AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಡೀ ಜೀವನವನ್ನು ಒಟ್ಟಿಗೆ ಕಳೆಯುತ್ತೇವೆ’; ಪತಿ ಮುಸ್ತಫಾ ಬಗ್ಗೆ ಪ್ರಿಯಾಮಣಿ ಮಾತು

‘ನನ್ನ ಜೊತೆ ದೃಢವಾಗಿ ನಿಲ್ಲುವಂತೆ ನಾನು ಕೋರಿಕೊಂಡಿದ್ದೆ. ಏನೇ ಆದರೂ ಎಲ್ಲ ವಿಚಾರಗಳು ನನ್ನ ಬಳಿಗೆ ಬರುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನನ್ನ ಪತಿ ನನಗೆ ಭರವಸೆ ನೀಡಿದರು. ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆ ಇರುವಂತೆ ಅವರು ಕೇಳಿದರು’ ಎಂದಿದ್ದಾರೆ ಪ್ರಿಯಾಮಣಿ.

‘ಇಡೀ ಜೀವನವನ್ನು ಒಟ್ಟಿಗೆ ಕಳೆಯುತ್ತೇವೆ’; ಪತಿ ಮುಸ್ತಫಾ ಬಗ್ಗೆ ಪ್ರಿಯಾಮಣಿ ಮಾತು
ಮುಸ್ತಫಾ-ಪ್ರಿಯಾಮಣಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Apr 15, 2024 | 12:10 PM

Share

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಪ್ರಿಯಾಮಣಿ (Priyamani) ಹಾಗೂ ನಟ ಅಜಯ್ ದೇವಗನ್ ಅಭಿನಯದ ‘ಮೈದಾನ್’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕಮಾಲ್ ಮಾಡಿಲ್ಲ. ಆದರೆ, ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ ವಿವಾಹವಾಗಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಅವರು ಸಾಕಷ್ಟು ಟ್ರೋಲ್​ಗೆ ಒಳಗಾಗಬೇಕಾಯಿತು. ಇದು ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದೆಯೇ ಎಂದು ಕೇಳಲಾಯಿತು. ‘ನಿಜ ಹೇಳಬೇಕೆಂದರೆ, ಇದು ನನ್ನ ಮೇಲೆ ಅಥವಾ ನನ್ನ ಹೆತ್ತವರ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಪತಿ ನನ್ನ ಹಿಂದೆ ದೃಢವಾಗಿ ನಿಂತರು’ ಎಂದು ಹೆಮ್ಮೆಯಿಂದ ಅವರು ಹೇಳಿದ್ದಾರೆ.

‘ನನ್ನ ಜೊತೆ ದೃಢವಾಗಿ ನಿಲ್ಲುವಂತೆ ನಾನು ಕೋರಿಕೊಂಡಿದ್ದೆ. ಏನೇ ಆದರೂ ಎಲ್ಲ ವಿಚಾರಗಳು ನನ್ನ ಬಳಿಗೆ ಬರುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನನ್ನ ಪತಿ ನನಗೆ ಭರವಸೆ ನೀಡಿದರು. ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆ ಇರುವಂತೆ ಅವರು ಕೇಳಿದರು’ ಎಂದಿದ್ದಾರೆ ಪ್ರಿಯಾಮಣಿ. ‘ನಾವಿಬ್ಬರೂ ಡೇಟಿಂಗ್ ಮಾಡುವಾಗ  ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆ. ಆ ಸಮಯದಲ್ಲಿ ನಾನು ನನ್ನೊಂದಿಗೆ ಇರಿ ಮತ್ತು ನನ್ನ ಮೇಲೆ ನಂಬಿಕೆ ಇಡಿ ಎಂದು ಅವರಿಗೆ ಹೇಳಿದೆ. ನಾವು ನಮ್ಮ ಇಡೀ ಜೀವನವನ್ನು ಪರಸ್ಪರ ಕಳೆಯಲು ನಿರ್ಧರಿಸಿದ್ದೇವೆ. ಹಾಗಾಗಿ ದಾರಿಯುದ್ದಕ್ಕೂ ಏನೇ ಬಂದರೂ ಅದನ್ನು ನಾವು ಒಟ್ಟಾಗಿ ಎದುರಿಸುತ್ತೇವೆ. ಇಂತಹ ತಿಳುವಳಿಕೆಯ ವ್ಯಕ್ತಿ ಜೊತೆ ಇರಲು ಖುಷಿ ಆಗುತ್ತದೆ. ಎಲ್ಲ ಸಮಸ್ಯೆಗಳನ್ನೂ ಹೇಗೆ ಎದುರಿಸಬೇಕು ಎಂಬುದು ಅವರಿಗೆ ಗೊತ್ತಿದೆ’ ಎಂದು ಪ್ರಿಯಾಮಣಿ ಹೇಳಿದ್ದಾರೆ.

‘ಟ್ರೋಲ್​ ಬಗ್ಗೆ ನನಗೆ ವಿಷಾದ ಇದೆ. ಮದುವೆ ಆದ ಸಮಯದಲ್ಲಿ ನಾವು ಮುಂಬೈನಲ್ಲಿ ಇರಲಿಲ್ಲ. ನಾನು ನನ್ನ ಪತಿಯೊಂದಿಗೆ ಬೆಂಗಳೂರಿನಲ್ಲಿದ್ದೆ. ನಾವು ಎಲ್ಲವನ್ನೂ ನೋಡಿಕೊಂಡೆವು. ಅದು ಕುಟುಂಬದ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ. ಟೀಕೆಗಳ ಬಗ್ಗೆ ಹೆಚ್ಚು ಯೋಚಿಸಬೇಡ, ಕೊನೆಯಲ್ಲಿ ನಾವಿಬ್ಬರೂ ಒಟ್ಟಿಗೆ ಇರುವುದೇ ಹೆಚ್ಚು ಮುಖ್ಯ ಎಂದು ಅವರು ಹೇಳಿದರು’ ಎಂದು ಖುಷಿಯಿಂದ ಹೇಳಿಕೊಡಿದ್ದಾರೆ ಪ್ರಿಯಾಮಣಿ.

ಇದನ್ನೂ ಓದಿ: ಪ್ರಿಯಾಮಣಿ ಮೊದಲ ಸಂಭಾವನೆ ಎಷ್ಟು? ಅವರಲ್ಲಿದೆ ಒಂದು ಅಪೂರ್ಣ ಕನಸು

ಪ್ರಿಯಾಮಣಿ ಬಾಲಿವುಡ್ ಹಾಗೂ ಸೌತ್ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಅವರು ಯಾಮಿ ಗೌತಮ್ ಅವರ ‘ಆರ್ಟಿಕಲ್ 370′ ಮತ್ತು ಶಾರುಖ್ ಖಾನ್ ಅವರ ‘ಜವಾನ್’ ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಶೀಘ್ರದಲ್ಲೇ ಜನಪ್ರಿಯ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್ 3′ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಈ ಸರಣಿಯಲ್ಲಿ ಸುಚಿತ್ರಾ ಹೆಸರಿನ ಪಾತ್ರ ಮಾಡಿದ್ದಾರೆ. ಕಥಾ ನಾಯಕನ ಪತ್ನಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಈ ಸೀರಿಸ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ