Asur 2: ಸೀಕ್ವೆಲ್​​ನಲ್ಲೂ ಮುಂದುವರಿದ ‘ಅಸುರ’ನ ಹುಡುಕಾಟ; ಇದು ಡಿಜಿಟಲ್ ವಾರ್

Asur 2: ‘ಅಸುರ್ 2’  ಸರಣಿ ಜೂನ್ 1ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.

Asur 2: ಸೀಕ್ವೆಲ್​​ನಲ್ಲೂ ಮುಂದುವರಿದ ‘ಅಸುರ’ನ ಹುಡುಕಾಟ; ಇದು ಡಿಜಿಟಲ್ ವಾರ್
ಅಸುರ್ 2
Follow us
ರಾಜೇಶ್ ದುಗ್ಗುಮನೆ
|

Updated on: May 27, 2023 | 7:46 AM

2020ರಲ್ಲಿ ಪ್ರಸಾರ ಕಂಡಿದ್ದ ‘ಅಸುರ್’ (Asur) ವೆಬ್ ಸೀರಿಸ್ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ ನೋಡಿದ ಅನೇಕರು ಮೆಚ್ಚಿಕೊಂಡಿದ್ದರು. ಅಪರಾಧಗಳ ಜೊತೆಗೆ ಪುರಾಣದ ವಿಚಾರಗಳನ್ನು ಸೇರಿಸಲಾಗಿತ್ತು. ಮೊದಲ ಸೀಸನ್​ನಲ್ಲಿ ‘ಅಸುರ’ನ ಹುಡುಕಾಟ ನಡೆದಿತ್ತು. ಎರಡನೇ ಪಾರ್ಟ್​​ನಲ್ಲೂ ಅದು ಮುಂದುವರಿದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ‘ಅಸುರ್ 2’  (Asur 2) ಸರಣಿ ಜೂನ್ 1ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.

‘ಅಸುರ್​’ ಚಿತ್ರದಲ್ಲಿ ಅರ್ಷದ್ ವರ್ಸಿ, ಬರುಣ್ ಸೋಬ್ತಿ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸರಣಿ ಕೊಲೆಗಳು ನಡೆಯುತ್ತಿರುತ್ತವೆ. ಇದೆಲ್ಲವನ್ನೂ ಮಾಡುತ್ತಿರುವುದು ಅಸುರ ಅನ್ನೋದು ಗೊತ್ತಾಗುತ್ತದೆ. ಈ ಅಸುರ ಯಾರು ಎಂಬುದನ್ನು ಹುಡುಕಿ ಹೊರಡುತ್ತಾನೆ ನಿಖಿಲ್ ನಾಯರ್ (ಬರುಣ್ ಸೋಬ್ತಿ). ಆತ ಫಾರೆನ್ಸಿಕ್​ ಎಕ್ಸಪರ್ಟ್. ನಿಖಿಲ್​ಗೆ ಧನಂಜಯ್ ರಜಪೂತ್ (ಅರ್ಷದ್) ಸಹಕಾರವೂ ಸಿಗುತ್ತದೆ. ಆದರೆ, ಅಸುರ ಸಿಗುವುದಿಲ್ಲ. ಎರಡನೇ ಪಾರ್ಟ್​ನಲ್ಲೂ ಅಸುರನ ಹುಡುಕಾಟ ಮುಂದುವರಿದಿದೆ.

‘ಅಸುರ್ 2’ ಟ್ರೇಲರ್ ಸಾಕಷ್ಟು ಸಸ್ಪೆನ್ಸ್​ನಿಂದ ಕೂಡಿದೆ. ಕಥೆಯಲ್ಲಿ ಪುರಾಣ ಸೇರಿಸಲಾಗಿದೆ. ಈಗಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ವೆಬ್ ಸೀರಿಸ್ ಮಾಡಲಾಗಿದೆ. ಇಲ್ಲಿಯೂ ಡಿಜಿಟಲ್ ವಾರ್​ ಇದೆ. ಈ ಸರಣಿ ನೋಡಲು ಸಿನಿಪ್ರಿಯರು ಕಾದಿದ್ದಾರೆ. ಅಸುರ ಯಾರು ಎಂಬುದು ತಿಳಿಯಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಚಿರಂಜೀವಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ, ಕನ್ನಡದಲ್ಲೂ ಸಿನಿಮಾ ಮಾಡಿದ್ದ ನಿರ್ದೇಶಕ ಕೆ. ವಾಸು ನಿಧನ

ಕಳೆದ ಬಾರಿ ‘ಅಸುರ್’ ವೂಟ್​ನಲ್ಲಿ ಲಭ್ಯವಿತ್ತು. ಈ ಬಾರಿ ‘ಜಿಯೋ ಸಿನಿಮಾಸ್’ ಮೂಲಕ ಪ್ರಸಾರ ಕಾಣಲಿದೆ. ಇಷ್ಟು ದಿನ ಜನರು ಐಪಿಎಲ್​ನಲ್ಲಿ ಬ್ಯುಸಿ ಇದ್ದರು. ಈ ಕಾರಣಕ್ಕೆ ಐಪಿಎಲ್ ಮುಗಿದ ಬಳಿಕ ‘ಅಸುರ್ 2’ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ