AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಕಳೆದುಕೊಂಡು ದುಃಖದಲ್ಲಿರುವ ಅಲ್ಲು ಅರವಿಂದ್​ಗೆ ಮತ್ತೊಂದು ಶಾಕ್

ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡ ಅಲ್ಲು ಅರವಿಂದ್ ಅವರಿಗೆ ಮತ್ತೊಂದು ದುಃಖದ ಸುದ್ದಿ. ಅವರ ಬಾಲ್ಯದ ಸ್ನೇಹಿತ ಹಾಗೂ ಗೀತಾ ಆರ್ಟ್ಸ್ ಸಹವರ್ತಿ ಸಿ. ನಾಗರಾಜು ನಿಧನರಾಗಿದ್ದಾರೆ. ನಾಗರಾಜು ಅವರು ಅಲ್ಲು ಅರವಿಂದ್ ಅವರ ಹತ್ತಿರದ ಸ್ನೇಹಿತರಾಗಿದ್ದು, ಹಲವು ಚಿತ್ರಗಳ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು.

ತಾಯಿ ಕಳೆದುಕೊಂಡು ದುಃಖದಲ್ಲಿರುವ ಅಲ್ಲು ಅರವಿಂದ್​ಗೆ ಮತ್ತೊಂದು ಶಾಕ್
Allu Aravind
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 08, 2025 | 10:55 AM

Share

ಅಲ್ಲು ಅರವಿಂದ್ (Allu Aravind) ಮತ್ತೊಮ್ಮೆ ದುಃಖದಲ್ಲಿ ಮುಳುಗಿದ್ದಾರೆ. ಇತ್ತೀಚೆಗೆ ಅವರ ತಾಯಿಯ ಸಾವು ಅವರಿಗೆ ನೋವು ತಂದಿತ್ತು. ಈಘ ಮತ್ತೊಮ್ಮೆ ಒಂದು ದುಃಖಕರ ಘಟನೆ ಸಂಭವಿಸಿದೆ. ಅವರ ಬಾಲ್ಯದ ಸ್ನೇಹಿತ ಮತ್ತು ಗೀತಾ ಆರ್ಟ್ಸ್ ಸಹವರ್ತಿ ಸಿ. ನಾಗರಾಜು ಅನಾರೋಗ್ಯದಿಂದ ನಿಧನರಾದರು. ಬಾಲ್ಯದಿಂದಲೂ ಅಲ್ಲು ಅರವಿಂದ್ ಅವರಿಗೆ ತುಂಬಾ ಹತ್ತಿರವಾಗಿದ್ದ ನಾಗರಾಜು, ಅರವಿಂದ್ ಅವರೊಂದಿಗೆ ಇರಲು ಹೈದರಾಬಾದ್‌ಗೆ ಬಂದು ನೆಲೆಸಿದರು. ಈಗ ಅವರು ಕೊನೆಯುಸಿರು ಎಳೆದಿದ್ದಾರೆ.

ಗೀತಾ ಆರ್ಟ್ಸ್ ನಿರ್ಮಿಸಿದ ‘ಮಾಸ್ಟರ್’ ಚಿತ್ರದೊಂದಿಗೆ ಕಂಪನಿಯೊಂದಿಗಿನ ಅವರ ಸಂಬಂಧ ಪ್ರಾರಂಭವಾಯಿತು. ಅದರ ನಂತರ, ಅವರು ಗೀತಾ ಆರ್ಟ್ಸ್ ನಿರ್ಮಿಸಿದ ಅನೇಕ ಯಶಸ್ವಿ ಚಿತ್ರಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸೇವೆ ಸಲ್ಲಿಸಿದರು.

ನಾಗರಾಜು ಅವರಿಗೆ ಪ್ರಸ್ತುತ 76 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಅವರ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಭಾನುವಾರ ಬೆಳಿಗ್ಗೆ ಹೈದರಾಬಾದ್ ತಲುಪಿದರು. ನಂತರ, ನಾಗರಾಜು ಅವರ ಅಂತ್ಯಕ್ರಿಯೆಯನ್ನು ಹೈದರಾಬಾದ್‌ನಲ್ಲಿಯೇ ನಡೆಸಲಾಯಿತು. ಅಲ್ಲು ಅರವಿಂದ್ ಅವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ವೈಯಕ್ತಿಕವಾಗಿ ವಹಿಸಿಕೊಂಡರು.

ಇದನ್ನೂ ಓದಿ
Image
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ ಮಂದಣ್ಣ? ಗಮನ ಸೆಳೆದ ಉಂಗುರ
Image
‘ಹಳ್ಳಿ ಪವರ್​​’ನಲ್ಲಿ ಮೊದಲ ವಾರವೇ ಇಬ್ಬರು ಎಲಿಮಿನೇಟ್
Image
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್
Image
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ

ಇದನ್ನೂ ಓದಿ: ಕೆಜಿಎಫ್ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್

ನಿರ್ದೇಶಕ ರವಿರಾಜ ಪಿನಿಸೆಟ್ಟಿ, ಬನ್ನಿ ವಾಸು, ವಂಶಿ ನಂದಿಪತಿ, ಬಂಡ್ಲ ಗಣೇಶ್, ಸುರೇಶ್ ಕೊಂಡೇಟಿ ಸೇರಿದಂತೆ ಚಿತ್ರರಂಗದ ಗಣ್ಯರು ಆಗಮಿಸಿ ನಾಗರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲು ಅರವಿಂದ್ ಅವರ ಆತ್ಮೀಯ ಸ್ನೇಹಿತರಾಗಿದ್ದ ನಾಗರಾಜು ಅವರ ಸಾವು ಚಿತ್ರರಂಗದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.

ತಾಯಿ ನಿಧನ

ಇತ್ತೀಚೆಗೆ ಅಲ್ಲು ಅರವಿಂದ್ ಅವರ ತಾಯಿ ಕನಕ ರತ್ನಂ ಅವರು ನಿಧನ ಹೊಂದಿದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಸಾವಿನ ಬಳಿಕ ಅಲ್ಲು ಅರವಿಂದ್ ಡಲ್ ಆಗಿದ್ದರು. ಅಲ್ಲು ಅರ್ಜುನ್ ಕೂಡ ಅಜ್ಜಿ ಸಾವಿನಿಂದ ಸಾಕಷ್ಟು ನೊಂದುಕೊಂಡಿದ್ದರು. ಈಗ ಅವರಿಗೆ ಮತ್ತೆ ನೋವಾಗಿದೆ. ಸ್ವಲ್ಪ ಸಮಯದ ನಂತರ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.