ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟಿವ್ ಆಗಿಲ್ಲ. ಇತ್ತೀಚೆಗೆ ಅವರ ನಟನೆಯ ಚಿತ್ರಗಳು ತೆರೆಗೆ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರು ಆ್ಯಕ್ಟಿವ್ ಆಗಿರೋದು ತುಂಬಾನೇ ಅಪರೂಪ. ಈಗ ಅವರು ಅಭಿಮಾನಿಗಳ ಬಳಿ ನನ್ನನ್ನು ಫಾಲೋ ಮಾಡಿ ಎಂದು ಕೇಳಿದ್ದಾರೆ. ಅಷ್ಟಕ್ಕೂ ಅನುಷ್ಕಾ ಈ ರೀತಿಯ ಬೇಡಿಕೆ ಇಡೋಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇತ್ತೀಚೆಗೆ ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವೆ ಸಣ್ಣ ತಿಕ್ಕಾಟ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಒಪ್ಪಿಕೊಳ್ಳದಿದ್ದರೆ, ಭಾರತದಲ್ಲಿ ಟ್ವಿಟರ್ ಬ್ಯಾನ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಹೀಗಾಗಿ, ಭಾರತದ ಮೂಲಕ ಕೂ ಆ್ಯಪ್ ಬಗ್ಗೆ ಜನರು ಹೆಚ್ಚು ಒಲವು ತೋರಿದ್ದರು. ಈಗ ಅನುಷ್ಕಾ ಕೂಡ ಕೂ ಕುಟುಂಬ ಸೇರಿದ್ದಾರೆ. ಅಲ್ಲದೆ, ಅಭಿಮಾನಿಗಳ ಬಳಿ ತಮ್ಮನ್ನು ಫಾಲೋ ಮಾಡುವಂತೆ ಕೋರಿದ್ದಾರೆ.
‘ಎಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಆಸಕ್ತಿಕರ ಮಾಹಿತಿಗೆ ನನ್ನನ್ನು ಕೂ ಆ್ಯಪ್ನಲ್ಲಿ ಫಾಲೋ ಮಾಡಿ. ಧನ್ಯವಾದಗಳು’ ಎಂದು ಅನುಷ್ಕಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಕೂ ಆ್ಯಪ್ ಮೊಟ್ಟ ಮೊದಲ ಬಾರಿಗೆ ಲಾಂಚ್ ಆಗಿದ್ದು 2020 ಮಾರ್ಚ್ ತಿಂಗಳಲ್ಲಿ. ಇದು ಬೆಂಗಳೂರು ಮೂಲದ ಸ್ಟಾರ್ಟ್-ಅಪ್. ಮುಂದಿನ ದಿನಗಳಲ್ಲಿ ಭಾರತದಲ್ಲಿ ಟ್ವಿಟರ್ಗೆ ಬದಲಿ ತಾಣ ಕೂ ಆಗಲಿದೆ ಎನ್ನುವುದು ಅನೇಕರ ಅಭಿಪ್ರಾಯ. ಆತ್ಮನಿರ್ಭರ ಆ್ಯಪ್ ಚಾಲೆಂಜ್ ಅನ್ನು ಕೂ ಗೆದ್ದಿದೆ. ಸರ್ಕಾರದಿಂದ ಈ ಆ್ಯಪ್ಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಇಂಗ್ಲಿಷ್ ಮಾತ್ರ ಅಲ್ಲದೆ, ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಇದನ್ನು ಬಳಸಬಹುದು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನುಷ್ಕಾ ಶೆಟ್ಟಿ, ‘ಮಿಸ್. ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ. ಪಿ. ಮಹೇಶ್ ಹೆಸರಿನ ಹೊಸ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ:ಬುಲ್ಬುಲ್’ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್