದೆ. ಪತಿಯ ವಿಚಾರದಲ್ಲಿ ಮಾಡಿದ ಟ್ರೋಲ್ಗಳು ತಮ್ಮ ಮೇಲೆ ಹಾಗೂ ತಮ್ಮ ಕುಟುಂಬದ ಮೇಲೆ ಪ್ರಭಾವ ಬೀರದಂತೆ ಅವರು ನೋಡಿಕೊಂಡಿದ್ದಾರಂತೆ.
ಇದನ್ನೂ ಓದಿ: ‘ಇಡೀ ಜೀವನವನ್ನು ಒಟ್ಟಿಗೆ ಕಳೆಯುತ್ತೇವೆ’; ಪತಿ ಮುಸ್ತಫಾ ಬಗ್ಗೆ ಪ್ರಿಯಾಮಣಿ ಮಾತು
ಪ್ರಿಯಾಮಣಿಗೆ ಬ್ಯಾಕ್ ಟು ಬ್ಯಾಕ್ ಗೆಲುವು ಸಿಗುತ್ತಿದೆ. ಅವರ ನಟನೆಯ ‘ಜವಾನ್’ ಯಶಸ್ಸು ಕಂಡಿದೆ. ಇದರ ಜೊತೆಗೆ ‘ಮೈದಾನ್’ ಕೂಡ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 am, Tue, 16 April 24