ಆಸ್ಪತ್ರೆಯಲ್ಲಿ 55 ದಿನ ಕೊವಿಡ್​ ವಿರುದ್ಧ​ ಹೋರಾಟ ನಡೆಸಿ ಗೆದ್ದು ಬಂದ ಕಿರುತೆರೆ ನಟ

ಅನಿರುದ್ಧ್​ ದವೆ ಅವರಿಗೆ ಎರಡು ತಿಂಗಳ ಹಿಂದೆ ಕೊವಿಡ್​ ಪಾಸಿಟಿವ್​ ಆಗಿತ್ತು. ಹೀಗಾಗಿ, ಅವರು ಮನೆಯಲ್ಲೇ ಕ್ವಾರಂಟೈನ್​ ಆದರು. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಐಸಿಯುಗೆ ಶಿಫ್ಟ್​ ಮಾಡಲಾಯಿತು.

ಆಸ್ಪತ್ರೆಯಲ್ಲಿ 55 ದಿನ ಕೊವಿಡ್​ ವಿರುದ್ಧ​ ಹೋರಾಟ ನಡೆಸಿ ಗೆದ್ದು ಬಂದ ಕಿರುತೆರೆ ನಟ
55 ದಿನ ಆಸ್ಪತ್ರೆಯಲ್ಲಿ ಕೊವಿಡ್​ ವಿರುದ್ಧ​ ಹೋರಾಟ ನಡೆಸಿ ಗೆದ್ದು ಬಂದ ಕಿರುತೆರೆ ನಟ
Edited By:

Updated on: Jun 25, 2021 | 6:08 PM

ಕೊವಿಡ್ ಎರಡನೇ ಅಲೆ​ ಸಾಕಷ್ಟು ತೊಂದರೆಗಳನ್ನು ಉಂಟು ಮಾಡಿದೆ. ಚಿತ್ರರಂಗದ ಅನೇಕರು ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಹಿಂದಿಯ ಖ್ಯಾತ ಕಿರುತೆರೆ ನಟ ಅನಿರುದ್ಧ್​ ದವೆ ಕೂಡ 55 ದಿನ ಕೊವಿಡ್​ ವಿರುದ್ಧ ಹೋರಾಡಿದ್ದಾರೆ. ಕೊನೆಗೂ ಅವರು ಕೊವಿಡ್​ನಿಂದ ಚೇತಸಿಕೊಂಡು ಆಸ್ಪತ್ರೆಯಿಂದ ಹೊರ ಬಂದಿದ್ದು ಸಂತಸ ಹೊರ ಹಾಕಿದ್ದಾರೆ.

ಅನಿರುದ್ಧ್​ ದವೆ ಅವರಿಗೆ ಎರಡು ತಿಂಗಳ ಹಿಂದೆ ಕೊವಿಡ್​ ಪಾಸಿಟಿವ್​ ಆಗಿತ್ತು. ಹೀಗಾಗಿ, ಅವರು ಮನೆಯಲ್ಲೇ ಕ್ವಾರಂಟೈನ್​ ಆದರು. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಐಸಿಯುಗೆ ಶಿಫ್ಟ್​ ಮಾಡಲಾಯಿತು. ಸುಮಾರು 36 ದಿನಗಳ ಕಾಲ ಅವರು ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡ ಕಾರಣ, ಐಸಿಯುನಿಂದ ಸಾಮಾನ್ಯ ವಾರ್ಡ್​ಗೆ ಶಿಫ್ಟ್​ ಮಾಡಲಾಗಿತ್ತು.

55 ದಿನಗಳ ನಂತರ ಅವರ ಆರೋಗ್ಯ ಸಂಪೂರ್ಣ ಚೇತರಿಕೆ ಕಂಡಿದೆ. ಈ ಬಗ್ಗೆ ಬರೆದುಕೊಂಡಿರುವ ಅವರು, ‘55 ದಿನಗಳ ನಂತರ ನಾನು ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಆಮ್ಲಜನಕದ ಸಿಲಿಂಡರ್​ ಇಲ್ಲ. ಈಗ ನನ್ನದೇ ಆದ ಉಸಿರಾಟ. ನಾನು ಜೀವಕ್ಕೆ ಮರಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.  ಅವರು ಚೇತರಿಕೆ ಕಂಡಿರುವ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಆಸ್ಪತ್ರೆಯಲ್ಲಿರುವಾಗಲೇ ಪತ್ನಿ ಶುಭಿ ಅಹೂಜಾ ಅವರ ಜನ್ಮದಿನದಂದು ಅನಿರುದ್ಧ್ ಪೋಸ್ಟ್​ ಒಂದನ್ನು ಮಾಡಿದ್ದರು. ಈ ಪೋಸ್ಟ್​ನಲ್ಲಿ ಅವರು ಶುಭಿಗೆ ಬರ್ತ್​ಡೇ ವಿಶ್ ಮಾಡಿದ್ದರು. ಅಲ್ಲದೆ, ಈ ಸಂದರ್ಭದಲ್ಲಿ ಅವರು ತುಂಬಾನೇ ಸ್ಟ್ರಾಂಗ್​ ಆಗಿ ನಿಂತಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ: Corona Vaccine: ಎರಡು ಡೋಸ್​ ಕೊರೊನಾ ಲಸಿಕೆ ಪಡೆದವರಿಗೆ ಶುಭಸುದ್ದಿ: ಐಸಿಎಂಆರ್​ ಅಧ್ಯಯನದ ಪ್ರಾಥಮಿಕ ವರದಿ

ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಪ್ರಕರಣ; ಬಾಲಿವುಡ್ ನಟಿ ಅರೆಸ್ಟ್​

Published On - 6:07 pm, Fri, 25 June 21