AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Malu Nipanala Profile: ಬಿಗ್​​ಬಾಸ್ ಮನೆಗೆ ‘ಡ್ರೈವರ್’, ಯಾರು ಈ ಮಾಳು ನಿಪನಾಳ

Bigg Boss Kannada: ಬಿಗ್​​ಬಾಸ್ ಮನೆಗೆ ಪ್ರತಿ ಬಾರಿಯೂ ಒಬ್ಬರಾದರೂ ಗಾಯಕರು ಸದಸ್ಯರಾಗಿ ಹೋಗುವುದು ಖಾತ್ರಿ. ಕಳೆದ ಬಾರಿ ಬಂದಿದ್ದ ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದು ಶೋ ಅನ್ನು ಗೆದ್ದು ಚಾಂಪಿಯನ್ ಸಹ ಆಗಿದ್ದರು. ಅದರಂತೆ ಈ ಬಾರಿಯೂ ಸಹ ಉತ್ತರ ಕರ್ನಾಟಕದ ಗಾಯಕರೊಬ್ಬರನ್ನು ಬಿಗ್​​ಬಾಸ್ ಮನೆಗೆ ಕರೆತರಲಾಗಿದೆ. ಯಾರು ಈ ಮಾಳು ನಿಪನಾಳ?

Malu Nipanala Profile: ಬಿಗ್​​ಬಾಸ್ ಮನೆಗೆ ‘ಡ್ರೈವರ್’, ಯಾರು ಈ ಮಾಳು ನಿಪನಾಳ
Malu Nipanala
ಮಂಜುನಾಥ ಸಿ.
|

Updated on:Sep 29, 2025 | 1:07 AM

Share

ಬಿಗ್​​ಬಾಸ್ ಕನ್ನಡ ಮನೆಗೆ ಪ್ರತಿ ಬಾರಿಯೂ ಒಬ್ಬರಲ್ಲ ಒಬ್ಬರು ಗಾಯಕರು ಬರುವುದು ಖಾತ್ರಿ. ಅಸಲಿಗೆ ಬಿಗ್​​ಬಾಸ್ ಅತಿ ಹೆಚ್ಚು ಟ್ರೆಂಡ್ ಆಗುವುದು ಗಾಯಕರೇ. ಹನುಮಂತು, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದು ಕಪ್ ಅನ್ನೇ ಗೆದ್ದು ಹೋಗಿದ್ದು ಗೊತ್ತೇ ಇದೆ. ಉತ್ತರ ಕರ್ನಾಟಕದ ಈ ಅಪ್ಪಟ ಪ್ರತಿಭೆ ರಾಜ್ಯದ ಜನರ ಮನಸ್ಸು ಗೆದ್ದಿದ್ದ. ಇದೀಗ ಇಂಥಹದೇ ಮತ್ತೊಂದು ಪ್ರತಿಭೆ ಬಿಗ್​​ಬಾಸ್ ಮನಗೆ ಎಂಟ್ರಿ ಕೊಟ್ಟಿದೆ.

‘ನಾ ಡ್ರೈವರ, ನನ ಲವ್ವರ’ ಹಾಡು ಇಡೀ ಕರ್ನಾಟಕದಾದ್ಯಂತ ಹಿಟ್ ಆಗಿರುವುದು ಗೊತ್ತೆ ಇದೇ ಆ ಹಾಡು ಹಾಡಿ, ಅದರಲ್ಲಿ ನಟನೆಯನ್ನೂ ಮಾಡಿರುವ ಬೆಳಗಾವಿಯ ಮಾಲು ನಿಪನಾಳ ಅವರು ಇದೀಗ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ‘ನಾ ಡ್ರೈವರ’ ಹಾಡು ಅವರ ಜೀವನವನ್ನೇ ಬದಲಾಯಿಸಿಬಿಟ್ಟಿದೆ. ಯೂಟ್ಯೂಬ್ ನಲ್ಲಿ 200 ಮಿಲಿಯನ್​​ಗೆ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದು, ಭಾರಿ ಜನಪ್ರಿಯತೆ ತಂದುಕೊಟ್ಟಿದೆ. ತೀವ್ರ ಬಡತನದಲ್ಲಿದ್ದ ಮಾಲು ನಿಪನಾಳ ಅವರ ಜೀವನ ಉತ್ತಮಗೊಳ್ಳಲು ಆ ಹಾಡು ಸಹಾಯ ಮಾಡಿದೆ.

ಬೆಳಗಾವಿಯ ನಿಪನಾಳ ಅವರು ಜಾತ್ರೆಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರಂತೆ. ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುತ್ತಿದ್ದರಂತೆ. ಬಳಿಕ ‘ನಾ ಡ್ರೈವರ’ ಹಾಡನ್ನು ರಚಿಸಿ ರೆಕಾರ್ಡ್ ಮಾಡಿ ಯೂಟ್ಯೂಬ್​​ನಲ್ಲಿ ಬಿಟ್ಟಿದ್ದಾರೆ ಅದು ದೊಡ್ಡ ಹಿಟ್ ಆಗಿದೆ. ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಸಿನಿಮಾನಲ್ಲಿ ‘ಹಿತಲಕ ಕರಿಬ್ಯಾಡ’ ಹಾಡನ್ನೂ ಸಹ ನಿಪನಾಳ ಅವರೇ ಹಾಡಿದ್ದಾರೆ. ಆ ಹಾಡು ಸಹ ಯೂಟ್ಯೂಬ್​​ನಲ್ಲಿ ಭಾರಿ ಯಶಸ್ಸು ಗಳಿಸಿದೆ.

ಇದನ್ನೂ ಓದಿ:Ashwini Profile: ಜೀವನದಲ್ಲಿ ಹೋರಾಡಿ ಗೆದ್ದ ಅಶ್ವಿನಿ, ಈಗ ಬಿಗ್​​ಬಾಸ್ ಮನೆಯಲ್ಲಿ

ಪ್ರೀತಿಸಿ ಮದುವೆ ಆಗಿರುವ ನಿಪನಾಳ ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ನಿಪನಾಳ ಅವರಿಗೆ ಕೋಪ ತುಸು ಹೆಚ್ಚಂತೆ. ಈ ಹಿಂದೆ ನಿಪನಾಳ ಅವರು ಅಣ್ಣ-ತಂಗಿಯ ಮೇಲೆ ಹಲ್ಲೆ ಮಾಡಿದ್ದು ಸುದ್ದಿ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇದೀಗ ಬಿಗ್​​ಬಾಸ್​​ಗೆ ಬಂದಿರುವ ನಿಪನಾಳ ಅವರು ಚೆನ್ನಾಗಿ ಆಡುವ ಭರವಸೆ ಹೊಂದಿದ್ದಾರಂತೆ. ಅಂದಹಾಗೆ ನಿಪನಾಳ ಅವರು ಸುದೀಪ್ ಅವರ ದೊಡ್ಡ ಅಭಿಮಾನಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:15 pm, Sun, 28 September 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ