AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ‘ಪುಷ್ಪ’ ಚಿತ್ರ? ಆನೆ ದಂತದ ಕಳ್ಳಸಾಗಣೆಯ ಕಥೆ ‘ಕಾಟಾಳನ್’

ಮಲಯಾಳಂನ 'ಕಾಟಾಳನ್' ಸಿನಿಮಾ ಆನೆ ದಂತ ಕಳ್ಳಸಾಗಣೆಯ ಕರಾಳ ಜಗತ್ತನ್ನು ತೆರೆದಿಡಲಿದೆ. ಭರ್ಜರಿ ಆಕ್ಷನ್ ದೃಶ್ಯಗಳು, ನೈಜ ಆನೆಗಳ ಸೆಣೆಸಾಟ ಇದರ ಹೈಲೈಟ್. ಮೇ 14ಕ್ಕೆ ಮಲಯಾಳಂ, ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಸುನೀಲ್, ಆ್ಯಂಟನಿ ವರ್ಗೀಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡದ ಅಜನೀಶ್ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಟೀಸರ್ ನಿರೀಕ್ಷೆ ಹೆಚ್ಚಿಸಿದೆ.

ಮತ್ತೊಂದು ‘ಪುಷ್ಪ’ ಚಿತ್ರ? ಆನೆ ದಂತದ ಕಳ್ಳಸಾಗಣೆಯ ಕಥೆ ‘ಕಾಟಾಳನ್’
ಕಾಟಾಳನ್ ಟೀಸರ್
ರಾಜೇಶ್ ದುಗ್ಗುಮನೆ
|

Updated on: Jan 17, 2026 | 3:05 PM

Share

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯನ್ನು ಹೇಳಲಾಗಿತ್ತು. ಈಗ ‘ಕಾಟಾಳನ್’ ಹೆಸರಿನ ಮಲಯಾಳಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಆನೆ ದಂತದ ಕಳ್ಳ ಸಾಗಣೆಯ ಕರಾಳ ಜಗತ್ತನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದಂತಿದೆ. ಇದರ ಜೊತೆಗೆ ಭರ್ಜರಿ ಆ್ಯಕ್ಷನ್ ಕೂಡ ಸಿನಿಮಾದಲ್ಲಿ ಇರಲಿದೆ.

‘ಕಾಟಾಳನ್’ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆ ಕಂಡಿದೆ. ಇದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈ ಸಿನಿಮಾ ಮೇ 14ರಂದು ರಿಲೀಸ್ ಆಗಲಿದೆ. ‘ಕಾಟಾಳನ್’ ಮಲಯಾಳಂ ಚಿತ್ರ. ಈ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ ಎಂಬುದು ವಿಶೇಷ.

ಈ ಚಿತ್ರದಲ್ಲಿ ಪಾತ್ರಗಳ ಜೊತೆಗೆ ಆನೆಗಳು ಕೂಡ ಹೈಲೈಟ್ ಆಗಿವೆ. ಆನೆಗಳ ಜೊತೆಗಿನ ಸಾಹಸ ದೃಶ್ಯ ಟೀಸರ್​​​ನಲ್ಲಿ ಗಮನ ಸೆಳೆದಿವೆ. ದಂತದ ಕಳ್ಳಸಾಗಣೆ ವಿಷಯ ಕೂಡ ಹೈಲೈಟ್ ಆಗಿದೆ. ಸಾಮಾನ್ಯವಾಗಿ ಆನೆಗಳ ಜೊತೆಗಿನ ಸೆಣೆಸಾಟ ಎಂದಾಗ ಗ್ರಾಫಿಕ್ಸ್ ಬಳಸುತ್ತಾರೆ. ಆದರೆ, ನೈಜವಾಗಿ ಇದನ್ನು ಚಿತ್ರೀಕರಿಸಲಾಗಿದೆ. ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೇಚಾ ಖಾನ್ಫಕ್ಡಿ ನೇತೃತ್ವದಲ್ಲಿ ಥೈಲ್ಯಾಂಡ್‌ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

‘ಕಾಟಾಳನ್’ ಸಿನಿಮಾನ ಪೌಲ್ ಜಾರ್ಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಂಟನಿ ವರ್ಗೀಸ್, ‘ಪುಷ್ಪ’ ಖ್ಯಾತಿಯ ತೆಲುಗು ನಟ ಸುನೀಲ್, ಕಬೀರ್ ಸಿಂಗ್, ದುಶಾರಾ ವಿಜಯನ್ ಮೊದಲಾದವರು ನಟಿಸಿದ್ದಾರೆ. ಯಾವುದೇ ಸಿನಿಮಾ ಯಶಸ್ಸು ಕಾಣಬೇಕು ಎಂದರೆ ಸಂಗೀತದ ಪಾತ್ರ ದೊಡ್ಡದಿರುತ್ತದೆ. ಈ ಚಿತ್ರಕ್ಕೆ ಕನ್ನಡದ ಬಿ. ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್​​ನ ಹಿನ್ನೆಲೆ ಸಂಗೀತ ಗಮನ ಸೆಳೆಯುವ ರೀತಿಯಲ್ಲಿದೆ.

ಇದನ್ನೂ ಓದಿ: Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

ಕ್ಯೂಬ್ ಎಂಟರ್​​​ಟೇನ್​​​ಮೆಂಟ್ ಬ್ಯಾನರ್ ಅಡಿಯಲ್ಲಿ ಶರೀಫ್‌ ಮೊಹಮ್ಮದ್ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್​​ಗೂ ಮೊದಲೇ ಸದ್ದು ಮಾಡುತ್ತಿದ್ದು, ಒಟಿಟಿ ಹಾಗೂ ಟಿವಿ ಹಕ್ಕಿಗೆ ಬೇಡಿಕೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಸ್ಮಿತ್ ಸಿಡಿಲಬ್ಬರ... ಒಂದೇ ಓವರ್​ನಲ್ಲಿ ದಾಖಲೆ ಉಡೀಸ್
ಸ್ಮಿತ್ ಸಿಡಿಲಬ್ಬರ... ಒಂದೇ ಓವರ್​ನಲ್ಲಿ ದಾಖಲೆ ಉಡೀಸ್
ಇವತ್ತು ಫಿನಾಲೆ ಅಲ್ಲ, ಪ್ರೀ ಫಿನಾಲೆ; ಮಾಹಿತಿ ಕೊಟ್ಟ ಕಲರ್ಸ್ ಕನ್ನಡ
ಇವತ್ತು ಫಿನಾಲೆ ಅಲ್ಲ, ಪ್ರೀ ಫಿನಾಲೆ; ಮಾಹಿತಿ ಕೊಟ್ಟ ಕಲರ್ಸ್ ಕನ್ನಡ
ಜಿಬಿಎ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್​ಡಿಕೆ ಮಹತ್ವದ ಘೋಷಣೆ
ಜಿಬಿಎ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್​ಡಿಕೆ ಮಹತ್ವದ ಘೋಷಣೆ
ವಯಸ್ಸು ನಂಬರ್ ಮಾತ್ರ; ಸಿಸಿಎಲ್​​ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಕಿಚ್ಚ
ವಯಸ್ಸು ನಂಬರ್ ಮಾತ್ರ; ಸಿಸಿಎಲ್​​ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಕಿಚ್ಚ