ಬೆಂಗಳೂರಲ್ಲಿ ಜನವರಿ 16ಕ್ಕೆ ಎಎಂಬಿ ಸಿನಿಮಾಸ್ ಕಾರ್ಯಾರಂಭ; ವಿಶೇಷತೆ ಏನು?

ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ. ಬೆಂಗಳೂರಿನ ಗಾಂಧಿ ನಗರದಲ್ಲಿ ಹಲವು ಚಿತ್ರಮಂದಿರಗಳು ಇದ್ದವು. ಇದರ ಪೈಕಿ ಕಪಾಲಿ ಚಿತ್ರಮಂದಿರ ಕೂಡ ಒಂದಾಗಿತ್ತು. ಇಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಪ್ರದರ್ಶನ ಕಂಡಿದ್ದವು. ಈಗ ಹೊಸ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ.

ಬೆಂಗಳೂರಲ್ಲಿ ಜನವರಿ 16ಕ್ಕೆ ಎಎಂಬಿ ಸಿನಿಮಾಸ್ ಕಾರ್ಯಾರಂಭ; ವಿಶೇಷತೆ ಏನು?
Mahesh Babu
Edited By:

Updated on: Jan 15, 2026 | 6:00 AM

ಮಹೇಶ್ ಬಾಬು ಅವರು ಕೇವಲ ನಟನೆ ಮಾತ್ರವಲ್ಲದೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಅವರ ಒಡೆತನದ ಎಎಂಬಿ ಸಿನಿಮಾಸ್ ಕೂಡ ಒಂದು. ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಚೈನ್ ಆಗಿದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭ ಆಗುತ್ತಿದೆ. ಇದಕ್ಕೆ ದಿನಾಂಕ ಫಿಕ್ಸ್ ಆಗಿದೆ. ಮಹೇಶ್ ಬಾಬು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ. ಬೆಂಗಳೂರಿನ ಗಾಂಧಿ ನಗರದಲ್ಲಿ ಹಲವು ಚಿತ್ರಮಂದಿರಗಳು ಇದ್ದವು. ಇದರ ಪೈಕಿ ಕಪಾಲಿ ಚಿತ್ರಮಂದಿರ ಕೂಡ ಒಂದಾಗಿತ್ತು. ಇಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಪ್ರದರ್ಶನ ಕಂಡಿದ್ದವು. ಈಗ ಹೊಸ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಇದು ಡಿಸೆಂಬರ್​​ನಲ್ಲೇ ಆರಂಭ ಆಗಬೇಕಿತ್ತು. ಆದರೆ, ಒಂದು ತಿಂಗಳು ತಡವಾಗಿದೆ.

ಮಹೇಶ್ ಬಾಬು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜನವರಿ 16ರಂದು ಬೆಂಗಳೂರಿನಲ್ಲಿ AMB ಸಿನಿಮಾಸ್ ಕಾರ್ಯಾರಂಭ ಮಾಡಲಿದೆ. ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಥಿಯೇಟರ್ ಇದು. ಇದನ್ನು ಮಾಡಲು ಎಎಂಬಿ ತಂಡ ಸಾಕಷ್ಟು ಶ್ರಮ ಹಾಕಿದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ನೋಡಲು ಕಾದಿದ್ದೇನೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಕಾನಿಕ್ ಚಿತ್ರಮಂದಿರ ಇದ್ದ ಜಾಗದಲ್ಲೇ ಹೊಸ ಚಿತ್ರಮಂದಿರ ನಿರ್ಮಿಸಿದ ಮಹೇಶ್ ಬಾಬು

ಈ ಥಿಯೇಟರ್ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಅಟ್ಮೋಸ್ ಚಿತ್ರಮಂದಿರ ಆಗಿರಲಿದೆ. 60 ಅಡಿ ಅಗಲದ 9 ಸ್ಕ್ರೀನ್​​ಗಳು ಇದರಲ್ಲಿ ಇರಲಿವೆ. ಪ್ರತಿ ಸ್ಕ್ರೀನ್​​ನಲ್ಲಿ 600 ಪ್ರೇಕ್ಷಕರು ಒಮ್ಮೆಲೆ ಸಿನಿಮಾ ನೋಡಬಹುದಾಗಿದೆ. ಸ್ಕ್ರೀನ್ ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಹೊಂದಿರಲಿದೆಯಂತೆ. ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್​​ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.