‘ದುಡ್ಡು ಕೊಟ್ರೆ ಮಾತ್ರ ಬರ್ತಾರೆ’; ಬಾಲಿವುಡ್ನ ಕರಾಳ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಮಣಿ
ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಲೂನ್ಗೆ ಹೋಗಿದ್ದು ಹೀಗೆ ಪ್ರತಿ ವಿಚಾರ ಸುದ್ದಿ ಆಗಬೇಕು. ಈ ರೀತಿ ಆಗುವಂತೆ ಮಾಡೋದು ಪಾಪರಾಜಿಗಳ ಕೆಲಸ. ಈ ರೀತಿ ಪಾಪರಾಜಿಗಳಿಗೆ ಆಮಂತ್ರಣ ನೀಡೋದು ಸೆಲೆಬ್ರಿಟಿಗಳ ಪಿಆರ್ ತಂಡದವರು.

ಬಾಲಿವುಡ್ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಯಾವ ಜಾಗಕ್ಕೆ ಯಾವಾಗ ಬರುತ್ತಾರೆ ಅನ್ನೋದು ಪಾಪರಾಜಿಗಳಿಗೆ ಮೊದಲೇ ಹೇಗೆ ಗೊತ್ತಾಗುತ್ತದೆ ಅನ್ನೋದು ಅನೇಕರ ಪ್ರಶ್ನೆ. ‘ಅವರು ಕಾದು ಕೂರುತ್ತಾರೆ. ಹೀಗಾಗಿ, ಸೆಲೆಬ್ರಿಟಿಗಳು ಸಿಗುತ್ತಾರೆ’ ಎಂದು ಕೆಲವರು ಹೇಳುತ್ತಾರೆ. ಆದರೆ, ಅಸಲಿಯತ್ತು ಹಾಗಿಲ್ಲ. ಇದೆಲ್ಲ ಪ್ರಚಾರದ ತಂತ್ರ. ಸೆಲೆಬ್ರಿಟಿಗಳು ತಮ್ಮ ಪ್ರಮೋಷನ್ಗೆ ಏನೆಲ್ಲ ಮಾಡುತ್ತಾರೆ ಎಂಬುದನ್ನು ನಟಿ ಪ್ರಿಯಾಮಣಿ (Priyamani) ಯಾವುದೇ ಅಂಜಿಕೆ ಇಲ್ಲದೆ ಬಿಚ್ಚಿಟ್ಟಿದ್ದಾರೆ.
ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದರೂ ಅವರ ಮಾರ್ಕೆಟ್ ಹಾಗೆಯೇ ಇರಬೇಕು ಎಂದರೆ ಪ್ರಚಲಿತದಲ್ಲಿ ಇರಬೇಕು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಲೂನ್ಗೆ ಹೋಗಿದ್ದು ಹೀಗೆ ಪ್ರತಿ ವಿಚಾರ ಸುದ್ದಿ ಆಗಬೇಕು. ಈ ರೀತಿ ಆಗುವಂತೆ ಮಾಡೋದು ಪಾಪರಾಜಿಗಳ ಕೆಲಸ. ಈ ರೀತಿ ಪಾಪರಾಜಿಗಳಿಗೆ ಆಮಂತ್ರಣ ನೀಡೋದು ಸೆಲೆಬ್ರಿಟಿಗಳ ಪಿಆರ್ ತಂಡದವರು. ಈ ವಿಚಾರವನ್ನು ಪ್ರಿಯಾಮಣಿ ಹೇಳಿದ್ದಾರೆ.
‘ಜವಾನ್ ಸಿನಿಮಾ ಬಳಿಕ ಎಲ್ಲರೂ ಏರ್ಪೋರ್ಟ್ನಲ್ಲಿ, ಜಿಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಏಕೆ ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಗ ಒಬ್ಬರು ಹೇಳಿದರು ಅವರನ್ನು ನೀವು ಕರೆಯಬೇಕು. ಅವರಿಗೆ ಹಣ ನೀಡಬೇಕು. ಈ ವಿಚಾರ ನನಗೆ ಗೊತ್ತಿರಲಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಪಾಪರಾಜಿಗಳನ್ನು ಅವರೇ ಫೋನ್ ಮಾಡಿ ಕರೆಯುತ್ತಾರೆ. ನನಗೆ ಒಂದು ಲಿಸ್ಟ್ ಕೂಡ ಬಂದಿತ್ತು. ಅದರಲ್ಲಿ ಯಾವ ಪಾಪರಾಜಿ ಎಷ್ಟು ಹಣ ಪಡೆಯುತ್ತಾರೆ ಅನ್ನೋದು ಕೂಡ ಇತ್ತು’ ಎಂದಿದ್ದಾರೆ ಪ್ರಿಯಾಮಣಿ.
ಈ ಮೊದಲು ಅನೇಕರು ಈ ಬಗ್ಗೆ ಮಾತನಾಡಿದ್ದರು. ಪಿಆರ್ ತಂಡದವರು ಮೊದಲೇ ಪಾಪರಾಜಿಗಳಿಗೆ ಮಾಹಿತಿ ನೀಡಿ ಅವರನ್ನು ಕರೆಸುತ್ತಾರೆ ಎಂದು ಕೆಲವರು ಹೇಳಿಕೊಂಡಿದ್ದರು. ಈ ರೀತಿ ಪಾಪರಾಜಿಗಳು ಬಂದು ವಿಡಿಯೋ ಹಾಗೂ ಫೋಟೋ ಸೆರೆಹಿಡಿಯಬೇಕಾದರೆ ಅವರಿಗೆ ಮೊದಲೇ ಮಾಹಿತಿ ನೀಡಬೇಕಾಗುತ್ತದೆ ಎಂದು ಅನೇಕರು ಹೇಳಿದ್ದರು.
ಪ್ರಿಯಾಮಣಿ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಅವರ ನಟನೆಯ ‘ಜವಾನ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಶಾರುಖ್ ಖಾನ್, ನಯನತಾರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಳಿಕ ಬಾಲಿವುಡ್ನಲ್ಲಿ ಪ್ರಿಯಾಮಣಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ರಿಲೀಸ್ ಆದ ‘ಆರ್ಟಿಕಲ್ 370’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಯಾಮಿ ಗೌತಮ್, ಸ್ಕಂದ ಸಂಜೀವ್, ಅಶ್ವಿನಿ ಕೌಲ್ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: ‘ಇತ್ತೀಚೆಗೆ ನಾನು ಫ್ಯಾಮಿಲಿ ಮ್ಯಾನ್ ನಿರ್ದೇಶಕರನ್ನು ಭೇಟಿ ಮಾಡಿಲ್ಲ’; ಬೇಸರದ ಸುದ್ದಿ ಕೊಟ್ಟ ಪ್ರಿಯಾಮಣಿ
ಪ್ರಿಯಾಮಣಿಗೆ ಹೆಚ್ಚು ಬೇಡಿಕೆ ನೀಡಿದ್ದು ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್. ಇದರಲ್ಲಿ ಸುಚಿತ್ರಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಈ ಸೀರಿಸ್ನ ಮೂರನೇ ಭಾಗದ ಶೂಟಿಂಗ್ ಈ ವರ್ಷ ಆರಂಭ ಆಗುವುದರಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



