‘ಇನ್ಮುಂದೆ ಈ ರೀತಿಯ ವಿಡಿಯೋ ಬರಲ್ಲ’ ಎಂದ ಮಮ್ಮಿ ಅಶೋಕ್; ಕೆಟ್ಮೇಲಾದ್ರೂ ಬುದ್ಧಿ ಬಂತಲ್ಲ
ಬಿಗ್ ಬಾಸ್ ಮನೆಗೆ ಅವಕಾಶ ಸಿಗದ ಕಾರಣ 'ಮಮ್ಮಿ ಅಶೋಕ್' ಬಾಂಬ್ ಬೆದರಿಕೆ ಹಾಕಿದ್ದ. ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಆತನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ತಪ್ಪನ್ನು ಅರಿತ ಅಶೋಕ್ ಇದೀಗ ಕ್ಷಮೆಯಾಚಿಸಿದ್ದು, ಇನ್ನು ಮುಂದೆ ಇಂತಹ ಕಂಟೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾನೆ.

ಬಿಗ್ ಬಾಸ್ಗೆ (Bigg Boss) ಅವಕಾಶ ಸಿಗಬೇಕು ಎಂದು ವಿವಿಧ ರೀತಿಯ ಕಂಟೆಂಟ್ ಮಾಡುವವರ ಸಂಖ್ಯೆ ಜೋರಾಗಿದೆ. ಹಾಗಂತ ಕ್ಯಾಮೆರಾ ಇದೆ, ಸೋಶಿಯಲ್ ಮೀಡಿಯಾ ಖಾತೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಿದರೆ ಪೊಲೀಸರಿದ ಟ್ರೀಟ್ಮೆಂಟ್ ಸಿಗೋದು ಪಕ್ಕಾ. ಈಗ ಮಮ್ಮಿ ಅಶೋಕ್ ಇದಕ್ಕೆ ಉತ್ತಮ ಉದಾಹರಣೆ. ಬಿಗ್ ಬಾಸ್ಗೆ ನನ್ನ ಕರೆದಿಲ್ಲ ಎಂದರೆ ಬಿಗ್ ಬಾಸ್ ಮನೆಗೆ ಬಾಂಬ್ ಇಡ್ತೀನಿ ಎಂದು ಈತ ಬೆದರಿಕೆ ಹಾಕಿದ್ದ. ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಬಳಿಕ ಆತ ಬದಲಾಗಿದ್ದಾನೆ.
ಮಮ್ಮಿ ಅಶೋಕ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಯುವಕ ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್ಗೆ ಹೋಗಬೇಕು ಎಂದು ಪ್ರಯತ್ನಿಸುತ್ತಲೇ ಇದ್ದಾನೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಕಳೆದ ಸೀಸನ್ನಲ್ಲಿ ಬಿಗ್ ಬಾಸ್ ಡೋರ್ ಬಳಿ ತೆರಳಿ ಬಾಗಿಲು ತಟ್ಟುವ ಕೆಲಸವನ್ನು ಆತ ಮಾಡಿದ್ದ. ಈ ಬಾರಿಯೂ ಅದೇ ರೀತಿ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ, ಪಾಠ ಕಲಿಸಿದ ಬೆಂಗಳೂರು ಪೊಲೀಸರು
‘ನನ್ನನ್ನು ಬಿಗ್ ಬಾಸ್ ಮನೆಗೆ ಕರೆಸಿಲ್ಲ ಎಂದರೆ ಬಿಗ್ ಬಾಸ್ ಮನೆಗೆ ಬಾಂಬ್ ಇಟ್ಟು ಉಡೀಸ್ ಮಾಡ್ತೀನಿ’ ಎಂಬ ರೀತಿಯಲ್ಲಿ ವಿಡಿಯೋ ಹಾಕಿದ್ದ ಅಶೋಕ್. ವಿಡಿಯೋ ಗಮನಿಸಿದ ಕುಂಬಳಗೋಡು ಸಾಮಾಜಿಕ ಜಾಲತಾಣದ ಪೊಲೀಸ್ ಸಿಬ್ಬಂದಿ, ಯುವಕನ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಗೆ ಕರೆದು ಬಂದು ಸೂಕ್ತ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಸ್ತುತ ಎನ್ಸಿಆರ್ ಮಾತ್ರವೇ ದಾಖಲಿಸಲಾಗಿದ್ದು, ಎಚ್ಚರಿಕೆಯನ್ನಷ್ಟೆ ನೀಡಿ ಕಳುಹಿಸಲಾಗಿದೆ.
ಅಶೋಕ್ ಹೇಳಿಕೆ
View this post on Instagram
ಇದನ್ನೂ ಓದಿ: ‘ಬಿಗ್ ಬಾಸ್’ ಮನೆ ಪ್ರವೇಶಿಸಿದ 19 ಸ್ಪರ್ಧಿಗಳ ಫೋಟೋ, ಹೆಸರು, ವಿವರ ಇಲ್ಲಿದೆ
ಇದರಿಂದ ಅಶೋಕ್ ಎಚ್ಚೆತ್ತಕೊಂಡಂತೆ ಕಾಣುತ್ತಿದೆ. ಆತ ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದಾನೆ. ‘ಒಂದು ವಿಡಿಯೋ ಮಾಡಿದ್ದೆ. ಅದನ್ನು ಹಾಸ್ಯಕ್ಕಾಗಿ ಮಾಡಿದ್ದು. ಆ ವಿಡಿಯೋ ಮಾಡಬಾರದಾಗಿತ್ತು. ಈ ರೀತಿಯ ವಿಡಿಯೋ ಇನ್ಮುಂದೆ ಬರಲ್ಲ’ ಎಂದು ಅಶೋಕ್ ಹೇಳಿದ್ದಾನೆ. ಈ ವಿಡಿಯೋದ ಕಮೆಂಟ್ ಬಾಕ್ಸ್ನಲ್ಲಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:32 am, Mon, 29 September 25








