AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ದಾಖಲೆ ಮುರಿದ ಅಪ್ಪ: ‘RRR’ ಹಿಂದಿಕ್ಕಿದ ‘MSVPG’

Megastar Chiranjeevi: ಚಿರಂಜೀವಿ ನಟಿಸಿರುವ ‘ಮನ ಶಂಕರ ವರ ಪ್ರಸಾದ್ ಗಾರು’ (MSVPG) ಸಿನಿಮಾ ಇತರೆ ಸಿನಿಮಾಗಳನ್ನು ಬಾಕ್ಸ್ ಆಫೀಸ್​​ನಲ್ಲಿ ಹಿಂದಿಕ್ಕಿದೆ. ಅದು ಮಾತ್ರವೇ ಅಲ್ಲದೆ ಈ ಸಿನಿಮಾ ತೆಲುಗು ಚಿತ್ರರಂಗದ ಇತ್ತೀಚೆಗಿನ ಟಾಪ್ ಸಿನಿಮಾಗಳಲ್ಲಿ ಒಂದಾಗಿರುವ ‘ಆರ್​​ಆರ್​​ಆರ್’ ಸಿನಿಮಾದ ಒಂದು ದಾಖಲೆಯನ್ನೇ ಮುರಿದು ಹಾಕಿದೆ. ಯಾವುದು ಆ ದಾಖಲೆ? ಇಲ್ಲಿದೆ ನೋಡಿ ಮಾಹಿತಿ...

ಮಗನ ದಾಖಲೆ ಮುರಿದ ಅಪ್ಪ: ‘RRR’ ಹಿಂದಿಕ್ಕಿದ ‘MSVPG’
Mana Sankara Rrr
ಮಂಜುನಾಥ ಸಿ.
|

Updated on: Jan 17, 2026 | 4:19 PM

Share

ಸಂಕ್ರಾಂತಿಗೆ ತೆಲುಗಿನ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಪ್ರಭಾಸ್ (Prabhas) ಸಿನಿಮಾ ಸೇರಿದಂತೆ, ಒಟ್ಟು ಐದು ದೊಡ್ಡ ಸಿನಿಮಾಗಳೇ ಬಿಡುಗಡೆ ಆಗಿವೆ. ಆದರೆ ಗೆದ್ದಿರುವುದು ಮೆಗಾಸ್ಟಾರ್ ಚಿರಂಜೀವಿ ಮಾತ್ರ. ಚಿರಂಜೀವಿ ನಟಿಸಿರುವ ‘ಮನ ಶಂಕರ ವರ ಪ್ರಸಾದ್ ಗಾರು’ (MSVPG) ಸಿನಿಮಾ ಇತರೆ ಸಿನಿಮಾಗಳನ್ನು ಬಾಕ್ಸ್ ಆಫೀಸ್​​ನಲ್ಲಿ ಹಿಂದಿಕ್ಕಿದೆ. ಅದು ಮಾತ್ರವೇ ಅಲ್ಲದೆ ಈ ಸಿನಿಮಾ ತೆಲುಗು ಚಿತ್ರರಂಗದ ಇತ್ತೀಚೆಗಿನ ಟಾಪ್ ಸಿನಿಮಾಗಳಲ್ಲಿ ಒಂದಾಗಿರುವ ‘ಆರ್​​ಆರ್​​ಆರ್’ ಸಿನಿಮಾದ ಒಂದು ದಾಖಲೆಯನ್ನೇ ಮುರಿದು ಹಾಕಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಜನವರಿ 12 ರಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಮೊದಲ ದಿನ ಸುಮಾರು 84 ಕೋಟಿ ಹಣ ಗಳಿಸಿತ್ತು. ಅದಾದ ಬಳಿಕವೂ ಸಹ ಸಿನಿಮಾ ಕಲೆಕ್ಷನ್​​ನಲ್ಲಿ ಇಳಿಕೆ ಆಗಿಲ್ಲ. ಅದರಲ್ಲೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲೆಕ್ಷನ್ ಗಮನಾರ್ಹ ಮಟ್ಟದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬರುತ್ತಿದ್ದರೂ ಸಿನಿಮಾ ಈಗಲೂ ಡಬಲ್ ಡಿಜಿಟ್ ಗಳಿಕೆ ಮಾಡುತ್ತಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಬಿಡುಗಡೆ ಆದ ಐದನೇ ದಿನ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಇದು ಕಡಿಮೆ ಮೊತ್ತವಲ್ಲ. ‘ಆರ್​​ಆರ್​​ಆರ್​ಆರ್’ ಸಿನಿಮಾ ಸಹ ಬಿಡುಗಡೆ ಆದ ಐದನೇ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರಲಿಲ್ಲ. ‘ಆರ್​​ಆರ್​​ಆರ್’ ಸಿನಿಮಾ ಐದನೇ ದಿನ ಗಳಿಸಿದ್ದಿದ್ದು 13 ಕೋಟಿ ರೂಪಾಯಿಗಳು ಆದರೆ ‘ಶಂಕರ ವರ ಪ್ರಸಾದ್’ ಗಳಿಸಿರುವುದು 14.50 ಕೋಟಿ. ಆ ಮೂಲಕ ‘ಆರ್​​ಆರ್​​ಆರ್’ ಸಿನಿಮಾದ ದಾಖಲೆಯನ್ನೇ ಮುರಿದಿದೆ ಚಿರಂಜೀವಿ ಸಿನಿಮಾ. ಆ ಮೂಲಕ ತಮ್ಮ ಪುತ್ರ ರಾಮ್ ಚರಣ್ ಅವರ ದಾಖಲೆಯನ್ನೇ ಮುರಿದಂತಾಗಿದೆ ಚಿರಂಜೀವಿ.

ಇದನ್ನೂ ಓದಿ:ಒಂದೇ ದಿನ ರಚಿತಾ ರಾಮ್ ಎರಡು ಸಿನಿಮಾಗಳು ರಿಲೀಸ್; ಫ್ಯಾನ್ಸ್​​ಗೆ ಹಬ್ಬ

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಐದು ದಿನಗಳಲ್ಲಿ 200 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಚಿರಂಜೀವಿ ಅವರ ಸಿನಿಮಾ ಒಂದು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ಇದೇ ಮೊದಲು. 2019 ರಲ್ಲಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಾಗಿನಿಂದಲೂ ಸಹ ಚಿರಂಜೀವಿಗೆ ಇಷ್ಟು ದೊಡ್ಡ ಜಯ ಲಭಿಸಿರಲಿಲ್ಲ. ಚಿರಂಜೀವಿ ನಟಿಸಿದ ಸಿನಿಮಾಗಳು ಸತತವಾಗಿ ಬಾಕ್ಸ್ ಆಫೀಸ್​​ನಲ್ಲಿ ಸೋಲುತ್ತಲೇ ಇದ್ದವು. ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಚಿರಂಜೀವಿಗೆ ಮತ್ತೆ ಗೆಲುವು ಲಭಿಸಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಯನತಾರಾ ನಾಯಕಿ. ವಿಕ್ಟರಿ ವೆಂಕಟೇಶ್ ಸಹ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯದ ಜೊತೆಗೆ ಸಖತ್ ಆಕ್ಷನ್ ಸಹ ಸಿನಿಮಾನಲ್ಲಿದೆ. ಈ ಸಿನಿಮಾನಲ್ಲಿ ವಿಂಟೇಜ್ ಚಿರಂಜೀವಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ
ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ
ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ
ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ
ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಮೋದಿ ಚಾಲನೆ
ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಮೋದಿ ಚಾಲನೆ
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಪೌರಾಯುಕ್ತೆಗೆ ಅವಾಚ್ಯ ಶಬ್ದ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್
ಪೌರಾಯುಕ್ತೆಗೆ ಅವಾಚ್ಯ ಶಬ್ದ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್