50 ಲಕ್ಷ ಬಜೆಟ್ನ ಈ ಸಿನಿಮಾ, ‘ಕಾಂತಾರ’, ‘ಸೈಯ್ಯಾರ’ ಅನ್ನೇ ಹಿಂದಿಕ್ಕಿದೆ
2025 most successful movie: 2025 ರ ಅತ್ಯಂತ ಯಶಸ್ವಿ ಸಿನಿಮಾ ಯಾವುದೆಂದರೆ ‘ಕಾಂತಾರ: ಚಾಪ್ಟರ್ 1’ ಮತ್ತು ‘ಸೈಯ್ಯಾರ’ ಸಿನಿಮಾ ಎಂದು ಹೇಳಬೇಕು. ಆದರೆ ಈ ಎರಡೂ ಸಿನಿಮಾಗಳಿಗಿಂತಲೂ ಹೆಚ್ಚಿನ ಲಾಭವನ್ನು ಅತ್ಯಂತ ಸಣ್ಣ ಬಜೆಟ್ನ ಸಿನಿಮಾ ಒಂದು ಮಾಡಿದೆ. ಹೌದು, ಲಾಭದ ಪ್ರಮಾಣದಲ್ಲಿ ‘ಕಾಂತಾರ’, ‘ಸೈಯ್ಯಾರ’ ಸಿನಿಮಾವನ್ನೂ ಹಿಂದಿಕ್ಕಿದೆ ಈ ಸಿನಿಮಾ. ಯಾವುದದು?

ಈ ವರ್ಷದ (2025)ರ ಬ್ಲಾಕ್ ಬಸ್ಟರ್ ಸಿನಿಮಾ ಯಾವುದೆಂದರೆ ಎಲ್ಲರೂ ಹೇಳುವುದು ‘ಕಾಂತಾರ: ಚಾಪ್ಟರ್ 1’ (Kantara) ಅಥವಾ ‘ಸೈಯ್ಯಾರ’ ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ 850 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಅದೇ ವರ್ಷದ ಮಧ್ಯ ಭಾಗದಲ್ಲಿ ಬಿಡುಗಡೆ ಆದ ಹಿಂದಿಯ ‘ಸೈಯ್ಯಾರ’ ಸಿನಿಮಾ ಸುಮಾರು 600 ಕೋಟಿ ಗಳಿಕೆ ಮಾಡಿದೆ. ಆದರೆ ಲಾಭದ ವಿಷಯದಲ್ಲಿ ಈ ಎರಡೂ ಸಿನಿಮಾಗಳನ್ನು ಹಿಂದಿಕ್ಕಿದೆ ಕೇವಲ 50 ಲಕ್ಷ ರೂಪಾಯಿ ಬಜೆಟ್ನ ಒಂದು ಸಿನಿಮಾ.
ಹೌದು, ‘ಕಾಂತಾರ: ಚಾಪ್ಟರ್ 1’, ‘ಸೈಯ್ಯಾರ’ದಂಥಹಾ ಸಿನಿಮಾವನ್ನೇ ಹಿಂದಿಕ್ಕಿದೆ ಒಂದು ಬಹಳ ಸಣ್ಣ ಬಜೆಟ್ನ ಗುಜರಾತಿ ಸಿನಿಮಾ. ಹೌದು, ದೇಶದಾದ್ಯಂತ ದಕ್ಷಿಣದ ಸಿನಿಮಾಗಳು ಸಖತ್ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ, ಹೆಚ್ಚು ಸದ್ದಿಲ್ಲದೆ ಬಂದ ಗುಜರಾತಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. ಕೇವಲ 50 ಲಕ್ಷ ರೂಪಾಯಿ ಹಣದಲ್ಲಿ ನಿರ್ಮಾಣವಾದ ‘ಲಾಲೂ: ಕೃಷ್ಣ ಸದಾ ಸಹಾಯತೆ’ ಸಿನಿಮಾ ಭಾರಿ ದೊಡ್ಡ ಗಳಿಕೆ ಮಾಡಿ ಈ ವರ್ಷದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.
ಗುಜರಾತಿ ಭಾಷೆಯ ‘ಲಾಲೂ: ಕೃಷ್ಣ ಸದಾ ಸಹಾಯತೆ’ ಸಿನಿಮಾ 75 ಕೋಟಿಗೂ ಹೆಚ್ಚಿನ ಮೊತ್ತವನ್ನು ಈಗಾಗಲೇ ಗಳಿಸಿದ್ದು, 100 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. ಸಿನಿಮಾ 75 ಕೋಟಿ ಮಾತ್ರವೇ ಗಳಿಸಿದ್ದರೂ ಸಹ ಇದು ಈ ವರ್ಷದ ಈ ವರೆಗಿನ ಅತಿ ಹೆಚ್ಚು ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ. ಸಾಮಾನ್ಯವಾಗಿ ಹಾಕಿರುವ ಬಂಡವಾಳದ ಮೇಲೆ ಲಾಭದ ಲೆಕ್ಕಾಚಾರ ಹಾಕಲಾಗುತ್ತದೆ. ಅದರ ಆಧಾರದಲ್ಲಿ ‘ಕಾಂತಾರ: ಚಾಪ್ಟರ್ 1’ 850 ಕೋಟಿ ಗಳಿಸಿದ್ದರೂ ಸಹ ಆ ಸಿನಿಮಾದ ಲಾಭದ ಪ್ರಮಾಣ 1500% ಆಗಿದೆ. ‘ಸೈಯ್ಯಾರ’ ಸಿನಿಮಾದ ಲಾಭದ ಪ್ರಮಾಣ ಸುಮಾರು 2000% ಆಗಿರಬಹುದು. ಆದರೆ ಈ ಸಿನಿಮಾದ ಲಾಭದ ಪ್ರಮಾಣ 14000% ಆಗಿದೆ. 50 ಲಕ್ಷ ಬಜೆಟ್ಗೆ 75 ಕೋಟಿ ರೂಪಾಯಿ ಹಣ ಗಳಿಸಿದೆ ಈ ಸಿನಿಮಾ.
ಇದನ್ನೂ ಓದಿ:ಥಿಯೇಟರ್ನಲ್ಲಿ 50 ದಿನ ಪೂರೈಸಿದ ‘ಕಾಂತಾರ: ಚಾಪ್ಟರ್ 1’; ಸಿಕ್ಕಿರೋ ಶೋಗಳೆಷ್ಟು?
‘ಲಾಲೂ: ಕೃಷ್ಣ ಸದಾ ಸಹಾಯತೆ’ ಸಿನಿಮಾ ಒಬ್ಬ ಸಾಮಾನ್ಯ ಆಟೋ ಚಾಲಕನ ಕತೆಯನ್ನು ಒಳಗೊಂಡಿದೆ. ಲಾಲೂ ಎಂಬ ಆಟೋ ಚಾಲಕನಿಗೆ ಭಗವಾನ್ ಕೃಷ್ಣನ ಗೆಳೆತನ, ಸಹಾಯ ಸಿಗುತ್ತದೆ. ಆ ಆಟೋ ಚಾಲಕನ ಜೀವನದಲ್ಲಿ ಮುಂದೆ ಏನೇನು ಆಗುತ್ತದೆ. ಕೃಷ್ಣ ಯಾಕಾಗಿ ಆತನ ಸ್ನೇಹಿತ ಆಗುತ್ತಾರೆ ಇತ್ಯಾದಿ ವಿಷಯಗಳ ತಿಳಿಯಲು ಸಿನಿಮಾವನ್ನೇ ನೋಡಬೇಕಾಗಿದೆ. ಅಂಕಿತ್ ಸಾಖಿಯಾ ಎಂಬುವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಟಿಸಿರುವವರೆಲ್ಲ ಬಹುತೇಕ ಹೊಸ ಕಲಾವಿದರು. ಆದರೆ ಅದ್ಭುತವಾಗಿ ನಟಿಸಿದ್ದಾರೆ.
‘ಲಾಲೋ’ ಸಿನಿಮಾದ ಅಭೂತಪೂರ್ಯ ಯಶಸ್ಸು ಗಮಿಸಿ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ‘ಲಾಲೋ’ ಈ ವರೆಗೆ ಅತಿ ಹೆಚ್ಚು ಹಣ ಗಳಿಸಿದ ಗುಜರಾತಿ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 2019 ರಲ್ಲಿ ಬಿಡುಗಡೆ ಆಗಿದ್ದ ‘ಚಾಲ್ ಜೀವಿ ಲಯ್ಯೆ’ ಗುಜರಾತಿ ಸಿನಿಮಾ 50 ಕೋಟಿ ಗಳಿಸಿ, ಅತಿ ಹೆಚ್ಚು ಗಳಿಕೆ ಮಾಡಿದ ಗುಜರಾತಿ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಒಟಿಟಿ ಹಕ್ಕುಗಳಿಗೂ ಭಾರಿ ಡಿಮ್ಯಾಂಡ್ ಇದ್ದು, ಇನ್ನೂ ಯಾವುದೇ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




