ಧ್ರುವ್ ವಿಕ್ರಮ್ ಜತೆ ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್? ವೈರಲ್ ಆಯ್ತು ಹೊಸ ಪೋಸ್ಟ್
ನಟಿ ಅನುಪಮಾ ಪರಮೇಶ್ವರನ್ ಅವರು ಇನ್‌ಸ್ಟಾಗ್ರಾಮ್‌ಗೆ ಕಂಬ್ಯಾಕ್ ಮಾಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅವರು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತಗೆದುಕೊಂಡಿದ್ದರು. ಈಗ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇನ್‌ಸ್ಟಾಗ್ರಾಮ್‌ಗೆ ಮರಳಿದ್ದಾರೆ. ಆದರೆ, ಫೋಟೋಗಳಿಗಿಂತ ಅನುಪಮಾ ಅವರು ನೀಡಿರುವ ಕ್ಯಾಪ್ಷನ್‌ಗಳು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ.

ಮುಖ್ಯಾಂಶಗಳು
- ನಟಿ ಅನುಪಮಾ ಪರಮೇಶ್ವರನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ.
- ಅನುಪಮಾ ಮಾಡಿದ ಪೋಸ್ಟ್ನಿಂದ ಧ್ರುವ್ ವಿಕ್ರಮ್ ಜೊತೆಗಿನ ಬ್ರೇಕಪ್ ವದಂತಿಗೆ ಪುಷ್ಟಿ ಸಿಕ್ಕಿದೆ.
- ಕಮೆಂಟ್ ಮಾಡಿದ ಅಭಿಮಾನಿಗಳು ನಟಿಯ ಬ್ರೇಕಪ್ ಬಗ್ಗೆ ಚರ್ಚೆ ಮಾಡಲು ಆರಂಭಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಮತ್ತು ತಮಿಳು ನಟ ಧ್ರುವ್ ವಿಕ್ರಮ್ (Dhruv Vikram) ನಡುವಿನ ಪ್ರೀತಿ ಹಾಗೂ ಬ್ರೇಕಪ್ ವದಂತಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಕಳೆದ ಕೆಲವು ತಿಂಗಳುಗಳಿಂದ ಇನ್‌ಸ್ಟಾಗ್ರಾಮ್‌ನಿಂದ ದೂರವಿದ್ದ ಅನುಪಮಾ, ಈಗ ಹಂಚಿಕೊಂಡಿರುವ ಸಾಲು ಸಾಲು ಪೋಸ್ಟ್‌ಗಳು ಇಬ್ಬರ ನಡುವಿನ ಬ್ರೇಕಪ್ (Anupama Parameswaran Breakup) ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಕ್ಯಾಪ್ಷನ್‌ನಲ್ಲಿ ಅಡಗಿದೆ ದೊಡ್ಡ ಸುಳಿವು
ತಮ್ಮ ಪೋಸ್ಟ್ ಒಂದರಲ್ಲಿ ಅನುಪಮಾ ಕ್ಯಾಪ್ಷನ್ ನೀಡಿದ್ದು ಗಮನ ಸೆಳೆದಿದೆ. ‘ಫೋಟೋಗಳನ್ನು ಶೇರ್ ಮಾಡದೇ ಇರುವುದಕ್ಕೆ ಕ್ಷಮಿಸಿ. ಆದರೆ ಇನ್ನೊಬ್ಬರ ಅನುಮತಿಗಾಗಿ, ಹಾಡಿನ ಆಯ್ಕೆಗಾಗಿ ಅಥವಾ ಮತ್ತೊಬ್ಬರು ಬರೆದುಕೊಡುವ ಕ್ಯಾಪ್ಷನ್‌ಗಾಗಿ ಕಾಯುವ ಅಗತ್ಯವಿಲ್ಲದಿದ್ದಾಗ ಪೋಸ್ಟ್ ಮಾಡುವುದು ತುಂಬಾ ಖುಷಿ ಕೊಡುತ್ತದೆ’ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ‘ಕೆಲವೊಮ್ಮೆ ನಮ್ಮ ಶಾಂತಿಗಾಗಿ ಮುಚ್ಚಿಹೋದ ದಾರಿಗಳನ್ನು ಬಿಟ್ಟು ಮುಂದೆ ಸಾಗಬೇಕಾಗುತ್ತದೆ. ಇಂದು ನನಗೆ ಆ ಶಾಂತಿ ಸಿಕ್ಕಿದೆ’ ಎಂದು ಬರೆದಿದ್ದಾರೆ.
ಇನ್ಮುಂದೆ ಯಾರ ಅನುಮತಿಯೂ ಬೇಕಾಗಿಲ್ಲ
ಅಷ್ಟಕ್ಕೇ ನಿಲ್ಲದ ಅನುಪಮಾ ಮತ್ತೊಂದು ಪೋಸ್ಟ್‌ನಲ್ಲಿ ಇನ್ನಷ್ಟು ವೈಯಕ್ತಿಕವಾಗಿ ಬರೆದುಕೊಂಡಿದ್ದು, ‘ಇಂದಿನಿಂದ ನಾನು ನನ್ನ ಧ್ವನಿಯನ್ನು, ನನ್ನ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಇನ್ಮುಂದೆ ಯಾವುದೇ ಅನುಮತಿಗಳು ಬೇಕಿಲ್ಲ, ಯಾವುದೇ ಭಯವಿಲ್ಲ. ನನ್ನನ್ನು ನಾನು ಹುಡುಕಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದೇನೆ. ತುಂಬಾ ದಿನಗಳಿಂದ ನಾನು ಹೇಳಲು ಬಯಸಿದ್ದ, ಆದರೆ ಹೇಳಲು ನನಗೆ ಅನುಮತಿ ಇಲ್ಲದ ಒಂದು ಮಾತನ್ನು ಇಂದು ಹೇಳುತ್ತಿದ್ದೇನೆ. ನಾನು ನಿಮ್ಮನ್ನೆಲ್ಲ ಪ್ರೀತಿಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅನುಪಮಾ ಪರಮೇಶ್ವರನ್ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ
‘ನನ್ನನ್ನು ನಂಬಿದ ಮತ್ತು ನನ್ನ ಕಷ್ಟದ ಸಮಯದಲ್ಲಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನನ್ನು ನನಗೇ ಮರಳಿ ತಂದುಕೊಟ್ಟ ಯೂನಿವರ್ಸ್ಗೆ ಧನ್ಯವಾದಗಳು. ಇದು ನನ್ನ ಹೀಲಿಂಗ್ ಹಾಗೂ ಸ್ವಾತಂತ್ರ್ಯದ ಸಮಯ’ ಎಂದು ಅನುಪಮಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು, ಅನುಪಮಾ ಅವರು ಧ್ರುವ್ ವಿಕ್ರಮ್ ಅವರಿಂದ ದೂರಾಗಿ, ತಮ್ಮ ಸ್ವತಂತ್ರ ಜೀವನವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ಲವ್ ರಹಸ್ಯ ಬಯಲಾಗಿದ್ದು ಹೇಗೆ?
2025ರ ಆರಂಭದಲ್ಲಿ ಮಾರಿ ಸೆಲ್ವರಾಜ್ ನಿರ್ದೇಶನದ ‘ಬೈಸನ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಧ್ರುವ್ ಮತ್ತು ಅನುಪಮಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಇಬ್ಬರ ನಡುವಿನ ಕೆಮಿಸ್ಟ್ರಿ ಗಮನ ಸೆಳೆದಿತ್ತು. ವೇದಿಕೆಯ ಮೇಲೆ ಧ್ರುವ್ ಹುಟ್ಟುಹಬ್ಬದ ಶುಭ ಕೋರಿದಾಗ ಅನುಪಮಾ ನಾಚಿ ನೀರಾಗಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಇಬ್ಬರೂ ಪರಸ್ಪರ ದೂರ ಉಳಿದಿದ್ದು, ಇದೀಗ ಅನುಪಮಾ ಅವರ ಪೋಸ್ಟ್‌ಗಳು ಇಬ್ಬರ ಬ್ರೇಕಪ್ ಅನ್ನು ಬಹುತೇಕ ಖಚಿತಪಡಿಸಿವೆ ಎನ್ನುತ್ತಿದ್ದಾರೆ ನೆಟ್ಟಿಗರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




