AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಪ್ರಚಾರದ ವೇಳೆ ಸಹೋದರ ಚಿರಂಜೀವಿ ಭೇಟಿ ಮಾಡಿದ ಪವನ್ ಕಲ್ಯಾಣ್; ಮೂಡಿತು ಕುತೂಹಲ

‘ವಿಶ್ವಂಭರ’ ಸಿನಿಮಾ ಶೂಟ್​ನಲ್ಲಿ ಚಿರಂಜೀವಿ, ತ್ರಿಶಾ ಬ್ಯುಸಿ ಇದ್ದರು. ಈ ವೇಳೆ ಪವನ್ ಕಲ್ಯಾಣ್ ಅವರ ಆಗಮನ ಆಗಿದೆ. ಇಬ್ಬರೂ ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದ್ದಾರೆ. ಯಾವುದಾದರೂ ರಾಜಕೀಯ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಕುತೂಹಲವೂ ಮೂಡಿದೆ.

ಚುನಾವಣಾ ಪ್ರಚಾರದ ವೇಳೆ ಸಹೋದರ ಚಿರಂಜೀವಿ ಭೇಟಿ ಮಾಡಿದ ಪವನ್ ಕಲ್ಯಾಣ್; ಮೂಡಿತು ಕುತೂಹಲ
ಪವನ್​, ತ್ರಿಶಾ, ಚಿರಂಜೀವಿ
ರಾಜೇಶ್ ದುಗ್ಗುಮನೆ
|

Updated on: Apr 11, 2024 | 8:49 AM

Share

ಪವನ್ ಕಲ್ಯಾಣ್ (Pawan Kalyan) ಅವರು ಸದ್ಯ ಲೋಕಸಭೆ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಅವರು ಪ್ರಚಾರ ಮಾಡುತ್ತಿದ್ದಾರೆ. ‘ವಿಶ್ವಂಭರ’ ಸಿನಿಮಾ ಶೂಟ್​ನಲ್ಲಿ ಚಿರಂಜೀವಿ ಬ್ಯುಸಿ ಇದ್ದಾರೆ. ಈಗ ಈ ಸಿನಿಮಾ ಸೆಟ್​ನಲ್ಲಿ ಪವನ್ ಕಲ್ಯಾಣ್ ಹಾಗೂ ಚಿರಂಜೀವಿಯ ಭೇಟಿ ನಡೆದಿದೆ. ಇದನ್ನು ವಿಡಿಯೋ ಮಾಡಿ ಹಂಚಿಕೊಳ್ಳಲಾಗಿದೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿದೆ. ಇದು ಸಹಜ ಭೇಟಿ ಎಂದು ಹೇಳಲಾಗುತ್ತಿದೆ.

2008ರಲ್ಲಿ ಚಿರಂಜೀವಿ ಅವರು ‘ಪ್ರಜಾ ರಾಜ್ಯಂ’ ಪಕ್ಷವನ್ನು ಸ್ಥಾಪಿಸಿದರು. ರಾಜಕೀಯದ ಬಗ್ಗೆ ಗಮನ ಹರಿಸಲು ಅವರು ನಟನೆಗೆ ಒಂದು ಬ್ರೇಕ್ ಕೊಟ್ಟಿದ್ದರು. 10 ವರ್ಷಗಳ ಕಾಲ ಅವರು ರಾಜಕೀಯದಲ್ಲಿ ಬ್ಯುಸಿ ಆದರು. ನಂತರ ಅವರು ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಪವನ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಈಗ ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಆಗಿದ್ದು, ಚಿರಂಜೀವಿ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Trisha: ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರಕ್ಕೆ ನಾಯಕಿ ಆದ ತ್ರಿಷಾ

‘ವಿಶ್ವಂಭರ’ ಸಿನಿಮಾ ಶೂಟ್​ನಲ್ಲಿ ಚಿರಂಜೀವಿ, ತ್ರಿಶಾ ಬ್ಯುಸಿ ಇದ್ದರು. ಈ ವೇಳೆ ಪವನ್ ಕಲ್ಯಾಣ್ ಅವರ ಆಗಮನ ಆಗಿದೆ. ಇಬ್ಬರೂ ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದ್ದಾರೆ. ಯಾವುದಾದರೂ ರಾಜಕೀಯ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಕುತೂಹಲವೂ ಮೂಡಿದೆ. ಪವನ್ ಕಲ್ಯಾಣ್ ಅವರಿಗೆ ಗಿಡ ನೀಡಿ ಸ್ವಾಗತಿಸಲಾಗಿದೆ.

ಸಿನಿಮಾದ ಸೆಟ್ ಸಖತ್ ಗಮನ ಸೆಳೆದಿದೆ. ದೊಡ್ಡ ಹನುಮಂತನ ಮೂರ್ತಿ ಹೈಲೈಟ್ ಆಗಿದೆ. ಇದು ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎನ್ನಲಾಗಿದೆ. ಈ ‘ವಿಶ್ವಾಂಭರ’ ಚಿತ್ರವನ್ನು ಮಲ್ಲಿಡಿ ವಸಿಷ್ಠ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರು ‘ಬಿಂಬಸಾರ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ‘ವಿಶ್ವಂಭರ’ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ