ಪ್ರಿಯಾಮಣಿ ಮೊದಲ ಸಂಭಾವನೆ ಎಷ್ಟು? ಅವರಲ್ಲಿದೆ ಒಂದು ಅಪೂರ್ಣ ಕನಸು
ಪ್ರಿಯಾಮಣಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರ ತೆಲುಗು ಸಿನಿಮಾ ‘ಎವರೆ ಆಟಗಾಡು’ ಮೂಲಕ. ಈ ಚಿತ್ರದಲ್ಲಿ ಅವರ ನಟನೆಗೆ ಮೆಚ್ಚುಗೆ ಸಿಕ್ಕಿತು. ಆ ಬಳಿಕ ಅವರು ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅವರು ಪ್ರತಿ ಚಿತ್ರಕ್ಕೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ

ನಟಿ ಪ್ರಿಯಾಮಣಿ (Priyamani) ಅವರು ಹಿಂದಿ ಹಾಗೂ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ರಾಜ್ ಹಾಗೂ ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಸುಚಿತ್ರಾ ಹೆಸರಿನ ಪಾತ್ರ ಮಾಡಿ ಅವರು ಎಲ್ಲರ ಮನ ಗೆದ್ದರು. ಈ ಸರಣಿಗಾಗಿ ಅವರು ಕೋಟ್ಯಂತ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅವರ ಮೊದಲ ಸಂಭಾವನೆ ಕೇವಲ 500 ರೂಪಾಯಿ ಎಂದರೆ ನೀವು ನಂಬಲೇಬೇಕು. ಆ ಬಗ್ಗೆ ಇಲ್ಲಿದೆ ವಿವರ.
ಪ್ರಿಯಾಮಣಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರ ತೆಲುಗು ಸಿನಿಮಾ ‘ಎವರೆ ಆಟಗಾಡು’ ಮೂಲಕ. ಈ ಚಿತ್ರದಲ್ಲಿ ಅವರ ನಟನೆಗೆ ಮೆಚ್ಚುಗೆ ಸಿಕ್ಕಿತು. ಆ ಬಳಿಕ ಅವರು ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅವರು ಪ್ರತಿ ಚಿತ್ರಕ್ಕೆ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಗ್ಲಾಮರ್, ಮಹಿಳಾ ಪ್ರಧಾನ ಸೇರಿ ಎಲ್ಲಾ ರೀತಿಯ ಪಾತ್ರಗಳನ್ನು ಅವರು ಮಾಡುತ್ತಾರೆ. ಅವರ ಮೊದಲ ಸಂಭಾವನೆ 500 ರೂಪಾಯಿ ಮಾತ್ರ.
ಸಂದರ್ಶನ ಒಂದರಲ್ಲಿ ಪ್ರಿಯಾಮಣಿ ಅವರು ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮೊದಲ ಸಂಭಾವನೆ 500 ರೂಪಾಯಿ. ನಾನು ಅದನ್ನು ಹಾಗೆಯೇ ಕೂಡಿಟ್ಟಿದ್ದೇನೆ’ ಎಂದಿದ್ದಾರೆ ಅವರು. ಆದರೆ, ಇದು ನಟನೆಯಿಂದ ಬಂದ ಹಣವೋ ಅಥವಾ ಮಾಡೆಲಿಂಗ್ನಿಂದ ಬಂದ ಹಣವೋ ಎಂಬುದನ್ನು ಅವರು ಹೇಳಿಲ್ಲ. ಇದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ನಟಿ ಆಗಬೇಕು ಎಂದು ಕನಸು ಕಂಡು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಬಳಿಕ ಬೇರೆ ಬೇರೆ ರೀತಿಯ ಪಾತ್ರಮಾಡಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಪ್ರಿಯಾಮಣಿ ಅವರ ಕನಸೇ ಬೇರೆ. ಅವರಿಗೆ ತಮ್ಮದೇ ಸಿನಿಮಾದಲ್ಲಿ ಹಾಡಬೇಕು ಎಂದು ಕನಸು ಇದೆ. ಬಹುತೇಕ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮೇಕಪ್ ಇಲ್ಲದೆ ಕಾಣಿಸಿಕೊಳ್ಳಲು ಹೆದರುತ್ತಾರೆ. ಇನ್ನು ಸಿನಿಮಾಗಳಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಳ್ಳೋದು ದೂರದ ಮಾತು. ಪ್ರಿಯಾಮಣಿಗೆ ಮೇಕಪ್ ಇಲ್ಲದೆ ಕಾಣಿಸಿಕೊಳ್ಳಬೇಕು ಎನ್ನುವ ಇಚ್ಛೆ ಇದೆ.
ಪ್ರಿಯಾಮಣಿ ಅವರು ಕನ್ನಡದಲ್ಲಿ ‘ವಿಷ್ಣುವರ್ಧನ’, ‘ಅಣ್ಣಾಬಾಂಡ್’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್ಗಾಗಿ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಅವರ ನಟನೆಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಶಾರುಖ್ ಖಾನ್ ಮುಖ್ಯಭೂಮಿಕೆ ಮಾಡಿದ ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ದಕ್ಷಿಣ ಭಾರತ ಚಿತ್ರರಂಗವನ್ನು ಬಾಯ್ತುಂಬ ಹೊಗಳಿದ ಪ್ರಿಯಾಮಣಿ
ಪ್ರಿಯಾಮಣಿ ಈ ವರ್ಷ ಸಖತ್ ಬ್ಯುಸಿ ಇದ್ದಾರೆ. ‘ಭಾಮಾಕಲಾಪಮ್ 2’, ‘ಆರ್ಟಿಕಲ್ 370’ ಈಗಾಗಲೇ ರಿಲೀಸ್ ಆಗಿದೆ. ಏಪ್ರಿಲ್ 10ರಂದು ‘ಮೈದಾನ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ಅವರು 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



