ಪ್ರಚಾರಕ್ಕೆ ಕರೆದರೂ ಬಾರದ ಅನುಷ್ಕಾ ಶೆಟ್ಟಿ; ‘ಘಾಟಿ’ ಹೀನಾಯ ಕಲೆಕ್ಷನ್

‘ಘಾಟಿ’ ಸಿನಿಮಾ ಬಿಡುಗಡೆಯಾದ ನಂತರ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಅನುಷ್ಕಾ ಶೆಟ್ಟಿ ಅವರ ಪ್ರಮುಖ ಪಾತ್ರವಿದ್ದರೂ, ಸಿನಿಮಾದ ಪ್ರಚಾರದ ಕೊರತೆಯಿಂದ ಬಾಕ್ಸ್ ಆಫೀಸ್ ಸಂಗ್ರಹ ಕುಸಿದಿದೆ. ಬಾಹುಬಲಿ ಮತ್ತು ಭಾಗಮತಿ ಚಿತ್ರಗಳಿಗೆ ಹೋಲಿಸಿದರೆ ಘಾಟಿ ಸಿನಿಮಾದ ಪ್ರಚಾರದಲ್ಲಿ ತೀವ್ರ ಕೊರತೆ ಕಂಡುಬಂದಿದೆ.

ಪ್ರಚಾರಕ್ಕೆ ಕರೆದರೂ ಬಾರದ ಅನುಷ್ಕಾ ಶೆಟ್ಟಿ; ‘ಘಾಟಿ’ ಹೀನಾಯ ಕಲೆಕ್ಷನ್
ಅನುಷ್ಕಾ

Updated on: Sep 08, 2025 | 2:07 PM

ಒಂದು ಸಿನಿಮಾ ಗೆಲ್ಲಬೇಕು ಎಂದರೆ ಅದಕ್ಕೆ ಪ್ರಚಾರ ತುಂಬಾನೇ ಮುಖ್ಯ. ಸಿನಿಮಾ ಪ್ರಚಾರ ಮಾಡಲು ನಾಯಕ-ನಾಯಕಿ ಬಂದಿಲ್ಲ ಎಂದರೆ ಅದು ಚಿತ್ರಕ್ಕೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು. ‘ಘಾಟಿ’ ಸಿನಿಮಾ ಚಿತ್ರಕ್ಕೂ ಈಗ ಅದೇ ಆಗಿದೆ. ಅನುಷ್ಕಾ ಶೆಟ್ಟಿ (Anushka Shetty) ಅವರು ‘ಘಾಟಿ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದು. ಆದರೆ, ಅವರು ಮೊದಲಿನ ಚಾರ್ಮ್ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.

‘ಘಾಟಿ’ ಸಿನಿಮಾ ಸೆಪ್ಟೆಂಬರ್ 5ರಂದು ರಿಲೀಸ್ ಆಯಿತು. ಸಿನಿಮಾ ಮೇಲಿರೋ ಹೈಪ್​​ನಿಂದ ಚಿತ್ರ ಮೊದಲ ದಿನ 2 ಕೋಟಿ ರೂಪಾಯಿ ಗಳಿಕೆ ಮಾಡಿತು. ಶನಿವಾರ 1.74 ಕೋಟಿ ರೂಪಾಯಿ ಹಾಗೂ ಭಾನುವಾರ 1.15 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 4.89 ಕೋಟಿ ರೂಪಾಯಿ ಆಗಿದೆ. ಸಿನಿಮಾದ ಕಲೆಕ್ಷನ್ ಏರಿಕೆ ಕಾಣುವ ಬದಲು ಇಳಿಕೆ ಕಂಡಿದೆ.

ಇದನ್ನೂ ಓದಿ
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ ಮಂದಣ್ಣ? ಗಮನ ಸೆಳೆದ ಉಂಗುರ
‘ಹಳ್ಳಿ ಪವರ್​​’ನಲ್ಲಿ ಮೊದಲ ವಾರವೇ ಇಬ್ಬರು ಎಲಿಮಿನೇಟ್
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ

‘ಘಾಟಿ’ ಸಿನಿಮಾಗೆ ಬುಕ್​ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಚಿತ್ರಕ್ಕೆ ಈವರೆಗೆ (ಸೆಪ್ಟೆಂಬರ್ 8 ಮಧ್ಯಾಹ್ನ 12.30) 4.4 ಸಾವಿರ ಜನರು ವೋಟ್ ಮಾಡಿದ್ದು, 8.3 ರೇಟಿಂಗ್ ಸಿಕ್ಕಿದೆ. ಚಿತ್ರವೊಂದಕ್ಕೆ 8+ ರೇಟಿಂಗ್ ಸಿಕ್ಕರೆ ಅದು ಉತ್ತಮವಾಗಿದೆ ಎಂದನ್ನಬಹುದು. ಆದಾಗ್ಯೂ ‘ಘಾಟಿ’ ಸಿನಿಮಾ ವೀಕ್ಷಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿಲ್ಲ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಸಿನಿಮಾಕ್ಕೆ ಸಂಕಷ್ಟ, ‘ಘಾಟಿ’ ಮೇಲೆ ಪೊಲೀಸರ ಹದ್ದಿನ ಕಣ್ಣು

ಇದಕ್ಕೆ ಅನುಷ್ಕಾ ಶೆಟ್ಟಿ ನೇರ ಕಾರಣ ಎಂದು ಅನೇಕರು ಹೇಳಿದ್ದಾರೆ. ‘ಬಾಹುಬಲಿ’, ‘ಭಾಗಮತಿ’ ಸಿನಿಮಾಗಳ ರಿಲೀಸ್ ಸಂದರ್ಭದಲ್ಲಿ ಅನುಷ್ಕಾ ಶೆಟ್ಟಿ ಅವರು ಸಾಕಷ್ಟು ಪ್ರಚಾರ ಮಾಡಿದ್ದರು. ಆದರೆ, ‘ಘಾಟಿ’ ಸಿನಿಮಾ ಪ್ರಚಾರಕ್ಕೆ ಅವರು ತೆರಳೇ ಇಲ್ಲ. ಕೇವಲ ಆಡಿಯೋ ಹಾಗೂ ವಿಡಿಯೋಗಳನ್ನು ಹರಿಬಿಟ್ಟು ಸಿನಿಮಾ ನೋಡುವಂತೆ ಕೋರಿಕೊಂಡಿದ್ದಾರೆ. ಇದು ಸಿನಿಮಾಗೆ ಹಿನ್ನಡೆ ಆಗಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 12:51 pm, Mon, 8 September 25