ಸಹ ಕಲಾವಿದರ ಬಗ್ಗೆ ಗಂಭೀರ ಆರೋಪ ಮಾಡಿದ್ದ ಸೆಲೆಬ್ರಿಟಿಗಳು; ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗಿತ್ತು ವಿಚಾರ

| Updated By: ರಾಜೇಶ್ ದುಗ್ಗುಮನೆ

Updated on: Oct 19, 2023 | 8:11 AM

ಹಲವು ಸೆಲೆಬ್ರಿಟಿಗಳು ಒಬ್ಬರಿಗೊಬ್ಬರು ಬೈದುಕೊಂಡಿದ್ದಾರೆ. ಸಂದರ್ಶನದಲ್ಲಿ ಮತ್ತೊಂದು ಸೆಲೆಬ್ರಿಟಿ ಬಗ್ಗೆ ಟೀಕೆ ಮಾಡಿದ ಸಾಕಷ್ಟು ಉದಾಹರಣೆ ಇದೆ. ಕತ್ರಿನಾ ಕೈಫ್, ಆಮಿರ್ ಖಾನ್ ಸೇರಿ ಅನೇಕರು ಈ ಸಾಲಿನಲ್ಲಿದ್ದಾರೆ. ಅವರು ಹೇಳಿದ್ದೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಹ ಕಲಾವಿದರ ಬಗ್ಗೆ ಗಂಭೀರ ಆರೋಪ ಮಾಡಿದ್ದ ಸೆಲೆಬ್ರಿಟಿಗಳು; ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗಿತ್ತು ವಿಚಾರ
ಸಹ ಕಲಾವಿದರ ಬಗ್ಗೆ ಗಂಭೀರ ಆರೋಪ ಮಾಡಿದ್ದ ಸೆಲೆಬ್ರಿಟಿಗಳು..
Follow us on

ಬಾಲಿವುಡ್​ ಜಗತ್ತು ತುಂಬಾನೇ ದೊಡ್ಡದು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇಲ್ಲಿದ್ದಾರೆ. ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆವ ಸಾಕಷ್ಟು ನಟರಿದ್ದಾರೆ. ಹಲವು ಸೆಲೆಬ್ರಿಟಿಗಳ ಮಧ್ಯೆ ಗೆಳೆತನ ಇದೆ. ಅದೇ ರೀತಿ ಹಲವು ಸೆಲೆಬ್ರಿಟಿಗಳು ಒಬ್ಬರಿಗೊಬ್ಬರು ಬೈದುಕೊಂಡಿದ್ದಾರೆ. ಸಂದರ್ಶನದಲ್ಲಿ ಮತ್ತೊಂದು ಸೆಲೆಬ್ರಿಟಿ ಬಗ್ಗೆ ಟೀಕೆ ಮಾಡಿದ ಸಾಕಷ್ಟು ಉದಾಹರಣೆ ಇದೆ. ಕತ್ರಿನಾ ಕೈಫ್ (Katrina Kaif), ಆಮಿರ್ ಖಾನ್ ಸೇರಿ ಅನೇಕರು ಈ ಸಾಲಿನಲ್ಲಿದ್ದಾರೆ. ಅವರು ಹೇಳಿದ್ದೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ತಾಪ್ಸೀ ಪನ್ನು

ತಾಪ್ಸೀ ಪನ್ನು ಬಾಲಿವುಡ್​ನ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಸದ್ಯ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮನ್​ಮರ್ಜಿಯಾ’ ಸಿನಿಮಾ ಪ್ರಮೋಷನ್ ವೇಳೆ ಅವರು ಕಂಗನಾ ಬಗ್ಗೆ ಮಾತನಾಡಿದ್ದರು. ‘ಆಡುವ ಮಾತುಗಳನ್ನು ನಿಯಂತ್ರಣ ಮಾಡಿಕೊಳ್ಳಲು ಕಂಗನಾಗೆ ಡಬಲ್ ಫಿಲ್ಟರ್ ನೀಡುತ್ತೇನೆ’ ಎಂದು ತಾಪ್ಸೀ ಪನ್ನು ಹೇಳಿದ್ದರು. ಅನುರಾಗ್ ಕಶ್ಯಪ್ ಹಾಗೂ ವಿಕ್ಕಿ ಕೌಶಲ್ ಕೂಡ ಅಲ್ಲಿಯೇ ಇದ್ದರು. ಈ ವೇಳೆ ಅವರು ನಕ್ಕಿದ್ದರು.

ಕತ್ರಿನಾ ಕೈಪ್

‘ಸಹ ನಟರಲ್ಲಿ ಇಲ್ಲದಿರುವ ಯಾವ ಉತ್ತಮ ಗುಣ ರಣಬೀರ್ ಕಪೂರ್ ಬಳಿ ಇದೆ’ ಎಂದು ಸಂದರ್ಶನವೊಂದರಲ್ಲಿ ಕತ್ರಿನಾಗೆ ಕೇಳಲಾಯಿತು. ಅವರು ಒಂದು ನಿಮಿಷ ಮೌನವಾಗಿದ್ದರು. ಇದನ್ನು ಹಲವು ರೀತಿಯಲ್ಲಿ ಬಣ್ಣಿಸಲಾಗಿತ್ತು. ಕತ್ರಿನಾ ಹಾಗೂ ರಣಬೀರ್ ಪರಸ್ಪರ ಪ್ರೀತಿಸುತ್ತಿದ್ದರು.

ಕಂಗನಾ ರಣಾವತ್

ನಟಿ ಕಂಗನಾ ರಣಾವತ್ ಅವರು ವಿವಾದಗಳ ಮೂಲಕ ಆಗಾಗ ಸುದ್ದಿ ಆಗುತ್ತಾರೆ. ಅವರು ಹೃತಿಕ್ ರೋಷನ್ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಆಪ್​ ಕಿ ಅದಾಲತ್​’ ಕಾರ್ಯಕ್ರಮದಲ್ಲಿ ಕಂಗನಾ ಮಾತನಾಡಿದ್ದರು. ‘ಹೃತಿಕ್ ಬಳಿ ತಾತ ಮಾಡಿಟ್ಟ ಆಸ್ತಿ ಇದೆ’ ಎಂದು ಅಣಕಿಸಿದ್ದರು.

ಸಿದ್ದಾರ್ಥ್ ಚತುರ್ವೇದಿ

ಸಿದ್ದಾರ್ಥ್ ಚತುರ್ವೇದಿ ಅವರು ಅನನ್ಯಾ ಪಾಂಡೇನ ಟೀಕೆ ಮಾಡಿದ್ದರು. ರಾಜೀವ್ ಮಸಂದ್ ರೌಂಡ್​ಟೇಬಲ್ ಸಂದರ್ಶನದಲ್ಲಿ ಸಿದ್ದಾರ್ಥ್, ಅನನ್ಯಾ ಹಾಗೂ ಮೊದಲಾದವರು ಭಾಗಿ ಆಗಿದ್ದರು. ಸ್ಟಾರ್ ಕಿಡ್ ಸ್ಟೇಟಸ್​ನ ಡಿಫೆಂಡ್ ಮಾಡಿಕೊಂಡಿದ್ದರು ಅನನ್ಯಾ. ‘ನಾನು ಹಾಗೂ ನನ್ನ ತಂದೆ ಚಂಕಿ ಪಾಂಡೆ ಸ್ಟ್ರಗಲ್ ಮಾಡಿದ್ದೆವು’ ಎಂದು ಅನನ್ಯಾ ಹೇಳಿದ್ದರು. ‘ನಮ್ಮ ಕನಸು ಎಲ್ಲಿ ನನಸಾಗುತ್ತದೆಯೋ ಅಲ್ಲಿ ಇವರ ಸ್ಟ್ರಗಲ್ ಶುರುವಾಗುತ್ತದೆ’ ಎಂದಿದ್ದರು ಸಿದ್ದಾರ್ಥ್.

ರಾಜ್​ಕುಮಾರ್ ರಾವ್​

ರಾಜ್​ಕುಮಾರ್ ರಾವ್ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಸಂದರ್ಶನ ಒಂದರಲ್ಲಿ ಸೋನಂ ಕಪೂರ್ ಅವರನ್ನು ಟ್ರೋಲ್ ಮಾಡಿದ್ದರು. ಸೋನಂ ಅವರ ಸ್ಟಾರ್ ಕಿಡ್ ಸ್ಟೇಟಸ್​​ನ ಟೀಕಿಸಿದ್ದರು.

ಆಮಿರ್ ಖಾನ್

ಆಮಿರ್ ಖಾನ್ ಅವರು ‘ಕಾಫಿ ವಿತ್ ಕರಣ್’ ಶೋದಲ್ಲಿ ಭಾಗಿ ಆಗಿದ್ದರು. ಈ ಶೋನ ಇಷ್ಟಪಡುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದರು. ‘ನೀವು ನಿಮ್ಮ ಶೋ ಪ್ರಾರಂಭಿಸಿದಾಗ ನಿಮ್ಮ ಬಗ್ಗೆ ನನಗೆ ತಿಳಿದಿರಲಿಲ್ಲ. ನಿಮ್ಮ ಬಗ್ಗೆ ಸ್ವಲ್ಪ ತಿಳಿದ ಬಳಿಕವೂ ನೀವು ಇಷ್ಟವಾಗಲಿಲ್ಲ’ ಎಂದಿದ್ದರು ಆಮಿರ್.

ಧನುಷ್

‘ಅತ್ರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದ ಧನುಷ್ ಹಾಗೂ ಸಾರಾ ಅಲಿ ಖಾನ್ ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗಿ ಆಗಿದ್ದರು. ಸಾರಾ ಹಾಗೂ ಸೋನಂನಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಕೋರಲಾಯಿತು. ಅವರು ಸೋನಂನ ಆಯ್ಕೆ ಮಾಡಿ ಸಾರಾಗೆ ಶಾಕ್ ಕೊಟ್ಟರು.

ನಸೀರುದ್ದಿನ್ ಶಾ

ಬಾಲಿವುಡ್​ನ ಹಿರಿಯ ನಟ ನಸೀರುದ್ದಿನ್ ಶಾ ಅವರು ಶತ್ರುಘ್ನ ಸಿನ್ಹಾ ಅವರನ್ನು ಟೀಕಿಸಿದ್ದರು.

ಇದನ್ನೂ ಓದಿ: ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಲ್ಲ ಅನುರಾಗ್ ಕಶ್ಯಪ್; ಕಾರಣ ತಿಳಿಸಿದ ನಿರ್ದೇಶಕ

ಅನುರಾಗ್ ಕಶ್ಯಪ್

ಬಾಲಿವುಡ್​ನ ಬೇಡಿಕೆಯ ನಿರ್ದೇಶಕ ಅನುರಾಗ್ ಕಶ್ಯಪ್. ಅವರು ಹೊಸ ಕಲಾವಿದರ ಜೊತೆ ಸಿನಿಮಾ ಮಾಡುತ್ತಾರೆ. ಕಡಿಮೆ ಬಜೆಟ್​ನ ಚಿತ್ರಕ್ಕೆ ಆದ್ಯತೆ ನೀಡುತ್ತಾರೆ. ಅವರು ಕರಣ್ ಜೋಹರ್ ಅವರನ್ನು ಟೀಕಿಸಿದ್ದರು. ‘ನಾನು ಕರಣ್ ಜೋಹರ್ ಅವರನ್ನು ಹೇಟ್ ಮಾಡುತ್ತೇನೆ’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:03 am, Thu, 19 October 23