AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್’ ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್​ಗೆ ದುಬಾರಿ ಪೋರ್ಷಾ ಕಾರು; ಇದರ ಬೆಲೆ ಎಷ್ಟು?

Anirudh Ravichander: ‘ಜೈಲರ್’ ಚಿತ್ರದ ಬಿಜಿಎಂ ಗಮನ ಸೆಳೆದಿದೆ. ಈ ಚಿತ್ರದ ‘ಕಾವಾಲಾ..’ ಹಾಡು ಯೂಟ್ಯೂಬ್​ನಲ್ಲಿ ಬಹುಕೋಟಿ ವೀಕ್ಷಣೆ ಕಂಡಿದೆ. ಇದಕ್ಕೆಲ್ಲ ಕಾರಣ ಆಗಿರೋದು ಅನಿರುದ್ಧ್ ರವಿಚಂದರ್ ಅವರ ಮಾಂತ್ರಿಕ ಮ್ಯೂಸಿಕ್. ಅವರಿಗೆ ಈಗ ದುಬಾರಿ ಉಡುಗೊರೆ ಸಿಕ್ಕಿದೆ.

‘ಜೈಲರ್’ ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್​ಗೆ ದುಬಾರಿ ಪೋರ್ಷಾ ಕಾರು; ಇದರ ಬೆಲೆ ಎಷ್ಟು?
ಅನಿರುದ್ಧ ರವಿಚಂದರ್-ಕಲಾನಿಧಿ ಮಾರನ್
ರಾಜೇಶ್ ದುಗ್ಗುಮನೆ
|

Updated on:Sep 06, 2023 | 10:01 AM

Share

‘ಜೈಲರ್’ ಸಿನಿಮಾ (Jailer Movie) ಸೂಪರ್ ಹಿಟ್ ಆಗಿದೆ. 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸಿನಿಮಾ ಬೀಗಿದೆ. ಈ ಚಿತ್ರದ ಗೆಲುವಿಗೆ ಕಾರಣರಾದ ಎಲ್ಲರಿಗೂ ಸನ್ ಪಿಕ್ಚರ್ಸ್​​ ಮಾಲೀಕ ಕಲಾನಿಧಿ ಮಾರನ್ (Kalanithi Maran) ಅವರು ಉಡುಗೊರೆ ನೀಡುತ್ತಿದ್ದಾರೆ. ಈ ಮೂಲಕ ತಮಗೆ ಲಾಭ ತಂದುಕೊಟ್ಟ ಎಲ್ಲರಿಗೆ ಅವರು ಈ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ‘ಜೈಲರ್’ ಸಿನಿಮಾ ಹಿಟ್ ಆಗಲು ಮ್ಯೂಸಿಕ್ ಕೂಡ ಕಾರಣ ಆಗಿತ್ತು. ಈ ಕಾರಣಕ್ಕೆ ಚಿತ್ರದ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರಿಗೆ ಕಲಾನಿಧಿ ಮಾರನ್ ದುಬಾರಿ ಉಡುಗೊರೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಜೈಲರ್’ ಚಿತ್ರದ ಬಿಜಿಎಂ ಗಮನ ಸೆಳೆದಿದೆ. ಈ ಚಿತ್ರದ ‘ಕಾವಾಲಾ..’ ಹಾಡು ಯೂಟ್ಯೂಬ್​ನಲ್ಲಿ ಬಹುಕೋಟಿ ವೀಕ್ಷಣೆ ಕಂಡಿದೆ. ಇದಕ್ಕೆಲ್ಲ ಕಾರಣ ಆಗಿರೋದು ಅನಿರುದ್ಧ್ ರವಿಚಂದರ್ ಅವರ ಮಾಂತ್ರಿಕ ಮ್ಯೂಸಿಕ್. ಈ ಕಾರಣದಿಂದಲೇ ಕಲಾನಿಧಿ ಮಾರನ್ ಅವರು ಪೋರ್ಷಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಶೇಷ ಎಂದರೆ ಅನಿರುದ್ಧ್​ ಎದುರು ಮೂರು ಕಾರಗಳನ್ನು ಆಯ್ಕೆಯಾಗಿ ನೀಡಲಾಗಿತ್ತು. ಬಿಎಂಡಬ್ಲ್ಯೂ ಎಕ್ಸ್​5, ಬಿಎಂಡಬ್ಲ್ಯೂ ಐಎಕ್ಸ್​ ಹಾಗೂ ಪೋರ್ಷಾ ಮಕಾನ್ ಕಾರನ್ನು ಇಡಲಾಗಿತ್ತು. ಎಲ್ಲಾ ಕಾರುಗಳನ್ನು ಒಮ್ಮೆ ಏರಿ ಬಂದರು ಅನಿರುದ್ಧ್. ಆ ಬಳಿಕ ಪೋರ್ಷಾ ಎಸ್​ಯುವಿನ ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೋರ್ಷಾ ಮಕಾನ್ ಹೈ ಎಂಡ್​ಗೆ 1.92 ಕೋಟಿ ರೂಪಾಯಿ ಇದೆ. ಈಗ ಅನಿರುದ್ಧ್​ ಅವರಿಗೆ ನೀಡಿರೋದು ಹೈಎಂಡ್​ಕಾರು  ಎನ್ನಲಾಗುತ್ತಿದೆ. ದೊಡ್ಡ ಮೊತ್ತದ ಸಂಭಾವನೆ ಜೊತೆಗೆ ಅನಿರುದ್ಧ್​ ಅವರಿಗೆ ದುಬಾರಿ ಕಾರು ಕೂಡ ಸಿಕ್ಕಿದೆ. ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ: ರಜನೀಕಾಂತ್ ಬಳಿಕ ಜೈಲರ್ ನಿರ್ದೇಶಕನಿಗೂ ಕಾರು, ಹಣ ಉಡುಗೊರೆ ಕೊಟ್ಟ ನಿರ್ಮಾಪಕ

ಈ ಮೊದಲು ‘ಜೈಲರ್’ ಸಿನಿಮಾದ ಹೀರೋ ರಜನಿಕಾಂತ್​ಗೆ ದೊಡ್ಡ ಮೊತ್ತದ ಚೆಕ್ ನೀಡಿದ್ದರು ಕಲಾನಿಧಿ ಮಾರನ್. ಕಲೆಕ್ಷನ್ ಮೊತ್ತದ ಒಂದಷ್ಟು ಭಾಗವನ್ನು ರಜನಿಗೆ ನೀಡಲಾಗಿತ್ತು. ಇದರ ಜೊತೆಗೆ ಬಿಎಂಡಬ್ಲ್ಯು ಕಾರನ್ನು ಸಹ ಉಡುಗೊರೆ ಆಗಿ ನೀಡಲಾಗಿತ್ತು. ಅದೇ ರೀತಿ ನಿರ್ದೇಶಕ ನೆಲ್ಸನ್ ದಿಲೀಪ್​ ಕುಮಾರ್​ಗೂ ಕಾರು ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Wed, 6 September 23

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು