- Kannada News Photo gallery Hombale Films Celebrate Kantara Chapter 1 Movie Success with Rishab Shetty And Team
‘ಈ ಗೆಲುವು ಕೇವಲ ನಮ್ಮದಲ್ಲ’; ‘ಕಾಂತಾರ: ಚಾಪ್ಟರ್ 1’ ಸಕ್ಸಸ್ ಸೆಲೆಬ್ರೇಷನ್
‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಮೇಲಾಗಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 900 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಸಿನಿಮಾ ಈಗ ಒಟಿಟಿಗೆ ಬಂದಿದೆ. ಈ ಚಿತ್ರದ ಸಕ್ಸಸ್ ಪಾರ್ಟಿಯನ್ನು ತಂಡ ಸೆಲೆಬ್ರೇಟ್ ಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.
Updated on: Nov 08, 2025 | 1:20 PM

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಯಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 900 ಕೋಟಿ ರೂಪಾಯಿಗೂ ಹೆಚ್ಚು. ಈ ಚಿತ್ರ ಈಗ ಒಟಿಟಿಗೆ ಬಂದಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಯಶಸ್ಸಿನ ಸೆಲೆಬ್ರೇಷನ್ನ ತಂಡ ಮಾಡಿದೆ. ಈ ಸಂದರ್ಭದ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ‘ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ. ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಕೇಕ್ ಕತ್ತರಿಸಿ ತಂಡ ಸಂಭ್ರಮಿಸಿದೆ.

‘ಕಾಂತಾರ’ ಎಂದು ಬರೆದಿರುವ ಕೇಕ್ನ ತಂಡದವರು ಕತ್ತರಿಸಿದ್ದಾರೆ. ‘ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದ್ದು. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿ’ ಎಂದು ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟ್ಗೆ ಕ್ಯಾಪ್ಶನ್ ನೀಡಿದೆ. ಈ ಮೂಲಕ ಗೆಲುವನ್ನು ಜನರಿಗೆ ಅರ್ಪಿಸಿದೆ.

ನಾಯಕ ರಿಷಬ್ ಶೆಟ್ಟಿ, ಅವರ ಪತ್ನಿ ಪ್ರಗತಿ ಶೆಟ್ಟಿ, ನಟಿ ರುಕ್ಮಿಣಿ ವಸಂತ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ತಂಡ ಸೆಲೆಬ್ರೇಷನ್ನಲ್ಲಿ ಭಾಗಿ ಆಗಿದೆ. ಎಲ್ಲರ ಮೊಗದಲ್ಲೂ ನಗು ಇತ್ತು. ಎಲ್ಲರೂ ಖುಷಿಯಿಂದ ಸೆಲೆಬ್ರೇಷನ್ ಅಲ್ಲಿ ಭಾಗಿ ಆದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆದ 30 ದಿನಕ್ಕೆ ಒಟಿಟಿಗೆ ಕಾಲಿಟ್ಟಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರಸಾರ ಕಾಣುತ್ತಾ ಇದೆ. ಒಟಿಟಿಯಲ್ಲೂ ಈ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ.




