AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ

ತಮಿಳುನಾಡಿನಲ್ಲಿ ಏಪ್ರಿಲ್​ 19ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. 2019ರ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಕೂಟ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ಫಲಿತಾಂಶ ಪುನರಾವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಜತೆಗೆ ರಾಜಕೀಯ ಸಮೀಕರಣಕ್ಕೆ ಹೊಸ ಭಾಷ್ಯ ಬರೆಯಲು ಸಿದ್ಧತೆ ನಡೆಸಿದ್ದಾರೆ.

ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯಲು ಮುಂದಾಗಿರುವ ತಮಿಳುನಾಡಿನಲ್ಲಿ ನಾಳೆ ಮತದಾನ
ನರೇಂದ್ರ ಮೋದಿ, ಅಣ್ಣಾಮಲೈImage Credit source: ABP Live
Follow us
ನಯನಾ ರಾಜೀವ್
|

Updated on: Apr 18, 2024 | 2:47 PM

ಲೋಕಸಭಾ ಚುನಾವಣೆ(Lok Sabha Election)ಗೆ ತಮಿಳುನಾಡು(Tamil Nadu) ಸಜ್ಜಾಗಿದೆ. ಏಪ್ರಿಲ್​ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎಐಎಡಿಎಂಕೆ, ಡಿಎಂಕೆ ಪ್ರಾಬಲ್ಯ ಇರುವ ಈ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ( K Annamalai) ಕಾರ್ಯವೈಖರಿಯಿಂದಾಗಿ ಭರವಸೆ ಮೂಡಿದೆ. ರಾಜ್ಯದ 39 ಲೋಕಸಭಾ ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, 950 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 6.23 ಕೋಟಿ ಮತದಾರರು ನಿರ್ಧರಿಸಲಿದ್ದು, ಸುಮಾರು 68,000 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಬಾರಿ ತಮಿಳುನಾಡಿಗೆ ಭೇಟಿ ನೀಡಿ, ಪ್ರಚಾರವನ್ನು ನಡೆಸಿದ್ದಾರೆ. ತಮಿಳುನಾಡಿನಲ್ಲಿ ಪ್ರಬಲವಾಗಿರುವುದು ದ್ರಾವಿಡ ಪಕ್ಷಗಳೇ ಆಗಿದ್ದರೂ, ಕಾಂಗ್ರೆಸ್​ ಅಲ್ಪಸ್ವಲ್ಪ ನೆಲೆ ಕಂಡಿದೆ. ಬಿಜೆಪಿ ನೆಲೆ ಕಂಡುಕೊಳ್ಳಲು ಹರಸಾಹಸಪಡುತ್ತಿದೆ. ಇದೇ ಮೊದಲ ಬಾರಿಗೆ ಬಾರಿಗೆ ಡಿಎಂಕೆ- ಎಐಎಡಿಎಂಕೆ- ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

370 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ದಕ್ಷಿಣದ ರಾಜ್ಯಗಳನ್ನು ಗುರಿಯಾಗಿಸಿದೆ. ಕನಿಷ್ಠ 50 ರಿಂದ 60 ಕ್ಷೇತ್ರದ ಮೇಲೆ ಗುರಿ ಇಟ್ಟಿರುವ ಬಿಜೆಪಿ, ತಮಿಳುನಾಡಿನಲ್ಲಿ ಕನಿಷ್ಠ 10 ಸ್ಥಾನ ಗಳಿಸುವ ಇರಾದೆಯಲ್ಲಿದೆ. ಕೊಯಮತ್ತೂರು, ಪಶ್ಚಿಮ ತಮಿಳುನಾಡಿನ ಕೇಂದ್ರಬಿಂದುವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕುತೂಹಲಕಾರಿ ಕ್ಷೇತ್ರವಾಗಿದೆ.

ಬಿಜೆಪಿಯ ಅಣ್ಣಾಮಲೈ ಡಿಎಂಕೆ, ಎಐಎಡಿಎಂಕೆ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಹವಣಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಕೂಟ 38 ಕ್ಷೇತ್ರಗಳಲ್ಲಿಗೆಲುವು ಸಾಧಿಸಿತ್ತು. ಅದೇ ಫಲಿತಾಂಶ ಪುನರಾವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.

ಮತ್ತಷ್ಟು ಓದಿ: Lok Sabha Elections 2024: ಲೋಕಸಭಾ ಚುನಾವಣೆ, ನಾಳೆ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಅವರ ಪ್ರಚಾರವು ಉತ್ತಮ ಫಲಿತಾಂಶ ನೀಡಬಹುದು ಎಂದು ನಂಬಲಾಗಿದೆ, ಅವರು ಚೆನ್ನೈ, ಕೊಯಮತ್ತೂರು, ವೆಲ್ಲೂರು ಮತ್ತು ತಿರುನಲ್ವೇಲಿಯಲ್ಲಿ ಪ್ರಚಾರ ನಡೆಸಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿಯೊಬ್ಬರು ತಮಿಳುನಾಡಿಗೆ ಒಂಬತ್ತು ಬಾರಿ ಭೇಟಿ ನೀಡಿದ್ದಾರೆ.

ಪ್ರಮುಖ ಕ್ಷೇತ್ರಗಳು ಕೊಯಮತ್ತೂರು, ತೂತುಕುಡಿ, ಚೆನ್ನೈ ಕೇಂದ್ರ, ಕನ್ಯಾಕುಮಾರಿ, ಕೃಷ್ಣಗಿರಿ, ನೀಲಗಿರಿ, ಶಿವಗಂಗಾ, ಶ್ರೀಪೆರಂಬದೂರು, ಥೆಣಿ, ವಿಲ್ಲುಪುರಂ, ರಾಮನಾಥಪುರಂ, ವಿರುಧನಗರ, ಚೆನ್ನೈ ಉತ್ತರ

ಕಣಲ್ಲಿರುವ ಪ್ರಮುಖ ಅಭ್ಯರ್ಥಿಗಳು ತಮಿಳ್​ಸಾಯಿ ಸೌಂದರ್‌ರಾಜನ್‌ (ಬಿಜೆಪಿ), ಪನ್ನೀರ್‌ಸೆಲಂ (ಪಕ್ಷೇತರ), ದಯಾನಿಧಿ ಮಾರನ್‌ (ಡಿಎಂಕೆ) ಎಲ್‌.ಮುರುಗನ್‌ (ಬಿಜೆಪಿ), ಅತ್ರಾಳ್‌ ಅಶೋಕ್‌ ಕುಮಾರ್‌ (ಎಐಎಡಿಎಂಕೆ), ಕನಿಮೊಳಿ (ಡಿಎಂಕೆ), ಕೆ.ಅಣ್ಣಮಲೈ (ಕೊಯಮತ್ತೂರು), ಕಾರ್ತಿಚಿದಂಬರಂ (ಕಾಂಗ್ರೆಸ್‌), ಜಯಪ್ರಕಾಶ್‌ (ಎಐಎಡಿಎಂಕೆ).

2019ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಡಿಎಂಕೆ 2024ರಲ್ಲೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಬಿಜೆಪಿಯು ಹೊಸ ರಾಜಕೀಯ ಸಮೀಕರಣಕ್ಕೆ ಭಾಷ್ಯ ಬರೆಯುವ ಪ್ರಯತ್ನ ಮಾಡುತ್ತಿದೆ. ಜನವರಿ 4ರಂದು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!