AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyamani: ದಕ್ಷಿಣ ಭಾರತ ಚಿತ್ರರಂಗವನ್ನು ಬಾಯ್ತುಂಬ ಹೊಗಳಿದ ಪ್ರಿಯಾಮಣಿ

ಬಾಲಿವುಡ್​ನವರು ನಾವೇ ಶ್ರೇಷ್ಠ ಎಂದರೆ, ದಕ್ಷಿಣದವರು ನಾವು ಶ್ರೇಷ್ಠ ಎಂದಿದ್ದಾರೆ. ಇನ್ನೂ ಕೆಲವರು ಎರಡೂ ಇಂಡಸ್ಟ್ರಿ ಒಂದು ಎಂದಿದ್ದಾರೆ. ದಕ್ಷಿಣ ಹಾಗೂ ಬಾಲಿವುಡ್​ನಲ್ಲಿ ಕೆಲಸ ಮಾಡಿದ ಅನುಭವ ಇರುವ ಪ್ರಿಯಾಮಣಿ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Priyamani: ದಕ್ಷಿಣ ಭಾರತ ಚಿತ್ರರಂಗವನ್ನು ಬಾಯ್ತುಂಬ ಹೊಗಳಿದ ಪ್ರಿಯಾಮಣಿ
ಪ್ರಿಯಾಮಣಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 11, 2024 | 7:56 AM

Share

ನಟಿ ಪ್ರಿಯಾಮಣಿ (Priyamani) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು 2003ರಲ್ಲಿ ಚಿತ್ರರಂಗಕ್ಕೆ ಬಂದರು. 21 ವರ್ಷಗಳ ಕಾಲ ಅವರು ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಾ ಚಿತ್ರರಂಗದವರಿಗೂ ಅವರ ಪರಿಚಯ ಇದೆ. ಅವರು ಈಗ ಒಂದು ಪ್ರಮುಖ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಚಿತ್ರರಂಗ ಹಾಗೂ ದಕ್ಷಿಣ ಚಿತ್ರರಂಗ ಒಂದೇ ಅಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಜೊತೆಗೆ ದಕ್ಷಿಣದ ಚಿತ್ರರಂಗದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ದಕ್ಷಿಣದ ಚಿತ್ರರಂಗ ಹಾಗೂ ಬಾಲಿವುಡ್ ಸಿನಿಮಾ ರಂಗ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ. ಈ ಬಗ್ಗೆ ಅನೇಕರು ಮಾತನಾಡಿದ್ದಾರೆ. ಬಾಲಿವುಡ್​ನವರು ನಾವೇ ಶ್ರೇಷ್ಠ ಎಂದರೆ, ದಕ್ಷಿಣದವರು ನಾವು ಶ್ರೇಷ್ಠ ಎಂದಿದ್ದಾರೆ. ಇನ್ನೂ ಕೆಲವರು ಎರಡೂ ಇಂಡಸ್ಟ್ರಿ ಒಂದು ಎಂದಿದ್ದಾರೆ. ದಕ್ಷಿಣ ಹಾಗೂ ಬಾಲಿವುಡ್​ನಲ್ಲಿ ಕೆಲಸ ಮಾಡಿದ ಅನುಭವ ಇರುವ ಪ್ರಿಯಾಮಣಿ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಎರಡೂ ಚಿತ್ರರಂಗದಲ್ಲಿ ಚಿತ್ರೀಕರಣ ಹಾಗೂ ಪಾತ್ರಗಳ ಆಯ್ಕೆ ಭಿನ್ನವಾಗಿದೆ. ಹಿಂದಿಯಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಎಂಬುವವರು ಇರುತ್ತಾರೆ. ಅವರು ನಿಮ್ಮನ್ನು ಕರೆಯುತ್ತಾರೆ. ಅವರಿಗೆ ಓಕೆ ಆದ ಬಳಿಕ ತಂಡದ ಜೊತೆ ಮಾತುಕತೆ ನಡೆಯುತ್ತದೆ. ಆದರೆ, ದಕ್ಷಿಣದಲ್ಲಿ ಹಾಗಿಲ್ಲ. ಅಲ್ಲಿ ನಿಮಗೆ ನಿರ್ಮಾಪಕರು ಅಥವಾ ನಿರ್ದೇಶಕರಿಂದ ನೇರ ಕರೆ ಬರುತ್ತದೆ. ಬಾಲಿವುಡ್​ನಲ್ಲಿ ಕಾಸ್ಟಿಂಗ್ ಡೈರೆಕ್ಟರ್​ಗಳ ನಿರ್ಧಾರ ಅಂತಿಮವಾಗಿರುತ್ತದೆ’ ಎಂದಿದ್ದಾರೆ ಪ್ರಿಯಾಮಣಿ.

‘ಬಾಲಿವುಡ್​ನಲ್ಲಿ ಒಂದು ವಿಭಾಗದವರು ಇನ್ನೊಂದು ವಿಭಾಗದಲ್ಲಿ ತಲೆಹಾಕುವುದಿಲ್ಲ. ಆದರೆ, ದಕ್ಷಿಣದಲ್ಲಿ ಹಾಗಿಲ್ಲ. ಸಿನಿಮಾ ಬೇಗ ಪೂರ್ಣಗೊಳ್ಳಬೇಕು ಎನ್ನುವ ಕಾರಣಕ್ಕೆ ಎಲ್ಲರೂ ಎಲ್ಲಾ ಕೆಲಸ ಮಾಡುತ್ತಾರೆ’ ಎಂದಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.

‘ದಕ್ಷಿಣದಲ್ಲಿ ಉಡುಗೆ ಮತ್ತು ಮೇಕಪ್ ವಿಭಾಗಗಳಲ್ಲಿ ಬಹಳಷ್ಟು ಪುರುಷರು ಕೆಲಸ ಮಾಡುತ್ತಾರೆ. ಅವರು ಮಾಡುವ ಕೆಲಸಕ್ಕೆ ಅವರನ್ನು ಗೌರವಿಸುತ್ತಾರೆ. 2002ರಲ್ಲಿ ನಾನು ಕೆಲಸ ಆರಂಭಿಸಿದಾಗ ಸೆಟ್‌ನಲ್ಲಿ ನಾಯಕಿಯನ್ನು ಬಿಟ್ಟು ಉಳಿದ ಎಲ್ಲರೂ ಪುರುಷರಾಗಿದ್ದರು. ಈಗ ಎಲ್ಲವೂ ಬದಲಾಗುತ್ತಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಕೇರಳದ ದೇವಾಲಯಕ್ಕೆ ರೋಬೋ ಆನೆ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ

2003ರಲ್ಲಿ ರಿಲೀಸ್ ಆದ ತೆಲುಗಿನ ‘ಎವರೆ ಆತಗಾಡು’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಪ್ರಿಯಾಮಣಿ. 2009ರಲ್ಲಿ ರಿಲೀಸ್ ಆದ ‘ರಾಮ್’ ಚಿತ್ರದ ಮೂಲಕ ಅವರು ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟರು. ‘ಏನೋ ಒಂತರಾ’, ‘ವಿಷ್ಣುವರ್ಧನ’, ‘ಕೋ ಕೋ’, ‘ಅಣ್ಣಾ ಬಾಂಡ್’, ‘ಲಕ್ಷ್ಮಿ’ ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಜವಾನ್’ ಸಿನಿಮಾ ಮೂಲಕ ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ