ನಟಿ ಅಮಲಾ ಪೌಲ್ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಹಾಕುವ ಬಟ್ಟೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದು ಇದೆ. ಅವರು ಬೋಲ್ಡ್ ಆದ ಬಟ್ಟೆ ಹಾಕುತ್ತಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ. ಈಗ ಅವರು ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ. ಮುಂಬರುವ ‘ಲೆವೆಲ್ ಕ್ರಾಸ್’ ಚಿತ್ರದ ಪ್ರಚಾರದ ವೇಳೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಡ್ರೆಸ್ಸಿಂಗ್ ಸ್ಟೈಲ್ನ ಹೇಗೆ ತೋರಿಸುತ್ತಾರೆ ಎಂಬುದರಲ್ಲೇ ಸಮಸ್ಯೆ ಇದೆ’ ಎಂದಿದ್ದಾರೆ ಅವರು.
ಹೀರೋಯಿನ್ಗಳು ಸುದ್ದಿಗೋಷ್ಠಿಗೆ ಸ್ವಲ್ಪ ಬೋಲ್ಡ್ ಆಗಿ ಬಂದರೂ ಕೆಲವರು ಅವರನ್ನು ಬೇರೆ ಬೇರೆ ರೀತಿಯ ಆ್ಯಂಗಲ್ನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ ಎನ್ನುವ ಆರೋಪ ಇದೆ. ಬಾಲಿವುಡ್ ಮಂದಿಯೂ ಈ ಆರೋಪ ಮಾಡುತ್ತಲೇ ಬರುತ್ತಾರೆ. ಈ ಬಗ್ಗೆ ಅಮಲಾ ಪೌಲ್ಗೂ ತಕರಾರು ಇದೆ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ.
‘ಸಮಸ್ಯೆ ಇರೋದು ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ನನಗೆ ಖುಷಿ ನೀಡೋದನ್ನು ನಾನು ಧರಿಸುತ್ತೇನೆ. ಫಂಕ್ಷನ್ಗಳಿಗೆ ನಾನು ಧರಿಸೋ ಡ್ರೆಸ್ ಅಸಹಜವಾಗಿ ಇರುವುದಿಲ್ಲ. ಅವರು ನನ್ನನ್ನು ಹೇಗೆ ಬಿಂಬಿಸುತ್ತಾರೆ ಎಂಬುದರಲ್ಲಿ ಸಮಸ್ಯೆ ಇದೆ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲ’ ಎಂದಿದ್ದಾರೆ ಅವರು.
‘ನಾನು ಎಲ್ಲ ರೀತಿಯ ಡ್ರೆಸ್ನ ಹಾಕುತ್ತೇನೆ. ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಟ್ರೋಲ್ಗಳ ಬಾಯಿಯನ್ನು ಅವರು ಮುಚ್ಚಿಸಿದ್ದಾರೆ.
ಇದನ್ನೂ ಓದಿ: ಡಿಫರೆಂಟ್ ಆಗಿದೆ ಅಮಲಾ ಪೌಲ್ ಪ್ರೆಗ್ನೆನ್ಸಿ ಫೋಟೋಶೂಟ್
ಅಮಲಾ ಪೌಲ್ ಅವರು ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡುಜೀವಿತಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರ ಪಾತ್ರ ಹೀಗೆ ಬಂದು ಹಾಗೆ ಹೋಗುತ್ತದೆ. ಅವರು ಕಥಾ ನಾಯಕನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇತ್ತೀಚೆಗೆ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:48 am, Fri, 26 July 24