AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashwini Profile: ಜೀವನದಲ್ಲಿ ಹೋರಾಡಿ ಗೆದ್ದ ಅಶ್ವಿನಿ, ಈಗ ಬಿಗ್​​ಬಾಸ್ ಮನೆಯಲ್ಲಿ

Bigg Boss Kannada season 12: ಕನ್ನಡದ ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿ’ಯ ನಟಿ ಅಶ್ವಿನಿ ಅವರು ಇದೀಗ ಬಿಗ್​​ಬಾಸ್​​ಗೆ ಬಂದಿದ್ದಾರೆ. ಅಶ್ವಿನಿ ಅವರ ಜೀವನ ಹೋರಾಟದಿಂದಲೇ ತುಂಬಿತ್ತು. ಬಹಳ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಬಂದು ಬೆಂಗಳೂರಿಗೆ ಬಂದವರು ಅಶ್ವಿನಿ. ಜೀವನದೊಟ್ಟಿಗೆ ಸಾಕಷ್ಟು ಹೋರಾಡಿ ಗೆಲುವು ಪಡೆದಿರುವ ಅಶ್ವಿನಿ, ಬಿಗ್​​ಬಾಸ್ ಮನೆಯಲ್ಲಿ ಗೆಲ್ಲುತ್ತಾರಾ?

Ashwini Profile: ಜೀವನದಲ್ಲಿ ಹೋರಾಡಿ ಗೆದ್ದ ಅಶ್ವಿನಿ, ಈಗ ಬಿಗ್​​ಬಾಸ್ ಮನೆಯಲ್ಲಿ
Ashwini
ಮಂಜುನಾಥ ಸಿ.
|

Updated on:Sep 29, 2025 | 1:09 AM

Share

ಬಿಗ್​​ಬಾಸ್ ಮನೆಯಲ್ಲಿ ಬೇರೆ ಬೇರೆ ರೀತಿಯ ಹಿನ್ನೆಲೆ ಉಳ್ಳವರು ಒಟ್ಟಿಗೆ ಬದುಕುತ್ತಾರೆ. ಬಹಳ ಸುಖವಾಗಿ ಬಂದವರು, ಪ್ರತಿ ಕ್ಷಣವೂ ಹೋರಾಡಿ ಸರ್ವೈವ್ ಆದವರು, ಭವಿಷ್ಯದ ಬಗ್ಗೆ ಭಯ ಇರುವವರು, ಭೂತಕಾಲದಲ್ಲಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಬಂದವರು ಹೀಗೆ ಹಲವು ರೀತಿಯ ವ್ಯಕ್ತಿತ್ವದವರು ಬಂದಿದ್ದಾರೆ. ಬಿಗ್​​ಬಾಸ್ ಮನೆಗೆ ಈಗ ಪಕ್ಕಾ ಹೋರಾಟಗಾರ್ತಿ ಬಂದಿದ್ದಾರೆ. ಇವರು ಜೀವನದ ಜೊತೆಗೆಹೋರಾಡಿ ಗೆದ್ದವರು.

ಕನ್ನಡದ ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿ’ಯ ನಟಿ ಅಶ್ವಿನಿ ಅವರು ಇದೀಗ ಬಿಗ್​​ಬಾಸ್​​ಗೆ ಬಂದಿದ್ದಾರೆ. ಅಶ್ವಿನಿ ಅವರ ಜೀವನ ಹೋರಾಟದಿಂದಲೇ ತುಂಬಿತ್ತು. ಬಹಳ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಬಂದು ಬೆಂಗಳೂರಿಗೆ ಬಂದವರು ಅಶ್ವಿನಿ. ಅವರೇ ಹೇಳಿಕೊಂಡಿರುವಂತೆ, ಎಲ್ಲರಿಗೂ ಪೋಷಕರೆಂದರೆ ಪ್ರೀತಿ, ಭಯವಾದರೆ ಪೋಷಕರ ಬಳಿ ಹೋಗುತ್ತಾರೆ. ಆದರೆ ಪೋಷಕರಿಂದಲೇ ಭಯವಾದರೆ? ಹಾಗಾಗಿ ನಾನು ಪೋಷಕರನ್ನು ಬಿಟ್ಟು ಬಂದಿದ್ದೆ’ ಎಂದಿದ್ದಾರೆ.

ಸಣ್ಣ ವಯಸ್ಸಿಗೆ ಬೆಂಗಳೂರಿಗೆ ಬಂದ ಅಶ್ವಿನಿ, ನಿರೂಪಕಿ ಆಗಿ ಸೇರಿಕೊಂಡರಂತೆ. ಆದರೆ ಅದರಲ್ಲಿ ಅವರಿಗೆ ನಿರಾಕರಣೆ ಎದುರಾಯ್ತಂತೆ. ಮತ್ತೆ ಹೋರಾಟಕ್ಕೆ ನಿಂತ ಅಶ್ವಿನಿ, ನಟಿಯಾಗಿ ಗುರುತಿಸಿಕೊಳ್ಳಲು ಸತತ ಪ್ರಯತ್ನ ಮಾಡಿದ್ದಾರೆ. ಹಲವು ಸಣ್ಣ-ಪುಟ್ಟ ಧಾರಾವಾಹಿಗಳಲ್ಲಿ ನಟಿಸಿ ಕೊನೆಗೆ ‘ಮುದ್ದುಲಕ್ಷ್ಮಿ’ ಯಿಂದ ರಾಜ್ಯದ ಜನರಿಗೆ ಹತ್ತಿರವಾಗಿದ್ದಾರೆ. ಮೈಸೂರು ಮೂಲದ ಅಶ್ವಿನಿ, ಈಗ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

‘ಮುದ್ದುಲಕ್ಷ್ಮಿ’ಯಲ್ಲಿ ಬಲು ತಾಳ್ಮೆಯ, ಸಹಿಷ್ಣುವಾದ, ಎಲ್ಲರಿಂದಲೂ ಕಡೆಗಣೆಗೆ ಒಳಗಾಗುವ ಯುವತಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಆ ಪಾತ್ರಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನ ವ್ಯಕ್ತಿತ್ವವಂತೆ ಅಶ್ವಿನಿ ಅವರದ್ದು.

ಬಿಗ್​​ಬಾಸ್ ವೇದಿಕೆ ಮೇಲೆ ಸಹ ಸುದೀಪ್ ಅವರು, ಅಶ್ವಿನಿ ಅವರನ್ನು ಪೋಷಕರ ಬಗ್ಗೆ ಕೇಳಿದರು. ನಿಮ್ಮ ಪೋಷಕರು ಈ ವರೆಗೆ ನಿಮ್ಮನ್ನು ಸಂಪರ್ಕಿಸಿ ವಾಪಸ್ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರಾ? ಎಂದು ಕೇಳಿದರು. ಹೌದು, ಕಳೆದ ಆರು ತಿಂಗಳ ಹಿಂದೆ ಕರೆ ಮಾಡಿದ್ದರು, ಆದರೆ ನಾನು ಹೋಗಲಿಲ್ಲ. ಅವರು ನನ್ನ ಕುಟುಂಬದವರಲ್ಲ. ನನ್ನ ಕುಟುಂಬದವರು ಎಂದಿಗೂ ನನ್ನನ್ನು ಪ್ರೀತಿಸಲಿಲ್ಲ, ನನ್ನನ್ನವರಲ್ಲದೇ ಇರುವವರೇ ನನ್ನ ಬೆಳವಣಿಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Sun, 28 September 25

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು