ಅಣ್ಣಾಮಲೈ (Annamalai) ಅವರು ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಅವರು ರಾಜಕೀಯಕ್ಕೆ ಕಾಲಿಟ್ಟರು. ಬಿಜೆಪಿ ಸೇರ್ಪಡೆ ಆಗಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಕೊಯಿಮತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದಾರೆ. ಈಗ ಅವರ ಮೇಲೆ ಬಯೋಪಿಕ್ ಮಾಡಲು ತಮಿಳು ಚಿತ್ರರಂಗದಲ್ಲಿ ಸಿದ್ಧತೆ ನಡೆದಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿದೆ.
ಕರೂರಿನ ಮೂಲದ ಅಣ್ಣಾಮಲೈ ಅವರು ಕೃಷಿ ಹಿನ್ನೆಲೆಯಿಂದ ಬಂದವರು. ಅವರು ಐಪಿಎಸ್ ಅಧಿಕಾರಿಯಾಗಿ ಆಯ್ಕೆ ಆದರು. ಅವರು ಕರ್ನಾಟಕದಲ್ಲಿ ಸೇವೆ ಸಲ್ಲಿಸಿ, ಸಿಂಘಂ ಎಂದೇ ಫೇಮಸ್ ಆದರು. ಆ ಬಳಿಕ ಅವರು ತಮ್ಮ ಪೋಸ್ಟ್ನಿಂದ ನಿವೃತ್ತಿ ಪಡೆದರು. 2020ರಲ್ಲಿ ಅವರು ಬಿಜೆಪಿ ಸೇರಿದರು. ಅವರು ತಮಿಳುನಾಡು ಬಿಜೆಪಿಯ ಅಧ್ಯಕ್ಷರಾದರು. ತಮಿಳುನಾಡು ಅಧ್ಯಕ್ಷ ಸ್ಥಾನ ಪಡೆದ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆ ಅವರಿಗೆ ಸಿಕ್ಕಿದೆ.
ಈಗ ಅಣ್ಣಾಮಲೈ ಕುರಿತು ಬಯೋಪಿಕ್ ಸಿದ್ಧವಾಗಲಿದೆ ಎಂದು ವರದಿ ಆಗಿದೆ. ವಿಶೇಷ ಎಂದರೆ ತಮಿಳು ನಟ ವಿಶಾಲ್ ಅವರು ಈ ಪಾತ್ರ ಮಾಡಲಿದ್ದಾರಂತೆ. ಸದ್ಯ ಎಲ್ಲವೂ ಆರಂಭ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆಯಂತೆ. ಅಣ್ಣಾಮಲೈ ಪಾತ್ರಕ್ಕೆ ವಿಶಾಲ್ ಸಾಕಷ್ಟು ಹೊಂದಿಕೆ ಆಗುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತೀಚೆಗೆ ವಿಶಾಲ್ ಕೂಡ ರಾಜಕೀಯಕ್ಕೆ ಸೇರುವ ಸೂಚನೆ ನೀಡಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಸೇರ್ಪಡೆ ಆಗುತ್ತಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅವರು ರಾಜಕೀಯಕ್ಕೆ ಸೇರುವುದಕ್ಕೂ ಮೊದಲು ಅಣ್ಣಾಮಲೈ ಬಯೋಪಿಕ್ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ
ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರ ಬಯೋಪಿಕ್ ಮಾಡುವ ವಿಚಾರ ಚರ್ಚೆಗೆ ಬರುತ್ತದೆ. ಚುನಾವಣೆ ಮುಗಿದ ಬಳಿಕ ಆ ಬಗ್ಗೆ ಸೈಲೆಂಟ್ ಆಗುತ್ತಾರೆ. ಅಣ್ಣಾಮಲೈ ವಿಚಾರದಲ್ಲೂ ಇದೇ ರೀತಿ ಆಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.