ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್ಗಿಲ್ಲ ಜಾಗ
Darshan Thoogudeepa: ಸ್ಟಾರ್ ನಟರಾಗಿರುವ ಜೊತೆಗೆ ಮಹೇಶ್ ಬಾಬು ಒಳ್ಳೆಯ ಉದ್ಯಮಿಯೂ ಹೌದು. ಮಹೇಶ್ ಬಾಬು ಅವರು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ನಡೆಸುತ್ತಾರೆ. ಈಗಾಗಲೇ ಹೈದರಾಬಾದ್ನಲ್ಲಿ ಹಾಗೂ ಇನ್ನೂ ಕೆಲವೆಡೆ ಐಶಾರಾಮಿ ಮಲ್ಟಿಪ್ಲೆಕ್ಸ್ಗಳನ್ನು ಮಹೇಶ್ ಬಾಬು ಹೊಂದಿದ್ದು, ಇದೀಗ ಬೆಂಗಳೂರಿನಲ್ಲೂ ಎಎಂಬಿಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಎಎಂಬಿಯಲ್ಲಿ ಕನ್ನಡದ ಸ್ಟಾರ್ ನಟರ ಚಿತ್ರಗಳಿವೆ ಆದರೆ ದರ್ಶನ್ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ.

ಮಹೇಶ್ ಬಾಬು (Mahesh Babu) ಭಾರತೀಯ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಸ್ಟಾರ್ ನಟರಾಗಿರುವ ಜೊತೆಗೆ ಮಹೇಶ್ ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಮಹೇಶ್ ಬಾಬು. ಅವುಗಳಲ್ಲಿ ಚಿತ್ರಮಂದಿರ ಪ್ರದರ್ಶನವೂ ಹೌದು. ಮಹೇಶ್ ಬಾಬು ಅವರು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ನಡೆಸುತ್ತಾರೆ. ಈಗಾಗಲೇ ಹೈದರಾಬಾದ್ನಲ್ಲಿ ಹಾಗೂ ಇನ್ನೂ ಕೆಲವೆಡೆ ಐಶಾರಾಮಿ ಮಲ್ಟಿಪ್ಲೆಕ್ಸ್ಗಳನ್ನು ಮಹೇಶ್ ಬಾಬು ಹೊಂದಿದ್ದು, ಇದೀಗ ಬೆಂಗಳೂರಿನಲ್ಲೂ ಎಎಂಬಿಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರಿನ ಐಕಾನಿಕ್ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿಯೇ ಇದೀಗ ಮಹೇಶ್ ಬಾಬು ಅವರ ಎಎಂಬಿ ಪ್ರಾರಂಭ ಆಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆ, ಸೌಂಡ್, ಸ್ಕ್ರೀನ್, ಗುಣಮಟ್ಟದ ಆಹಾರ, ಶುಚಿತ್ವ ಎಲ್ಲವನ್ನೂ ಸಹ ಎಎಂಬಿ ಒಳಗೊಂಡಿದೆ. ಇವುಗಳ ಜೊತೆಗೆ ಅತ್ಯುತ್ತಮ ಇಂಟೀರಿಯರ್ ಡೆಕೊರೇಷನ್ ಅನ್ನು ಸಹ ಎಎಂಬಿ ಒಳಗೊಂಡಿದೆ. ಕನ್ನಡದ ಸ್ಟಾರ್ ನಟರುಗಳ ಚಿತ್ರಗಳನ್ನು ಸಹ ಇಲ್ಲಿ ಪ್ರದರ್ಶನ ಮಾಡಲಾಗಿದೆ. ಆದರೆ ದರ್ಶನ್ ಅವರ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ.
Welcome to Bangalore Mahesh Babu Sir..
Visited AMB Screens.. Amazing Fabulous & thnxzzzzz to @urstrulyMahesh Mahesh Babu Sir..
Olledaagali
BUT I FELT VERY SAD “DARSHAN” SIR PHOTO IS MISSING IN ARTISTS PHOTO GALLERY.. 🥺
ತಪ್ಪಾಗಿದೆ❌ ತಿದ್ಗೋಳಿ 🔴@dasadarshan pic.twitter.com/SqV2dFPksF
— Ravii Srivatsaa (@deadlysrivatsaa) January 16, 2026
ಕನ್ನಡದ ಪ್ರಸ್ತುತ ಜನಪ್ರಿಯ ನಟರುಗಳ ಚಿತ್ರಗಳನ್ನು ಎಎಂಬಿಯ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ಪ್ರದರ್ಶಿಸಲಾಗಿದೆ. ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ಗಣೇಶ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಅವರುಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ ಇಲ್ಲಿ ದರ್ಶನ್ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ. ಇದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು? ಇದೆಂಥ ಅಚ್ಚರಿ
ಇತ್ತೀಚೆಗಷ್ಟೆ ನಿರ್ದೇಶಕ ರವಿ ಶ್ರೀವತ್ಸ ಅವರು ಎಎಂಬಿಗೆ ಭೇಟಿ ನೀಡಿದ್ದರು. ಅಲ್ಲಿ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ನಟ ದರ್ಶನ್ ಚಿತ್ರ ಇಲ್ಲದೇ ಇರುವುದನ್ನು ಗಮನಿಸಿ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ‘ಮಹೇಶ್ ಬಾಬು ಅವರೇ ಬೆಂಗಳೂರಿಗೆ ಸ್ವಾಗತ, ಎಎಂಬಿ ಸ್ಕ್ರೀನ್ಸ್ಗೆ ಭೇಟಿ ನೀಡಿದ್ದೆ. ಅದ್ಭುತವಾಗಿದೆ. ಗುಣಮಟ್ಟದ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಕ್ಕೆ ಧನ್ಯವಾದಗಳು, ಒಳ್ಳೆಯದಾಗಲಿ. ಆದರೆ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ದರ್ಶನ್ ಅವರ ಫೋಟೊ ಮಿಸ್ ಆಗಿದೆ, ಇದು ನೋಡಿ ಬೇಸರವಾಯ್ತು’ ಎಂದಿದ್ದಾರೆ.
ನಟ ದರ್ಶನ್ ಪ್ರಸ್ತುತ ರೇಣುಕಾ ಸ್ವಾಮಿ ಕೊಲೆ ಕೇಸಿನ ಆರೋಪಿ ಆಗಿದ್ದು, ಕೊಲೆ ಕೇಸೊಂದರ ಆರೋಪಿಯ ಚಿತ್ರ ಕಲಾವಿದರ ಗ್ಯಾಲೆರಿಯಲ್ಲಿ ಹಾಕುವುದು ಬೇಡವೆಂದು ಎಎಂಬಿ ವ್ಯವಸ್ಥಾಪನ ಮಂಡಳಿ ನಿರ್ಣಯಿಸಿರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




