ಸಿನಿಮಾದಿಂದ ಹೊರ ನಡೆದ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ
Deepika Padukone: ನಟಿ ದೀಪಿಕಾ ಪಡುಕೋಣೆ, ಕೆಲಸದ ಅವಧಿ ಹಾಗೂ ಸಂಭಾವನೆ ವಿಷಯದಿಂದಾಗಿ ತೆಲುಗಿನ ಎರಡು ಸಿನಿಮಾಗಳನ್ನು ಕಳೆದುಕೊಂಡಿದ್ದಾರೆ. ಎರಡೂ ಸಿನಿಮಾಗಳಲ್ಲಿ ಪ್ರಭಾಸ್ ಅವರೇ ನಾಯಕ ಎಂಬುದು ವಿಶೇಷ. ದೀಪಿಕಾ ಪಡುಕೋಣೆಯ ಹೊಸ ಬೇಡಿಕೆಗಳ ಬಗ್ಗೆ ಚಿತ್ರರಂಗದಲ್ಲಿ ಸಖತ್ ಚರ್ಚೆ ಆರಂಭವಾಗಿದೆ. ಇದೀಗ ದೀಪಿಕಾ ಪಡುಕೋಣೆ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ವೃತ್ತಿ ಜೀವನದ ಕಾರಣದಿಂದ ಇತ್ತೀಚೆಗೆ ಸುದ್ದಿ ಆಗುತ್ತಿರುವುದು ಗೊತ್ತೇ ಇದೆ. ಅವರು ಮೊದಲು ಸಂದೀಪ್ ರೆಡ್ಡಿ ವಂಗ ಚಿತ್ರವನ್ನು ಒಪ್ಪಿಕೊಂಡು, ನಂತರ ಹೊರ ನಡೆದರು. ಆ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿ ಅದರಿಂದ ಹಿಂದ ಸರಿದರು. ನಂತರ ‘ಕಲ್ಕಿ 2898 ಎಡಿ’ ಸೀಕ್ವೆಲ್ನಿಂದಲೂ ಹಿಂದೆ ಸರಿದಿದ್ದಾರೆ. ಈ ವಿಷಯದಲ್ಲಿ ಅವರು ಇಷ್ಟು ದಿನ ಮೌನ ವಹಿಸಿದ್ದರು. ಈ ಬಗ್ಗೆ ಅವರು ಕೊನೆಗೂ ಮಾತನಾಡಿದ್ದಾರೆ.
ದೀಪಿಕಾ ಪಡುಕೋಣೆ ಸಿನಿಮಾಗಳಿಂದ ಹಿಂದೆ ಸರಿಯಲು ಹಲವು ಕಾರಣಗಳಿವೆ ಎಂದು ಹೇಳಲಾಯಿತು. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಲು ಅವರು ಸಾಕಷ್ಟು ಷರತ್ತುಗಳನ್ನು ಹಾಕಿದ್ದರು. 8 ಗಂಟೆ ಕೆಲಸ ಮಾಡೋದು, ಪ್ರಾಫಿಟ್ ಶೇರ್ ಮಾಡಿಕೊಳ್ಳುವುದು ಮತ್ತಿತ್ಯಾದಿ ವಿಚಾರಗಳು ಇದರಲ್ಲಿ ಸೇರಿವೆ ಎಂದು ಹೇಳಲಾಗುತ್ತಿದೆ. ಮಗಳಿಗೆ ಹೆಚ್ಚಿನ ಸಮಯ ನೀಡುವುದು ಕೂಡ ಅದರಲ್ಲಿ ಇದೆ. ಈಗ ಅವರು ತಾವು ಮೌನವಾಗಿ ಹೋರಾಡಿದ್ದೇನೆ ಎಂದು ಹೇಳಿದ್ದಾರೆ.
‘ನಾನು ಈ ಹೋರಾಟವನ್ನು ಹಲವು ಹಂತಗಳಲ್ಲಿ ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ವೇತನದ ವಿಷಯ ಹಾಗೂ ಅದರೊಂದಿಗೆ ಬರುವ ಎಲ್ಲಾ ಸಮಸ್ಯೆಯನ್ನು ನಾನು ಎದುರಿಸಬೇಕಾಗಿತ್ತು. ಅದನ್ನು ಏನು ಕರೆಯಬೇಕೆಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವಾಗಲೂ ನನ್ನ ಹೋರಾಟಗಳನ್ನು ಮೌನವಾಗಿ ಮಾಡಿದ್ದೇನೆ. ಕೆಲವೊಮ್ಮೆ ಅವು ಸಾರ್ವಜನಿಕವಾಗುತ್ತವೆ. ಅದು ನನಗೆ ತಿಳಿದಿರುವ ರೀತಿಯಲ್ಲಿ ಅಲ್ಲ ಮತ್ತು ನಾನು ಬೆಳೆದ ರೀತಿಯಲ್ಲಿ ಅಲ್ಲ. ಆದರೆ ಹೌದು, ನನ್ನ ಹೋರಾಟಗಳನ್ನು ಮೌನವಾಗಿ ಮತ್ತು ಗೌರವಯುತ ರೀತಿಯಲ್ಲಿ ಹೋರಾಡುವುದು ನನಗೆ ತಿಳಿದಿರುವ ಮಾರ್ಗ’ ಎಂದಿದ್ದಾರೆ ಅವರು.
ಇದನ್ನೂ ಓದಿ:
ದೀಪಿಕಾ ಪಡುಕೋಣೆ ಅವರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಮಗುವಿಗೆ ದುವಾ ಎಂದು ಹೆಸರು ಇಟ್ಟಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ರೋಹಿತ್ ಶೆಟ್ಟಿ ಅವರು ‘ಸಿಂಗಂ ಅಗೇನ್’ ಸಿನಿಮಾದಲ್ಲಿ. ಅಜಯ್ ದೇವಗನ್, ಕರೀನಾ ಕಪೂರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರಕ್ಕೆ ಸುಜಯ್ ಘೋಷ್ ನಿರ್ದೇಶನ ಮಾಡುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಸಿನಿಮಾ ನಿರ್ಮಾಣ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Fri, 10 October 25



