AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush Profile: ಬಿಗ್​​ಬಾಸ್ ಮನೆಗೆ ಅಮ್ಮನ ಮಗ ಧನುಶ್, ಯಾರೀತ?

Bigg Boss Kannada season 12: ಬಿಗ್​​ಬಾಸ್ ಮನೆಗೆ ಬಗೆ ಬಗೆಯ ವ್ಯಕ್ತಿತ್ವವುಳ್ಳ, ಹಿನ್ನೆಲೆಯುಳ್ಳ ಸ್ಪರ್ಧಿಗಳು ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕೆಲ ಧಾರಾವಾಹಿ ನಟರು, ಕಾಮಿಡಿ ಶೋ ಸ್ಪರ್ಧಿಗಳು ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ನಾಯಕಿ ಬಿಗ್​​ಬಾಸ್ ಮನೆಗೆ ಬಂದಿದ್ದರು, ಈ ಬಾರಿ ‘ಗೀತಾ’ ಧಾರಾವಾಹಿಯ ನಾಯಕ ಧನುಶ್ ಅವರು ಈ ಬಾರಿ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

Dhanush Profile: ಬಿಗ್​​ಬಾಸ್ ಮನೆಗೆ ಅಮ್ಮನ ಮಗ ಧನುಶ್, ಯಾರೀತ?
Dhanush
ಮಂಜುನಾಥ ಸಿ.
|

Updated on:Sep 28, 2025 | 8:15 PM

Share

ಬಿಗ್​​ಬಾಸ್ ಮನೆಗೆ ಬಗೆ ಬಗೆಯ ವ್ಯಕ್ತಿತ್ವವುಳ್ಳ, ಹಿನ್ನೆಲೆಯುಳ್ಳ ಸ್ಪರ್ಧಿಗಳು ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕೆಲ ಧಾರಾವಾಹಿ ನಟರು, ಕಾಮಿಡಿ ಶೋ ಸ್ಪರ್ಧಿಗಳು ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ನಾಯಕಿ ಬಿಗ್​​ಬಾಸ್ ಮನೆಗೆ ಬಂದಿದ್ದರು, ಈ ಬಾರಿ ‘ಗೀತಾ’ ಧಾರಾವಾಹಿಯ ನಾಯಕ ಧನುಶ್ ಅವರು ಈ ಬಾರಿ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

ಇಷ್ಟು ವರ್ಷ ‘ಗೀತಾ’ ಧಾರಾವಾಹಿಯ ವಿಜಿ ಆಗಿ ಜನರಿಗೆ ಪರಿಚಯ ಆಗಿರುವ, ಸಾಕಷ್ಟು ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಆದರೆ ಅವರು ಧನುಶ್ ಆಗಿ ಕರ್ನಾಟಕದ ಜನರಿಂದ ಆಶೀರ್ವಾದ ಪಡೆಯಬೇಕು ಎಂಬ ಕಾರಣಕ್ಕೆ ಇದೀಗ ಅವರು ಬಿಗ್​​ಬಾಸ್ ಮನೆಗೆ ಬರುತ್ತಿದ್ದಾರಂತೆ. ನಟನಾಗಿ ಪ್ರೂವ್ ಮಾಡಿಕೊಂಡಿದ್ದೇನೆ, ಆದರೆ ಧನುಶ್ ಆಗಿಯೂ ಜನರಿಂದ ಆಶೀರ್ವಾದ ಪಡೆಯಬೇಕು ಎಂದುಕೊಂಡು ಈಗ ಬಿಗ್​​ಬಾಸ್ ಮನೆಗೆ ಬಂದಿದ್ದೇನೆ ಎಂದಿದ್ದಾರೆ ಧನುಶ್.

ಧನುಶ್ ಅವರು ತುಂಬು ಕುಟುಂಬದಲ್ಲಿ ಬದುಕುತ್ತಿರುವ ವ್ಯಕ್ತಿ. ಅಪ್ಪನೊಂದಿಗೆ ಹಾಗೂ ಅಮ್ಮನೊಂದಿಗೆ ಧನುಶ್ ಅವರಿಗೆ ಆತ್ಮೀಯತೆ ಇದೆಯಂತೆ. ‘ನಾನು ಅಮ್ಮನ ಮಗ’ ಎನ್ನುವ ಧನುಶ್, ಅಮ್ಮನ ಮಾತನ್ನು ಎಂದಿಗೂ ಮೀರುವುದಿಲ್ಲವಂತೆ. ಅಮ್ಮನೊಂದಿಗೆ ಬಹಳ ಆತ್ಮೀಯತೆ ಧನುಶ್ ಅವರಿಗೆ ಇದೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ ಸೀಸನ್ 12: ಈ ಬಾರಿಯ ಮನೆ ಹೀಗಿದೆ ನೋಡಿ

ಧನುಶ್ ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿವೆಯಷ್ಟೆ. ಆಷಾಡಮಾಸದಲ್ಲಿ ಬಿಟ್ಟರೆ ಗಂಡನನ್ನು ಬಿಟ್ಟು ಇದ್ದಿದ್ದೇ ಇಲ್ಲವಂತೆ. ಆದರೆ ಈಗ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ಪತಿಯನ್ನು ಬಿಟ್ಟು ಇರಲಿದ್ದಾರೆ. ಧನುಶ್ ಸಹ ಪತ್ನಿಯನ್ನು ಬಹಳ ಪ್ರೀತಿಸುತ್ತಾರಂತೆ. ಆಕೆ ಶಾಂತವಾಗಿದ್ದು, ನನ್ನನ್ನು ಶಾಂತವಾಗಿಟ್ಟಿರುತ್ತಾಳೆ, ಅವಳು ಖುಷಿಯಾಗಿದ್ದು, ನನ್ನನ್ನು ಖುಷಿಯಾಗಿ ಇರಿಸಿದ್ದಾಳೆ ಎಂದಿದ್ದಾರೆ ಧನುಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Sun, 28 September 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ