WPL 2026: ಯಾವ ತಂಡ ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು?
WPL 2026 Auction: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಒಂದು ತಂಡವು ಗರಿಷ್ಠ 18 ಆಟಗಾರ್ತಿಯರನ್ನು ಹೊಂದಬಹುದು. ಇವರಲ್ಲಿ 6 ವಿದೇಶಿ ಆಟಗಾರ್ತಿಯರಿಗೆ ಅವಕಾಶ ನೀಡಬಹುದು. ಅಂದರೆ 12 ಭಾರತೀಯರು ಹಾಗೂ 6 ವಿದೇಶಿ ಆಟಗಾರ್ತಿಯರನ್ನು ತಂಡಕ್ಕೆ ಆಯ್ಕೆ ಮಾಡಬಹುದು. ಇದೀಗ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿರುವ ಕಾರಣ, ಉಳಿದ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.
Updated on:Nov 08, 2025 | 7:54 AM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನ ಸೀಸನ್-4ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಿದೆ. ಇದರ ಬೆನ್ನಲ್ಲೇ ಎಲ್ಲಾ ಫ್ರಾಂಚೈಸಿಗಳು ಕೋಟಿ ಮೊತ್ತದ ಪರ್ಸ್ನೊಂದಿಗೆ ಆಟಗಾರ್ತಿಯರ ಖರೀದಿಗೆ ಪ್ಲ್ಯಾನ್ ರೂಪಿಸುತ್ತಿದೆ. ಅದರಂತೆ ಈ ಬಾರಿಯ ಮೆಗಾ ಆಕ್ಷನ್ ಮೂಲಕ ಯಾವ ಫ್ರಾಂಚೈಸಿ ಎಷ್ಟು ಆಟಗಾರ್ತಿಯರನ್ನು ಖರೀದಿಸಬಹುದು ಎಂದು ನೋಡುವುದಾದರೆ...

ಮುಂಬೈ ಇಂಡಿಯನ್ಸ್: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಟ್ಟು ಐವರು ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಇದೀಗ 5.75 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹರಾಜಿನ ಮೂಲಕ ಒಟ್ಟು 13 ಆಟಗಾರ್ತಿಯರನ್ನು ಖರೀದಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್: ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ ಐವರು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿದೆ. ಇದೀಗ 5.70 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಹರಾಜಿನ ಮೂಲಕ ಒಟ್ಟು 13 ಆಟಗಾರ್ತಿಯರನ್ನು ಖರೀದಿಸಬಹುದು.

ಗುಜರಾತ್ ಜೈಂಟ್ಸ್: ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ಈ ಬಾರಿ ಉಳಿಸಿಕೊಂಡಿರುವುದು ಕೇವಲ ಇಬ್ಬರನ್ನು ಮಾತ್ರ. ಅದರಂತೆ 9 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೆಗಾ ಹರಾಜಿನ ಮೂಲಕ ಒಟ್ಟು 16 ಆಟಗಾರ್ತಿಯರನ್ನು ಖರೀದಿಸಬಹುದು.

ಯುಪಿ ವಾರಿಯರ್ಸ್: ಉತ್ತರ ಪ್ರದೇಶ್ ವಾರಿಯರ್ಸ್ ಪ್ರಾಂಚೈಸಿಯು ಏಕೈಕ ಆಟಗಾರ್ತಿಯನ್ನು ಮಾತ್ರ ರಿಟೈನ್ ಮಾಡಿಕೊಂಡಿದೆ. ಇದೀಗ 14.5 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ಯುಪಿ ವಾರಿಯರ್ಸ್ ಮೆಗಾ ಹರಾಜಿನ ಮೂಲಕ ಒಟ್ಟು 17 ಆಟಗಾರ್ತಿಯರನ್ನು ಖರೀದಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ಫ್ರಾಂಚೈಸಿಯು ಈ ಬಾರಿ ನಾಲ್ವರು ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ 6.15 ಕೋಟಿ ರೂ. ಪರ್ಸ್ ಮೊತ್ತ ಹೊಂದಿರುವ ರಾಯಲ್ ಪಡೆ ಒಟ್ಟು 14 ಆಟಗಾರ್ತಿಯರನ್ನು ಖರೀದಿಸಬಹುದು.
Published On - 7:53 am, Sat, 8 November 25
