ಕೊನೆಗೂ ಬುದ್ಧಿ ಕಲಿತ ಎಎಂಬಿ: ದರ್ಶನ್ ಫೋಟೊ ನೋಡಿ ಫ್ಯಾನ್ಸ್ ಖುಷ್
AMB Cinemas: ಮಹೇಶ್ ಬಾಬು ಅವರ ಎಎಂಬಿ ಮಲ್ಟಿಪ್ಲೆಕ್ಸ್ನಲ್ಲಿ ಅತ್ಯುತ್ತಮ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಸ್ಥಳೀಯ ಸಿನಿಮಾಗಳು ಮತ್ತು ಕಲಾವಿದರಿಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಗೋಡೆಗಳ ಮೇಲೆ ಕನ್ನಡದ ಹಿಟ್ ಸಿನಿಮಾಗಳ, ಸ್ಟಾರ್ ಕಲಾವಿದರ ಫೋಟೊಗಳನ್ನು ಹಾಕಲಾಗಿತ್ತು. ಶಿವರಾಜ್ ಕುಮಾರ್, ಉಪೇಂದ್ರ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹೀಗೆ ಹಲವು ನಟರ ಫೋಟೊಗಳನ್ನು ಹಾಕಲಾಗಿತ್ತು ಆದರೆ ದರ್ಶನ್ ಚಿತ್ರ ಹಾಕಲಾಗಿರಲಿಲ್ಲ.

ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು (Mahesh Babu), ಸ್ಟಾರ್ ನಟರಾಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಹೌದು. ಮಹೇಶ್ ಬಾಬು ಅವರು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದು, ಅವುಗಳಲ್ಲಿ ಚಿತ್ರಮಂದಿರಗಳ ಉದ್ಯಮವೂ ಒಂದು. ಮಹೇಶ್ ಬಾಬು ಅವರು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್ ಉದ್ಯಮ ಹೊಂದಿದ್ದು, ಇತ್ತೀಚೆಗಷ್ಟೆ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಅದೂ ಬೆಂಗಳೂರಿನ ಐಕಾನಿಕ್ ಚಿತ್ರಮಂದಿರವಾದ ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿ.
ಅತ್ಯುತ್ತಮ ಗುಣಮಟ್ಟದ ಚಿತ್ರಮಂದಿರ ಇದಾಗಿದೆ ಆದರೆ ಚಿತ್ರಮಂದಿರ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಈ ಚಿತ್ರಮಂದಿರ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯ್ತು. ಅದಕ್ಕೆ ಕಾರಣವಾಗಿದ್ದು ದರ್ಶನ್ ಅವರ ಒಂದು ಚಿತ್ರ. ಮಲ್ಟಿಪ್ಲೆಕ್ಸ್ ಆಗಿರುವ ಎಎಂಬಿಯಲ್ಲಿ ಅತ್ಯುತ್ತಮ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಸ್ಥಳೀಯ ಸಿನಿಮಾಗಳು ಮತ್ತು ಕಲಾವಿದರಿಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಗೋಡೆಗಳ ಮೇಲೆ ಕನ್ನಡದ ಹಿಟ್ ಸಿನಿಮಾಗಳ, ಸ್ಟಾರ್ ಕಲಾವಿದರ ಫೋಟೊಗಳನ್ನು ಹಾಕಲಾಗಿತ್ತು. ಶಿವರಾಜ್ ಕುಮಾರ್, ಉಪೇಂದ್ರ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹೀಗೆ ಹಲವು ನಟರ ಫೋಟೊಗಳನ್ನು ಹಾಕಲಾಗಿತ್ತು ಆದರೆ ದರ್ಶನ್ ಚಿತ್ರ ಹಾಕಲಾಗಿರಲಿಲ್ಲ.
ಇದನ್ನು ಮೊದಲಿಗೆ ನಿರ್ದೇಶಕ ರವಿ ಶ್ರೀವತ್ಸ ಖಂಡಿಸಿ ಟ್ವೀಟ್ ಮಾಡಿದ್ದರು. ಬಳಿಕ ಕೆಲವು ಮಾಧ್ಯಮಗಳು ವರದಿ ಸಹ ಮಾಡಿದವು. ಸಿನಿಮಾಗಳ ಫೋಟೊಗಳಿದ್ದ ಗೋಡೆಯ ಮೇಲೆ ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾದ ಪೋಸ್ಟರ್ ಇತ್ತು, ಆದರೆ ಕಲಾವಿದರ ಚಿತ್ರವಿದ್ದ ಜಾಗದಲ್ಲಿ ದರ್ಶನ್ ಫೋಟೊ ಇರಲಿಲ್ಲ. ಇದು ದರ್ಶನ್ ಅಭಿಮಾನಿಗಳನ್ನು ಸಖತ್ ಕೆರಳಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ಸಹ ಹೊರಹಾಕಿದ್ದರು.
ಇದನ್ನೂ ಓದಿ:ಎಷ್ಟು ಲಕ್ಷುರಿಯಾಗಿದೆ ನೋಡಿ ಬೆಂಗಳೂರಲ್ಲಿ ತಲೆ ಎತ್ತಿದೆ ಮಹೇಶ್ ಬಾಬು ಮಲ್ಟಿಪ್ಲೆಕ್ಸ್
ಇದೀಗ ಎಎಂಬಿ ಸಿನಿಮಾಸ್ ಕಲಾವಿದರ ಫೋಟೊ ಜೊತೆಗೆ ನಟ ದರ್ಶನ್ ಫೋಟೊವನ್ನು ಸಹ ಸೇರಿಸಿದೆ. ಅಲ್ಲದೆ, ಈ ಹಿಂದೆ ನಟರ ಫೋಟೊಗಳನ್ನು ಒಂದು ಆರ್ಡರ್ನಲ್ಲಿ ಜೋಡಿಸದೆ ಮನಸೋಇಚ್ಛೆ ಜೋಡಿಸಲಾಗಿತ್ತು. ಆದರೆ ಈಗ ಜನಪ್ರಿಯತೆ ಮತ್ತು ಹಿರಿತನದ ಆಧಾರದಲ್ಲಿ ಫೋಟೊಗಳನ್ನು ಗೋಡೆಯ ಮೇಲೆ ಅಲಂಕರಿಸಿದ್ದು, ನಟ ದರ್ಶನ್ ಫೋಟೊವನ್ನು ಸಹ ಹಾಕಲಾಗಿದೆ.
ಇತ್ತೀಚೆಗಷ್ಟೆ ನಟ ಉಪೇಂದ್ರ ಅವರು ತಮ್ಮ ಕುಟುಂಬದೊಡನೆ ಎಎಂಬಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ನಟ ಅರ್ಜುನ್ ಸರ್ಜಾ ಅವರು ಸಹ ಈ ಸಮಯದಲ್ಲಿ ಜೊತೆಯಲ್ಲಿದ್ದರು. ಈ ವೇಳೆ ಉಪೇಂದ್ರ ಅವರು ಕಲಾವಿದರ ಫೋಟೊಗಳಿದ್ದ ಗೋಡೆಯ ಬಳಿಯೇ ಚಿತ್ರ ತೆಗೆಸಿಕೊಂಡಿದ್ದು, ಅದರಲ್ಲಿ ಉಪೇಂದ್ರ ಅವರ ಫೋಟೊ ಸ್ಪಷ್ಟವಾಗಿ ಕಾಣುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




