‘ಪುಷ್ಪ 2’ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋಗುತ್ತಾ? ಸಿಕ್ತು ಸ್ಪಷ್ಟನೆ

ಸುಕುಮಾರ್​ ಅವರು ‘ಪುಷ್ಪ 2’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಶೂಟಿಂಗ್​ಗೆ ಸಾಕಷ್ಟು ಅಡೆತಡೆಗಳು ಆಗಿರುವುದು ನಿಜ. ಆ ಕಾರಣದಿಂದಲೇ ಇದರ ಬಿಡುಗಡೆ ದಿನಾಂಕ ತಡವಾಗಬಹುದು ಎಂದು ಗಾಳಿಸುದ್ದಿ ಹರಡಿದೆ. ಅದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.

‘ಪುಷ್ಪ 2’ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋಗುತ್ತಾ? ಸಿಕ್ತು ಸ್ಪಷ್ಟನೆ
ಅಲ್ಲು ಅರ್ಜುನ್​

Updated on: Jan 26, 2024 | 9:30 PM

2024ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪುಷ್ಪ 2’ (Pushpa 2) ಚಿತ್ರಕ್ಕೆ ಪ್ರಮುಖ ಸ್ಥಾನ ಇದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ (Allu Arjun) ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಹಲವು ತಿಂಗಳ ಹಿಂದೆಯೇ ಈ ಸಿನಿಮಾದ ರಿಲೀಸ್​ ದಿನಾಂಕ ಘೋಷಿಸಲಾಗಿತ್ತು. ಆಗಸ್ಟ್​ 15ರಂದು ‘ಪುಷ್ಪ 2’ ರಿಲೀಸ್​ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಆದರೆ ಇತ್ತೀಚೆಗೆ ಈ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಒಂದು ಗಾಳಿಸುದ್ದಿ ಹಬ್ಬಿದೆ. ಕಾರಣಾಂತರಗಳಿಂದ ‘ಪುಷ್ಪ 2’ ಬಿಡುಗಡೆ ಡೇಟ್​ (Pushpa 2 Release date) ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಸುದ್ದಿಗೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಕ್ಕಿದೆ.

ಸುಕುಮಾರ್​ ಅವರು ‘ಪುಷ್ಪ 2’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಶೂಟಿಂಗ್​ಗೆ ಸಾಕಷ್ಟು ಅಡೆತಡೆಗಳು ಆಗಿರುವುದು ನಿಜ. ಆ ಕಾರಣದಿಂದಲೇ ಇದರ ಬಿಡುಗಡೆ ದಿನಾಂಕ ತಡವಾಗಬಹುದು ಎಂದು ಗಾಳಿಸುದ್ದಿ ಹರಡಿದೆ. ಆಗಸ್ಟ್​ 15ರಂದು ‘ಪುಷ್ಪ 2’ ಬದಲಿಗೆ ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಚಿತ್ರ ತೆರೆಕಾಣಲಿದೆ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ. ಆದರೆ ಅದು ನಿಜವಲ್ಲ.

ಇದನ್ನೂ ಓದಿ: ‘ಅರ್ಜುನ್​ ರೆಡ್ಡಿ’ ಸಿನಿಮಾಗೆ ಅಲ್ಲು ಅರ್ಜುನ್​ ಹೀರೋ ಆಗಬೇಕಿತ್ತು; ಆದರೆ..

‘ಪುಷ್ಪ’ ಸಿನಿಮಾ ಹೆಸರಿನಲ್ಲಿ ಇರುವ ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಹೊಸ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅಲ್ಲು ಅರ್ಜುನ್​ ಅವರ ವಿಡಿಯೋ ಇದೆ. ‘ಇಲ್ಲಿ ಎಲ್ಲವೂ ನಡೆಯೋದು ಪುಷ್ಪ ರೂಲ್​ ಮೇಲೆ’ ಎಂದು ಅವರು ಹೇಳಿದ್ದಾರೆ. ‘15 ಆಗಸ್ಟ್​ 2024. #Pushpa2TheRule’ ಎಂದು ಕ್ಯಾಪ್ಷನ್​ ನೀಡಲಾಗಿದೆ. ಆ ಮೂಲಕ ‘ಪುಷ್ಪ 2’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ: ಸುಕ್ಕು ಡಾರ್ಲಿಂಗ್​ ಜನ್ಮದಿನಕ್ಕೆ ‘ಪುಷ್ಪ 2’ ಸೆಟ್​ನಿಂದ ವಿಶೇಷ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್​

ಸಿನಿಮಾದ ಕೆಲಸಗಳನ್ನು ಮುಗಿಸಿಕೊಳ್ಳಲು ‘ಪುಷ್ಪ 2’ ತಂಡಕ್ಕೆ 6 ತಿಂಗಳಿಗೂ ಹೆಚ್ಚು ಟೈಮ್​ ಇದೆ. ಅಷ್ಟರೊಳಗೆ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ. ಜುಲೈ ವೇಳೆಗೆ ಸಿನಿಮಾದ ಫಸ್ಟ್​ ಕಾಪಿ ಸಿದ್ಧವಾಗಲಿದೆ. ಹಾಗಾಗಿ ಅಲ್ಲು ಅರ್ಜುನ್​ ಅಭಿಮಾನಿಗಳು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ಆಪ್ತ ಮೂಲಗಳು ಹೇಳಿರುವುದಾಗಿ ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದವರು ನಟಿಸುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್​’ ಮೂಲಕ ‘ಪುಷ್ಪ 2’ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us