ಎಲ್ಲರ ಎದುರು ಕಿಸ್ ಮಾಡೋದು ಬಲು ಕಷ್ಟ ಎಂದ ನಟಿ ಅನುಪಮಾ ಪರಮೇಶ್ವರನ್
Anupama Parameswaran: ಅನುಪಮಾ ಪರಮೇಶ್ವರನ್ ಈ ಮೊದಲು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಕಡಿಮೆ. ಇತ್ತೀಚೆಗೆ ಅವರು ಅಂಥ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರು ‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಲಿಲ್ಲಿ ಪಾತ್ರ ಮಾಡಿದ್ದಾರೆ. ಈ ಚಿತ್ರದ ಒಂದು ಹಾಡಿನಲ್ಲಿ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಗಾಗಿ ಕೆಲವು ನಟ-ನಟಿಯರು ಬೋಲ್ಡ್ ದೃಶ್ಯಗಳನ್ನು ಮಾಡಲು ಒಪ್ಪಿಕೊಳ್ಳುತ್ತಾರೆ. ಸಿನಿಮಾದ ದೃಶ್ಯ ಅದನ್ನು ಕೇಳುತ್ತಿದೆ ಎಂದಾಗ ಅದನ್ನು ಅರಿತು ನಟಿಸಲು ನಟ-ನಟಿಯರು ಒಪ್ಪುತ್ತಾರೆ. ಈ ರೀತಿ ದೃಶ್ಯಗಳನ್ನು ಶೂಟ್ ಮಾಡುವಾಗ ಇಡೀ ತಾಂತ್ರಿಕ ವರ್ಗ ಅಲ್ಲಿರುತ್ತದೆ. ಈ ರೀತಿಯ ದೃಶ್ಯಗಳನ್ನು ಮಾಡೋದು ಬಲು ಕಷ್ಟ ಎಂದು ನಟಿ ಅನುಪಮಾ ಪರಮೇಶ್ವರನ್ ಅವರು ಹೇಳಿಕೊಂಡಿದ್ದಾರೆ. ಅವರ ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ (Tillu Square Movie) ರಿಲೀಸ್ಗೆ ರೆಡಿ ಇದೆ. ಈ ಚಿತ್ರದಲ್ಲಿ ಬರೋ ಇಂಟಿಮೇಟ್ ದೃಶ್ಯದ ಬಗ್ಗೆ ಅವರು ಮಾತನಾಡಿದ್ದಾರೆ.
ಅನುಪಮಾ ಪರಮೇಶ್ವರನ್ ಈ ಮೊದಲು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಕಡಿಮೆ. ಇತ್ತೀಚೆಗೆ ಅವರು ಅಂಥ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರು ‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಲಿಲ್ಲಿ ಪಾತ್ರ ಮಾಡಿದ್ದಾರೆ. ಈ ಚಿತ್ರದ ಒಂದು ಹಾಡಿನಲ್ಲಿ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ದೃಶ್ಯಗಳು ವೈರಲ್ ಆಗಿವೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಅನುಪಮಾ ಮಾತು
Anupama, about the car sequence in #TilluSquare movie pic.twitter.com/kuinPMQyrL
— poorna_choudary (@poornachoudary1) March 25, 2024
‘ರೊಮ್ಯಾಂಟಿಕ್ ದೃಶ್ಯ ಮಾಡೋದು ಸುಲಭದ ಮಾತಲ್ಲ. ಇಬ್ಬರು ಇಂಟಿಮೇಟ್ ಆಗೋದು ಖಾಸಗಿ ಕ್ಷಣ. ಆದರೆ ಶೂಟ್ಗಾಗಿ 100 ಜನರ ಎದುರು ಅದನ್ನು ಮಾಡಬೇಕು. ಕಾರ್ನಲ್ಲಿ ಕಿಸ್ ಮಾಡೋ ದೃಶ್ಯ ಸಖತ್ ಕಷ್ಟ ಆಗಿತ್ತು. ಕಾಲಿಗೆ ಎರಡು ಕಡೆಗಳಲ್ಲಿ ಗಾಯ ಆಗಿತ್ತು. ಆದರೂ ಆ್ಯಕ್ಟ್ ಮಾಡಲೇಬೇಕು. ರೊಮ್ಯಾನ್ಸ್ ಮಾಡೋದು ಸುಲಭ ಎಂದು ಪ್ರೇಕ್ಷಕರು ಭಾವಿಸುತ್ತಾರೆ. ಆದರೆ, ಅದು ಅಷ್ಟು ಸುಲಭ ಅಲ್ಲ’ ಎಂದಿದ್ದಾರೆ ಅನುಪಮಾ.
ಇದನ್ನೂ ಓದಿ: ‘ಅಡಲ್ಟ್ ಕಂಟೆಂಟ್ ಇಲ್ಲ’; ಅನುಪಮಾ ಪರಮೇಶ್ವರನ್ ನಟನೆಯ ಚಿತ್ರಕ್ಕೆ ಸಿಕ್ತು ಸ್ಪಷ್ಟನೆ
ಅನುಪಮಾ ಪರಮೇಶ್ವರನ್ ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಚಿತ್ರದಲ್ಲೂ ಅವರು ನಟಿಸಿದರು. ಸಿದ್ದು ಜೊನ್ನಲಗಡ್ಡ ಹಾಗೂ ಅನುಪಮಾ ಜೊತೆಯಾಗಿ ‘ಟಿಲ್ಲು ಸ್ಕ್ವೇರ್’ನಲ್ಲಿ ನಟಿಸಿದ್ದಾರೆ. ಮಾರ್ಚ್ 29ರಂದು ಈ ಚಿತ್ರ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Wed, 27 March 24




