ಮಣಿಕಟ್ಟಲ್ಲಿ ಇಲ್ಲ ಪಲ್ಸ್, ಶೇ.75ರಷ್ಟು ಲಿವರ್ ಡ್ಯಾಮೇಜ್; ಅಮಿತಾಭ್ ನಿಜಕ್ಕೂ ಗ್ರೇಟ್
83ರ ಹರೆಯದಲ್ಲೂ ಸಕ್ರಿಯರಾಗಿರುವ ಅಮಿತಾಭ್ ಬಚ್ಚನ್ ಅವರ ಅದ್ಭುತ ಆರೋಗ್ಯದ ಹಿಂದಿನ ಕಥೆ ಇದು. ಕೂಲಿ ಚಿತ್ರೀಕರಣದ ಗಾಯ, ಹೆಪಟೈಟಿಸ್ ಬಿ, ಅಸ್ತಮಾ ಸೇರಿದಂತೆ ಹಲವು ಆರೋಗ್ಯ ಸವಾಲುಗಳನ್ನು ಅವರು ಧೈರ್ಯವಾಗಿ ಎದುರಿಸಿದ್ದಾರೆ. 75% ಲಿವರ್ ಕಳೆದುಕೊಂಡರೂ, ಇಂದಿಗೂ ಚಿತ್ರರಂಗದಲ್ಲಿ ಚುರುಕಾಗಿದ್ದಾರೆ.

ಅಮಿತಾಭ್ ಬಚ್ಚನ್ ಅವರು 83ನೇ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸವನ್ನು ಎಲ್ಲರೂ ಶ್ಲಾಘಿಸಲೇಬೇಕು. ಅವರು ಈ ವಯಸ್ಸಿನಲ್ಲೂ ನಟನೆ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಇದರ ಜೊತೆಗೆ ಕಿರುತೆರೆಯಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ. ಅಮಿತಾಭ್ ಬಚ್ಚನ್ (Amitabh Bachchan) ಅವರ ದೇಹ ಅಚ್ಚರಿಯ ಆಗರ. ಅವರು ಸಾವನ್ನು ಜಯಸಿ ಬಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಅಮಿತಾಭ್ ಬಚ್ಚನ್ ಅವರ ಮಣಿಕಟ್ಟನ್ನು ಹಿಡಿದುಕೊಂಡು ಅವರ ನಾಡಿಮಿಡಿತವನ್ನು ಯಾರೂ ಪರಿಶೀಲಿಸಲು ಸಾಧ್ಯವಿಲ್ಲ. ‘ಕೌನ್ ಬನೇಗಾ ಕರೋಡ್‌ಪತಿ’ ರಿಯಾಲಿಟಿ ಶೋನಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದರು. ಅನೇಕರು ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಾರಂತೆ.
‘ಕೌನ್ ಬನೇಗಾ ಕರೋಡ್‌ಪತಿ’ ರಿಯಾಲಿಟಿ ಶೋನ ಸಂಚಿಕೆಯಲ್ಲಿ, ಟಿವಿ ನಟಿ ಅದಿತಿ ಗುಪ್ತಾ ಬಿಗ್ ಬಿ ಅವರನ್ನು ತಮ್ಮ ನಾಡಿಮಿಡಿತವನ್ನು ಪರೀಕ್ಷಿಸಲು ಕೇಳಿಕೊಂಡರು. ಅದಿತಿ ಅಮಿತಾಬ್ ಬಚ್ಚನ್ ಅವರ ಕೈಯನ್ನು ಹಿಡಿದು ಅವರ ನಾಡಿಮಿಡಿತವನ್ನು ಪರೀಕ್ಷಿಸಿದಾಗ, ಅವರ ಮಣಿಕಟ್ಟಿನಿಂದ ನಾಡಿಮಿಡಿತವನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಅವರು ಆಘಾತಕ್ಕೊಳಗಾದರು.
ಬಿಗ್ ಬಿ 1982ರಲ್ಲಿ ‘ಕೂಲಿ’ ಸಿನಿಮಾ ಶೂಟಿಂಗ್ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದರು. ಈ ವಿಚಾರವನ್ನು ಎಂದು ಬಹಿರಂಗಪಡಿಸಿದರು. ಆಸ್ಪತ್ರೆಯಲ್ಲಿದ್ದಾಗ, ಅವರ ಮಣಿಕಟ್ಟಿನಿಂದ ರಕ್ತವನ್ನು ತೆಗೆದುಕೊಂಡು ಪ್ರತಿ ಅರ್ಧಗಂಟೆಗೆ ಪರೀಕ್ಷಿಸಲಾಯಿತು. ಅಂದಿನಿಂದ, ಅವರ ನಾಡಿಮಿಡಿತವನ್ನು ಅವರ ಮಣಿಕಟ್ಟಿನಿಂದ ಕಂಡುಹಿಡಿಯಲಾಗುತ್ತಿಲ್ಲ.
ಅಮಿತಾಭ್ ಬಚ್ಚನ್ ಅವರು ಹ್ಯಾಪಿಟೈಟಿಸ್ ಬಿ ಸಮಸ್ಯೆ ಹೊಂದಿದ್ದಾರೆ. ಇದರಿಂದ ಅವರು ತಮ್ಮ ಶೇ.75ರಷ್ಟು ಲಿವರ್ನ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅವರ ಲಿವರ್ ಕೇವಲ 25ರಷ್ಟು ಮಾತ್ರ ಕೆಲಸ ಮಾಡುತ್ತಿದೆ.
2000ನೇ ಇಸ್ವಿಯಲ್ಲಿ ಅವರಿಗೆ ಒಂದು ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ಅವರಿಗೆ ಓಡಾಟದಲ್ಲಿ ನೋವನ್ನು ತರುತ್ತಿತ್ತು. ಇದರಿಂದ ಅವರು ವರ್ಷಗಟ್ಟಲೆ ತೊಂದರೆ ಅನುಭವಿಸಬೇಕಾಯಿತು.
ಇದನ್ನೂ ಓದಿ: ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
ಅಮಿತಾಭ್ ಬಚ್ಚನ್ ಅವರಿಗೆ ಅಸ್ತಮ ಕೂಡ ಇದೆ. 2023ರಲ್ಲಿ ಶೂಟಿಂಗ್ ವೇಳೆ ರಿಬ್ ಇಂಜೂರಿ ಆಯಿತು. ಇದರಿಂದ ಅವರು ಸಾಕಷ್ಟು ಸಮಯ ಹಾಗೆಯೇ ವಿಶ್ರಾಂತಿ ಪಡೆಯಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Sat, 11 October 25







