AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸ್ನೆಸ್​ನಲ್ಲಿ ಭಾರೀ ಹೊಡೆತ ತಿಂದ ನಟಿ ದೀಪಿಕಾ ಪಡುಕೋಣೆ; ಕೋಟಿ ಕೋಟಿ ನಷ್ಟ

ನಟಿ ದೀಪಿಕಾ ಪಡುಕೋಣೆ ಒಡೆತನದ 82°E ಸ್ಕಿನ್‌ಕೇರ್ ಕಂಪನಿ ಭಾರಿ ನಷ್ಟ ಅನುಭವಿಸಿದೆ. ಆದರೂ, ವೆಚ್ಚ ಕಡಿತದಿಂದ ನಷ್ಟದ ಪ್ರಮಾಣ ಇಳಿಕೆಯಾಗಿದೆ. ದುಬಾರಿ ಉತ್ಪನ್ನಗಳು ಮತ್ತು ತೀವ್ರ ಸ್ಪರ್ಧೆಯಿಂದ ಕಂಪನಿ ಸವಾಲು ಎದುರಿಸುತ್ತಿದೆ. ಅಲ್ಲದೆ, ದೀಪಿಕಾ ಕೆಲವು ಸಿನಿಮಾಗಳಿಂದ ಹೊರ ಬಂದಿದ್ದಾರೆ.

ಬಿಸ್ನೆಸ್​ನಲ್ಲಿ ಭಾರೀ ಹೊಡೆತ ತಿಂದ ನಟಿ ದೀಪಿಕಾ ಪಡುಕೋಣೆ; ಕೋಟಿ ಕೋಟಿ ನಷ್ಟ
ದೀಪಿಕಾ
ರಾಜೇಶ್ ದುಗ್ಗುಮನೆ
|

Updated on: Nov 26, 2025 | 12:55 PM

Share

ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲವು ಸಿನಿಮಾಗಳಿಂದ ಅವರು ಹೊರ ಬಂದಿರೋದು ಚರ್ಚೆಗೆ ಕಾರಣ ಆಗಿದೆ. ಈ ಮಧ್ಯೆ ದೀಪಿಕಾ ಪಡುಕೋಣೆ (Deepika Padukone) ಅವರು ಬಿಸ್ನೆಸ್​ನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅವರ ಒಡೆತನದ ಸ್ಕಿನ್​ಕೇರ್ ಕಂಪನಿ ನಷ್ಟದಲ್ಲಿ ಇದೆ. ಈ ಬಗ್ಗೆ ವರದಿ ಪ್ರಸಾರ ಆಗಿದೆ.

ದೀಪಿಕಾ ಪಡುಕೋಣೆ ಅವರು ‘82°E’ ಹೆಸರಿನ ಬ್ರ್ಯಾಂಡ್ ಹೊಂದಿದ್ದಾರೆ. 2024ರಲ್ಲಿ ಕಂಪನಿ 21.2 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಅದು ಈಗ 14.7 ಕೋಟಿ ರೂಪಾಯಿಗೆ ಇಳಿಕೆ ಆಗಿದೆ. ವಿಶೇಷ ಎಂದರೆ ನಷ್ಟದಲ್ಲೂ ಇಳಿಕೆ ಕಂಡಿದೆ. 2024ರಲ್ಲಿ 23 ಕೋಟಿ ನಷ್ಟ ಆದರೆ ಈ ವರ್ಷ 12.3 ಕೊಟಿ ರೂಪಾಯಿ ನಷ್ಟ ಆಗಿದೆ.

2024ರಲ್ಲಿ 82°E ಕಂಪನಿ 47 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಈ ವರ್ಷ ಸಾಕಷ್ಟು ಕಾಸ್ಟ್ ಕಟಿಂಗ್ ಮಾಡಲಾಗಿದ್ದು, ಈ ಮೂಲಕ ಖರ್ಚನ್ನು 25 ಕೋಟಿಗೆ ಇಳಿಸಲಾಗಿದೆ. ಇದರಿಂದ ನಷ್ಟ ತಗ್ಗಿದೆ. 2024ರಲ್ಲಿ ಬ್ರ್ಯಾಂಡ್​ಗೆ ಸಾಕಷ್ಟು ಮಾರ್ಕೆಟಿಂಗ್ ಮಾಡಲಾಗಿತ್ತು. ಇದನ್ನು 2025ರಲ್ಲಿ ಕಡಿಮೆ ಮಾಡಲಾಗಿದೆ.

ದೀಪಿಕಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇದನ್ನು ಬಳಸಿಕೊಂಡು ಉತ್ಪನ್ನಗಳನ್ನು ಪ್ರಚಾರ ಮಾಡಿದ್ದರು. ಆದರೆ, ಬ್ರ್ಯಾಂಡ್ ನಷ್ಟ ಅನುಭವಿಸುವುದು ತಪ್ಪಿಲ್ಲ. 82°E ಬ್ರ್ಯಾಂಡ್​ನ ಉತ್ಪನ್ನಗಳು ಸಾಕಷ್ಟು ದುಬಾರಿಯಾಗಿವೆ.ಈ ಸಂಸ್ಥೆಗೆ ಸಾಕಷ್ಟು ದೊಡ್ಡ ಸ್ಪರ್ಧೆ ಇದ್ದು,ಇದರಲ್ಲಿ ಗೆಲುವು ಕಾಣೋದು ಅಷ್ಟು ಸುಲಭದಲ್ಲಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿನಿಮಾದಿಂದ ಹೊರ ನಡೆದ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರು ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ‘ಸ್ಪಿರಿಟ್’ ಸಿನಿಮಾದಿಂದ ಹೊರಕ್ಕೆ ಬಂದರು. ಅಲ್ಲದೆ, ‘ಕಲ್ಕಿ 2898 ಎಡಿ’ ಸೀಕ್ವೆಲ್​ನಿಂದಲೂ ಅವರು ದೂರ ಆಗಿದ್ದಾರೆ. ಇದು ಸಿನಿಮಾಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.