ಮಲಮಗನ ಪತ್ನಿ ಶೋಭಿತಾ ಜೊತೆ ಹೇಗಿದೆ ಸಂಬಂಧ? ವಿವರಿಸಿದ ಅಕ್ಕಿನೇನಿ ಹೆಂಡತಿ

ಅಕ್ಕಿನೇನಿ ಅಮಲಾ ತಮ್ಮ ಸೊಸೆ ಶೋಭಿತಾ ಧೂಳಿಪಾಲ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೋಭಿತಾ ಟ್ಯಾಲೆಂಟೆಡ್, ಸೃಜನಶೀಲರು ಮತ್ತು ಅವರ ಜೊತೆ ಸಮಯ ಕಳೆಯಲು ಖುಷಿ ಇದೆ ಎಂದಿದ್ದಾರೆ. ಅಖಿಲ್ ಅವರ ಮದುವೆ ಮತ್ತು ಅಕ್ಕಿನೇನಿ ಕುಟುಂಬದಲ್ಲಿ ಧಾರ್ಮಿಕ ವೈವಿಧ್ಯತೆ ಬಗ್ಗೆಯೂ ಮಾತನಾಡಿದ್ದಾರೆ.

ಮಲಮಗನ ಪತ್ನಿ ಶೋಭಿತಾ ಜೊತೆ ಹೇಗಿದೆ ಸಂಬಂಧ? ವಿವರಿಸಿದ ಅಕ್ಕಿನೇನಿ ಹೆಂಡತಿ
ಶೋಭಿತಾ

Updated on: Nov 26, 2025 | 3:07 PM

ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ. ಅವರ ಮಗ ನಾಗ ಚೈತನ್ಯ ಕಳೆದ ವರ್ಷ ವಿವಾಹ ಆದರು. ಈಗ ನಾಗ ಚೈತನ್ಯ ಸಹೋದರ ಅಖಿಲ್ ಮದುವೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಸೊಸೆಯನ್ನು ಅವರು ಹಾಡಿ ಹೊಗಳಿದ್ದಾರೆ.

ನಾಗ ಚೈತನ್ಯ ಅವರು ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಜೊತೆ ಸುತ್ತಾಟ ಆರಂಭಿಸಿದರು. ಇಬ್ಬರೂ 2024ರಲ್ಲಿ ಮದುವೆ ಆಗಿದ್ದಾರೆ. ಸೊಸೆಯನ್ನು ನಾಗಾರ್ಜುನ ಅವರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಶೋಭಿತಾ ಹಾಗೂ ಮಗ ನಾಗ ಚೈತನ್ಯ ಜೊತೆ ಇರೋ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಅಮಲಾ ಶೋಭಿತಾ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.

‘ಅತ್ತೆ ಆಗಿರೋದಕ್ಕೆ ಖುಷಿ ಇದೆ. ನನಗೆ ಇಬ್ಬರು ಮುದ್ದಿನ ಸೊಸೆಯರು’ ಎಂದು ಅಮಲಾ ಮಾತು ಆರಂಭಿಸಿದ್ದಾರೆ. ‘ಶೋಭಿತಾ ತುಂಬಾನೇ ಟ್ಯಾಲೆಂಟೆಡ್. ಎಲ್ಲ ಕೆಲಸವನ್ನು ಅವಳೇ ಮಾಡಿಕೊಳ್ಳುತ್ತಾಳೆ. ಅವರ ಬಗ್ಗೆ ತುಂಬಾನೇ ಪ್ರೀತಿ ಇದೆ. ಅವಳ ಜೊತೆ ಸಮಯ ಕಳೆಯಲು ಖುಷಿ ಆಗುತ್ತದೆ’ ಎಂದು ಅಮಲಾ ಹೇಳಿದ್ದಾರೆ.

ಅಖಿಲ್ ವಿವಾಹ ಆಗುತ್ತಿರುವುದು ಮುಸ್ಲಿಂ ಹುಡುಗಿಯನ್ನು. ಈ ಬಗ್ಗೆ ಅಮಲಾಗೆ ಖುಷಿ ಇದೆ. ‘ನನ್ನ ತಾಯಿ ಕ್ಯಾಥೋಲಿಕ್ ಆಗಿ ಜನಿಸಿದರು. ನಂತರ ಸೂಫಿ ಧರ್ಮವನ್ನು ಅಳವಡಿಸಿಕೊಂಡರು. ನನ್ನ ತಂದೆ ಹಿಂದೂ. ನನ್ನ ಮಾವ ನಾಗೇಶ್ವರ ರಾವ್ ಅವರಿಗೆ ಯಾವುದೇ ಧರ್ಮವಿರಲಿಲ್ಲ. ನೀವು ಅವರನ್ನು ನಾಸ್ತಿಕ ಎಂದು ಕರೆಯಲು ಸಾಧ್ಯವಿಲ್ಲ. ಅವರು ‘ಕೆಲಸವೇ ನನ್ನ ಪೂಜೆ’ ಎಂದು ಹೇಳುತ್ತಿದ್ದರು. ಅವರು ಎಂದಿಗೂ ಪೂಜೆ ಮಾಡಲಿಲ್ಲ. ಅವರು ತುಂಬಾ ಮೌಲ್ಯಾಧಾರಿತರಾಗಿದ್ದರು, ಧಾರ್ಮಿಕರಲ್ಲ’ ಎಂದಿದ್ದಾರೆ ಅಮಲಾ.

ಇದನ್ನೂ ಓದಿ: ಅಕ್ಕಿನೇನಿ ನಾಗಾರ್ಜುನ ಬಳಿ ಇದೆ ಖಾಸಗಿ ವಿಮಾನ; ಇನ್ನೂ ಯಾರೆಲ್ಲ ಇದರ ಒಡೆಯರು?

ಅಕ್ಕಿನೇನಿ ನಾಗಾರ್ಜುನ ಅವರು ಈ ಮೊದಲು ಲಕ್ಷ್ಮೀ ದಗ್ಗುಬಾಟಿಯನ್ನು ವಿವಾಹ ಆದರು. ಈ ದಂಪತಿಗೆ ಜನಿಸಿದ್ದೇ ನಾಗ ಚೈತನ್ಯ. ಲಕ್ಷ್ಮೀಗೆ ಡಿವೋರ್ಸ್ ಕೊಟ್ಟ ನಂತರ ಅಮಲಾ ಅವರನ್ನು ನಾಗಾರ್ಜುನ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.