
‘ಅಮೃತಧಾರೆ’ ಧಾರಾವಾಹಿಯಲ್ಲಿ ಫ್ಯಾನ್ಸ್ಗೆ ಇಷ್ಟ ಆಗುವ ರೀತಿಯಲ್ಲಿ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಕಥೆ ಐದು ವರ್ಷ ಮುಂದಕ್ಕೆ ಹೋಗಿದೆ. ಗೌತಮ್ ಹಾಗೂ ಭೂಮಿಕಾ ಬೇರೆ ಆಗಿದ್ದಾರೆ. ಈಗ ಇವರನ್ನು ಒಂದು ಮಾಡುವ ರೀತಿಯಲ್ಲಿ ಕಥೆ ಮೂಡಿ ಬರುತ್ತಿದೆ. ಹೀಗಿರುವಾಗಲೇ ಗೌತಮ್ ಹಾಗೂ ಭೂಮಿಕಾ ಮಗ ಆಕಾಶನ್ ಕಿಡ್ನ್ಯಾಪ್ ಮಾಡಲಾಗಿದೆ. ಅವನನ್ನು ಗೌತಮ್ ಕಾಪಾಡಿದ್ದಾನೆ. ಅಲ್ಲದೆ ಅಮ್ಮ ಮಗನ ಕಾಪಾಡುವ ಕಾವಲುಗಾರ ಎಂದು ಹೇಳಿದ್ದಾನೆ.
ಸದ್ಯ ‘ಅಮೃತಧಾರೆ’ ಧಾರಾವಾಹಿಯ ಕಥೆ ಸಾಗುತ್ತಿರುವುದು ಕುಶಾಲನಗರದಲ್ಲಿ. ಗೌತಮ್ ಭೂಮಿಕಾನಾ ಹುಡುಕುತ್ತಾ ಅಲ್ಲಿಗೆ ಹೋಗಿದ್ದಾನೆ. ಈ ವೇಳೆ ಆತನಿಗೆ ಭೂಮಿಕಾ ಹಾಗೂ ಮಗ ಸಿಕ್ಕಿದ್ದಾರೆ. ಇಬ್ಬರನ್ನೂ ಮತ್ತೆ ಸೇರಿಸಲು ವಿಧಿಯೇ ಸಂಚು ರೂಪಿಸಿದೆ ಎಂದೇ ಹೇಳಬಹುದು. ಇಬ್ಬರೂ ಹಾಯಾಗಿ ದೂರದಿಂದಲೇ ಖುಷಿ ಪಡುವಾಗ ಇವರ ಮಧ್ಯೆ ಎಂಎಲ್ಎ ಆಗಮನ ಆಗಿದೆ.
ಆ ಭಾಗದ ಎಂಎಲ್ಎಯ ವಿರೋಧವನ್ನು ಭೂಮಿಕಾ ಕಟ್ಟಿಕೊಂಡಳು. ಎಂಎಲ್ಎ ಮಗ ಕೆಟ್ಟ ಅಭ್ಯಾಸ ರೂಢಿಸಿಕೊಂಡಿದ್ದಾನೆ ಎಂದು ಆತನಿಗೆ ಎಚ್ಚರಿಸೋ ಕೆಲಸ ಮಾಡಿದಳು ಭೂಮಿಕಾ. ಇದು ತಪ್ಪು ಎಂದು ಆತನಿಗೆ ಭೂಮಿಕಾ ಹೇಳಿದಳು. ಇದು ಎಂಎಲ್ಎ ಕೋಪಕ್ಕೆ ಕಾರಣ ಆಗಿದೆ. ಈ ಕಾರಣಕ್ಕೆ ಭೂಮಿಕಾ ಮಗನ ಕಿಡ್ನ್ಯಾಪ್ ಮಾಡಲಾಗಿದೆ.
ಕಿಡ್ನ್ಯಾಪ್ ಮಾಡುತ್ತಿದ್ದಂತೆ ಗೌತಮ್ ಅವರ ರಕ್ಷಣೆಗೆ ಹೋಗಿದ್ದಾನೆ. ಮಗುವನ್ನು ರಕ್ಷಣೆ ಮಾಡಿದ್ದಾನೆ. ‘ನಿನಗೂ ಇವರಿಗೂ ಏನು ಸಂಬಂಧ’ ಎಂದು ಎಂಎಲ್ಎ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಗೌತಮ್, ‘ಗಂಡ ಹೆಂಡತಿ ಸಂಬಂಧ, ಅಪ್ಪ ಮಗನ ಸಂಬಂಧ. ಅವರನ್ನು ಕಾಪಾಡೋ ಕಾವಲುಗಾರ’ ಎಂದು ಗೌತಮ್ ಹೇಳಿದ್ದಾನೆ.
ಇದನ್ನೂ ಓದಿ: ರಾಕೆಟ್ ರೀತಿ ಏರಿತು ‘ಅಮೃತಧಾರೆ’ ಟಿಆರ್ಪಿ; ಟಾಪ್ ಐದರಿಂದ ‘ನಾ ನಿನ್ನ ಬಿಡಲಾರೆ’ ಔಟ್
ಕಥೆಯಲ್ಲಿ ಗೌತಮ್ ಸಿಎಂ ಅಥವಾ ಇನ್ಯಾವುದೋ ಹಿರಿಯ ರಾಜಕಾರಣಿಗೆ ಕರೆ ಮಾಡಬಹುದು. ಕರೆ ಮಾಡಿ, ಎಂಎಲ್ಎ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಈ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇವರು ಬೇಗ ಒಂದಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.