ಖ್ಯಾತ ಕಿರುತೆರೆ ನಟಿಯ ಕುಟುಂಬದಲ್ಲಿ ಬೀಸಿತು ವಿಚ್ಛೇದನದ ಬಿರುಗಾಳಿ

ನಟ ಅಮನ್ ವರ್ಮಾ ಮತ್ತು ಕಿರುತೆರೆ ನಟಿ ವಂದನಾ ಲಾಲ್ವಾನಿ ಅವರ 9 ವರ್ಷಗಳ ವಿವಾಹ ಜೀವನಕ್ಕೆ ಅಂತ್ಯ ಕಾಣುತ್ತಿದೆ. ವಂದನಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಕಾರಣ ಇನ್ನೂ ಬಹಿರಂಗವಾಗಿಲ್ಲವಾದರೂ, ಭಿನ್ನಾಭಿಪ್ರಾಯಗಳು ಮುಂದುವರೆದಿರುವುದು ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ. ಅಮನ್ ಅವರು ಹಿಂದಿ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ವಂದನಾ ಅವರು ಕಿರುತೆರೆ ನಟಿಯಾಗಿದ್ದಾರೆ.

ಖ್ಯಾತ ಕಿರುತೆರೆ ನಟಿಯ ಕುಟುಂಬದಲ್ಲಿ ಬೀಸಿತು ವಿಚ್ಛೇದನದ ಬಿರುಗಾಳಿ
ಅಮನ್-ವಂದನಾ

Updated on: Mar 01, 2025 | 10:32 AM

ನಟ ಅಮನ್ ಯತನ್ ವರ್ಮಾ ಹಾಗೂ ಕಿರುತೆರೆ ನಟಿ ವಂದನಾ ಲಾಲ್ವಾನಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಆದರೆ, 9 ವರ್ಷಗಳ ಸಂಸಾರದಲ್ಲಿ ಈಗ ವಿಚ್ಛೇದನದ ಬಿರುಗಾಳಿ ಬೀಸಿದೆ ಎನ್ನಲಾಗಿದೆ. ಈಗ ನಟಿ ವಂದನಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ವರದಿ ಆಗಿದೆ. ಶೀಘ್ರವೇ ಈ ಜೋಡಿ ಬೇರೆ ಆಗೋದು ಖಚಿತ ಎನ್ನಲಾಗುತ್ತಿದೆ. ಇವರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ.

ಅಮನ್ ಅವರಿಗೆ 53 ವರ್ಷ ವಯಸ್ಸು. ಅವರು ಹಿಂದಿ ಧಾರಾವಾಹಿಗಳಾದ ‘ಶಾಂತಿ’, ‘ಕ್ಯುಕಿ ಸಾಸ್ ಭಿ ಕಭಿ ಬಹು ಥಿ’, ‘ಖುಲ್ಜಾ ಸಿಮ್ ಸಿಮ್’ ರೀತಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ‘ಸಂಘರ್ಷ’, ‘ಬಾಘ್​ಬನ್’ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇನ್ನು, ವಂದನಾ ಅವರು ‘ಕೇಸರಿಯಾ ಬಲ್ಮಾ ಆವೋ ಹಮಾರಾ ದೇಶ’, ‘ಇಂಡಿಯಾವಾಲಿ ಮಾ’ ರೀತಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ ವಿವಾಹ ಕೊನೆ ಆಗುತ್ತಿರುವ ವಿಚಾರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

2014ರಲ್ಲಿ ‘ಹಮ್ ನೇ ಲಿ ಶಪಥ್’ ಧಾರಾವಾಹಿ ಸೆಟ್​ನಲ್ಲಿ ಅಮನ್ ಹಾಗೂ ವಂದನಾ ಭೇಟಿ ಆದರು. ಇವರ ಮಧ್ಯೆ ಆಗ ಪ್ರೀತಿ ಮೂಡಿತು. 2015ರಲ್ಲಿ ಇವರು ಎಂಗೇಜ್ ಆದರೆ, 2016ರಲ್ಲಿ ಮದುವೆ ಆದರು. ವಿಚ್ಛೇದನ ವದಂತಿಯ ಬಗ್ಗೆ ಅಮನ್ ಉತ್ತರಿಸಲು ನಿರಾಕರಿಸಿದ್ದಾರೆ. ‘ನಾನು ಏನನ್ನೂ ಪ್ರತಿಕ್ರಿಯಿಸಲ್ಲ’ ಎಂದಿದ್ದಾರೆ.  ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರೋ ಅವರು ‘ಸತ್ಯ ಮೇಲುಗೈ ಸಾಧಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ಗೋವಿಂದ ಅವರಿಂದ ಬೇರೆ ಆಗಿ ಉಳಿದುಕೊಳ್ಳಲು ಕಾರಣ ನೀಡಿದ ಸುನಿತಾ

ವಂದನಾ ಹಾಗೂ ಅಮನ್ ಮಧ್ಯೆ ಹಲವು ವಿಚಾರಗಳಲ್ಲಿ ಭಿನ್ನತೆ ಮೂಡಿದೆ. ಅದನ್ನು ಸರಿಪಡಿಸಿಕೊಳ್ಳಲು ಇವರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಯಾವುದೂ ಸರಿ ಹೋಗುವ ರೀತಿ ಇಲ್ಲ. ಈ ಕಾರಣಕ್ಕೆ ವಂದನಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.