‘ನಾನು ಬಿಗ್ ಬಾಸ್‌ಗೆ ಬರಲು ಆ ವ್ಯಕ್ತಿ ಕಾರಣ’; ಮಾಜಿ ಸ್ಪರ್ಧಿಗೆ ಗಿಲ್ಲಿ ಧನ್ಯವಾದ
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟ ಇನ್‌ಸ್ಟಾಗ್ರಾಮ್‌ನಲ್ಲಿ 1.5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಅವರ ಜನಪ್ರಿಯತೆ ಎತ್ತಿ ತೋರಿಸುತ್ತದೆ. ಅವರು ಬಿಗ್ ಬಾಸ್‌ಗೆ ಬರಲು ತುಕಾಲಿ ಸಂತೋಷ್ ಕಾರಣ ಎಂದು ಈಗ ಬಹಿರಂಗಪಡಿಸಿದ್ದಾರೆ. ತುಕಾಲಿ ಸಂತೋಷ್ ಅವರ ಪಾತ್ರಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss) ಸ್ಪರ್ಧಿ ಗಿಲ್ಲಿ ನಟಗೆ ಅಭಿಮಾನಿ ಬಳಗ ಹಿರಿದಾಗಿದೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1.5 ಮಿಲಿಯನ್ ಅಂದರೆ 15 ಲಕ್ಷ ಹಿಂಬಾಲಕರು ಸಿಕ್ಕಿದ್ದಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಈಗ ಅವರು ಬಿಗ್ ಬಾಸ್‌ಗೆ ಬರಲು ಕಾರಣ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅವರು ಬಿಗ್ ಬಾಸ್ನ ಓರ್ವ ಮಾಜಿ ಸ್ಪರ್ಧಿಗೆ ಧನ್ಯವಾದ ಹೇಳಿದ್ದಾರೆ.
ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ ಶೋಗಳನ್ನು ನೀಡುತ್ತಾ ಬಂದವರು. ಅವರು ಮೊದಲ ಬಾರಿಗೆ ಕಲರ್ಸ್ನಲ್ಲಿ ಕಾಣಿಸಿಕೊಂಡಿದ್ದು ‘ಕ್ವಾಟ್ಲೆ ಕಿಚನ್’ ಶೋನಲ್ಲಿ. ಇದರಲ್ಲಿ ಅವರು ಹೆಚ್ಚು ದಿನ ಇರಲಿಲ್ಲ. ಆ ಬಳಿಕ ಗಿಲ್ಲಿ ನಟ ಅವರು ‘ಬಿಗ್ ಬಾಸ್’ ಶೋಗೆ ಬಂದು ಗಮನ ಸೆಳೆದರು. ಅವರು ಅದ್ಭುತವಾಗಿ ಮನರಂಜನೆ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ಇಲ್ಲಿಗೆ ಬರಲು ಕಾರಣ ತುಕಾಲಿ ಸಂತೋಷ್ ಎಂಬ ವಿಷಯ ಗೊತ್ತಾಗಿದೆ.
ತುಕಾಲಿ ಸಂತೋಷ್ ಅವರು ‘ಗಿಚ್ಚಿ ಗಿಲಿಗಿಲಿ’ ತಂಡದಲ್ಲಿ ಇದ್ದಾರೆ. ಈ ತಂಡ ಬಿಗ್ ಬಾಸ್ ಮನೆಗೆ ಬಂದಿತ್ತು. ಈ ವೇಳೆ ಇಷ್ಟದ ಸ್ಪರ್ಧಿ ಯಾರು ಎಂಬುದನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಿಲ್ಲಿ, ಹಲವರ ಹೆಸರನ್ನು ಹೇಳಿದರು. ಆದರೆ, ತುಕಾಲಿ ಹೆಸರನ್ನು ಅವರು ಉಲ್ಲೇಖ ಮಾಡಿಲ್ಲ. ಆಗ ತುಕಾಲಿ ಸಂತು ಅವರು, ‘ನನ್ನ ಹೆಸರನ್ನು ಹೇಳ್ತೀಯಾ ಎಂದು ಕಾಯ್ತಾ ಇದ್ದೆ’ ಎಂದರು.
‘ನಿನ್ನನ್ನು ಮರೆಯೋಕೆ ಹೇಗೆ ಸಾಧ್ಯ? ಈ ಶೋಗೆ ಬರೋಕೆ ನೀನು ಕಾರಣ. ಮರೆತು ಬಿಟ್ಟೆಯಾ? ಅಣ್ಣನೇ ಸಂಧಾನ ಮಾಡ್ಸಿದ್ದು’ ಎಂದು ಗಿಲ್ಲಿ ಹೇಳಿದರು. ಏನು ಸಂಧಾನ ಎಂಬಿತ್ಯಾದಿ ವಿಷಯವನ್ನು ಉಲ್ಲೇಖಿಸಿಲ್ಲ. ಗಿಲ್ಲಿ ಈ ಶೋಗೆ ಬರೋಕೆ ತುಕಾಲಿ ಸಂತೋಷ್ ಕಾರಣ ಎಂಬ ವಿಷಯ ಸ್ಪಷ್ಟವಾಗಿದೆ. ಇದನ್ನು ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರಿಂದಾಗಿ ಒಂದೊಳ್ಳೆಯ ಕೆಲಸ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ನಾಟಕಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್
ಈ ಸೀಸನ್ ಅಲ್ಲಿ ಗಿಲ್ಲಿ ಇಲ್ಲದೆ ಇದ್ದಿದ್ದರೆ ಸಾಕಷ್ಟು ನಷ್ಟ ಆಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರೂ ಗಿಲ್ಲಿಯ ಅಭಿಮಾನಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




